ತರುಣ್ ಸುಧೀರ್ ಪತ್ನಿ ಸೋನಲ್ ತಮ್ಮ ಎಷ್ಟು ದೊಡ್ಡ ವ್ಯಕ್ತಿ ಗೊ ತ್ತಾ

 | 
H
ಸೋನಲ್ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದಾರೆ. ತಾಯಿಯೇ ಅವರನ್ನು ತಂದೆಯ ಸ್ಥಾನದಲ್ಲಿ ನಿಂತು ಬೆಳೆಸಿರುವುದು. ಸೋನಲ್ ಗೆ ಇಬ್ಬರು ಅಕ್ಕಂದಿರಿದ್ದಾರೆ. ಆದರೆ ಅಣ್ಣ-ತಮ್ಮ ಯಾರೂ ಇಲ್ಲ. ಹೀಗಾಗಿ ಸೋನಲ್ ಮದುವೆಯಲ್ಲಿ ತಂದೆ-ತಾಯಿ ಸ್ಥಾನದಲ್ಲಿ ನಿಂತು ಅಕ್ಕ-ಬಾವ ಮದುವೆ ಮಾಡಿಸಿಕೊಟ್ಟಿದ್ದಾರೆ.
ಸೋನಲ್ ಅಕ್ಕನ ಗಂಡ ಬಾವ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಮೊದಲು ಪ್ರಸಾರವಾಗುತ್ತಿದ್ದ ಅಗ್ನಿ ಸಾಕ್ಷಿ ಧಾರವಾಹಿಯ ಕಿಶೋರ್ ಪಾತ್ರಧಾರಿಯಾಗಿ ಜನರ ಗಮನ ಸೆಳೆದಿದ್ದ ಕರಾವಳಿ ಮೂಲದ ನಟ ಅಮಿತ್ ರಾವ್. ಸೋನಲ್ ಅಕ್ಕನ ಗಂಡ ಅಮಿತ್ ಎಂದು ಬಹುಶಃ ಹಲವರಿಗೆ ಗೊತ್ತೇ ಇಲ್ಲ.
ನಿನ್ನೆ ಸೋನಲ್ ತಂದೆಯ ಸ್ಥಾನದಲ್ಲಿ ನಿಂತು ಅವರೇ ಕನ್ಯಾದಾನ ಮಾಡಿದ್ದಾರೆ. ಅಮಿತ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮದೇ ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋವನ್ನೂ ಹೊಂದಿದ್ದಾರೆ. ಅಲ್ಲದೆ ಈಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯಲ್ಲೂ ವಿಲನ್ ಪಾತ್ರ ಮಾಡುತ್ತಿದ್ದಾರೆ.
ಇನ್ನು ಕಾಟೇರ ಸಿನಿಮಾ ಸಮಯದಲ್ಲಿ ನಾನು, ಸೋನಲ್ ಹೆಚ್ಚು ಮಾತನಾಡಲು ಆರಂಭಿಸಿದೆವು. ಆಗ ಒಬ್ಬರನ್ನು ಒಬ್ಬರು ಹೆಚ್ಚು ಅರ್ಥ ಮಾಡಿಕೊಂಡೆವು. ಬಳಿಕ ಮದುವೆ ಆಗಲು ನಿಶ್ಚಯಿಸಿದೆವು ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಇಬ್ಬರು ಹೇಳಿದ್ದರು. ಇನ್ನು ಈ ಹಿಂದೆ ಕೆಲ ಸಂದರ್ಶನಗಳಲ್ಲಿ ನಟಿ ಸೋನಲ್ ತಮ್ಮ ಕ್ರಶ್ ಹಾಗೂ ಬ್ರೇಕ್‌ಅಪ್ ಬಗ್ಗೆ ಮಾತನಾಡಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.