ಪಕ್ಕದ್ ಮನೆ ಆಂಟಿಗೆ ಕಣ್ಣಿಟ್ಟ ಗಂಡ' ಆ ಟದ ಸಮಯದಲ್ಲಿ ಕದ್ದು ನೋಡಿದ ಸ್ವಂತ ಪತ್ನಿ
Aug 15, 2024, 18:46 IST
|
ಜಗತ್ತು ಬದಲಾಗುತ್ತಿದೆ ಅನ್ನುತ್ತಿರೋದು ಸುಮ್ಮನೆ ಅಲ್ಲ ಕಣ್ರೀ ಸೋಶಿಯಲ್ ಮೀಡಿಯಾದಲ್ಲಿ ಅಕ್ರಮ ಸಂಬಂಧದ ವೇಳೆ ಸಿಕ್ಕಿ ಬೀಳುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಮಾಜಿ ಸುಂದರಿ ವೈಜಾಗ್ ನಕ್ಷತ್ರರವರು ತನ್ನ ಪತಿಯು ಬೇರೊಬ್ಬ ಮಹಿಳೆಯೊಂದಿಗೆ ಇರುವಾಗಲೇ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಕಳೆದ ಕೆಲವು ವರ್ಷಗಳಿಂದ ವಿವಾಹದ ನಂತರ ಸಂಬಂಧವನ್ನು ಹೊಂದುತ್ತಿರುವವರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಇದೀಗ ಮಾಜಿ ಸುಂದರಿ ವೈಜಾಗ್ ನಕ್ಷತ್ರರವರ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೌದು, ತನ್ನ ಪತಿಯು ಬೇರೊಬ್ಬಳ ಜೊತೆಗೆ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು ಮೇ 31 ರಂದು ವಿಶಾಖಪಟ್ಟದಲ್ಲಿರುವ ಶೂಟಿಂಗ್ ಕಚೇರಿಯಲ್ಲಿ ತೇಜಾರವರು ಬೇರೊಬ್ಬ ಮಹಿಳೆಯ ಜೊತೆಗೆ ಇರುವುದನ್ನು ತಿಳಿಯುತ್ತಿದ್ದಂತೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ತೆರಳಿ ನಕ್ಷತ್ರರವರು ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವಿಡಿಯೋದಲ್ಲಿ ನಕ್ಷತ್ರರವರು ವ್ಯಕ್ತಿಯೊಬ್ಬನಿಗೆ ಕಚೇರಿಯ ಬಾಗಿಲು ತೆರೆಯಲು ಹೇಳುತ್ತಿರುವುದನ್ನು ಕಾಣಬಹುದು.
ಕೊನೆಗೆ ತಾನೇ ಬಾಗಿಲನ್ನು ತಳ್ಳಿ ಒಳಗೆ ಹೋದ ನಕ್ಷತ್ರರವರು ಪತಿಯ ಜೊತೆಗೆ ಇದ್ದ ಮಹಿಳೆಯ ಮೇಲೆ ಸಿಕ್ಕಸಿಕ್ಕ ವಸ್ತುಗಳನ್ನು ಬಿಸಾಡಿದ್ದಾರೆ. ಪತಿಯು ಜೋರಾಗಿ ಮಾತನಾಡಲು ಶುರು ಮಾಡುತ್ತಿದ್ದಂತೆ ಪತಿಗೆ ಕಪಾಳಮೋಕ್ಷ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದಲ್ಲದೇ, ತೇಜಾ ವಿಚ್ಛೇದನ ನೀಡದೆ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ಮಾಜಿ ಸುಂದರಿ ವೈಜಾಗ್ ಆರೋಪಿಸಿದ್ದಾರೆ.