ನನ್ನ ಈ ಮುಖ ನೋಡಿ ನಗುವವರೆ ಜಾಸ್ತಿ, ದೇವರು ಕೊಟ್ಟಿದ್ದನ್ನು ನಾನು ಸ್ವೀಕರಿಸಿದ್ದೇನೆ ಅಷ್ಟೇ; ರಾಜ್ಕುಮಾರ್ ಮೊಮ್ಮಗ
May 6, 2025, 12:16 IST
|

ಈ ನಡುವೆ ಷಣ್ಮುಖ ಗೋವಿಂದರಾಜ್ ಅವರನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ಆ ಬಗ್ಗೆ ಷಣ್ಮುಖ ಮಾತನಾಡಿದ್ದಾರೆ. ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿರುವ ಷಣ್ಮುಖ, ಟ್ರೋಲ್ ಮಾಡುವವರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನನ್ನ ಆಕಾರದ ಬಗ್ಗೆ, ಹಾವಭಾವದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಾನು ಇರೋದು ಹೀಗೆ, ದೇವರು ಸೃಷ್ಟಿ ಅದು. ಒಳ್ಳೆದು, ಕೆಟ್ಟದು ಎರಡೂ ಇರುತ್ತದೆ. ಎಲ್ಲವನ್ನೂ ನಾವು ತೆಗೆದುಕೊಳ್ಳಬೇಕಾಗುತ್ತದೆ. ಕೆಲವರು ನನಗೆ ಪಾಸಿಟಿವ್ ಆಗಿಯೂ ಫೀಡ್ ಬ್ಯಾಕ್ ಕೊಟ್ಟಿದ್ದಾರೆ. ನನ್ನ ನಟನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಿಳಿಸಿದ್ದಾರೆ. ನನ್ನ ತಂದೆ ಕೂಡ ಕೆಲ ಸಲಹೆಗಳನ್ನು ಕೂಡ ನೀಡಿದ್ದಾರೆ ಎಂದು ಷಣ್ಮುಖ ಗೋವಿಂದರಾಜ್ ಹೇಳಿದ್ದಾರೆ.
ನಿಂಬಿಯಾ ಬನಾದ ಮ್ಯಾಗ ಸಿನಿಮಾದ ಇಂಟರ್‌ವಲ್‌ನಲ್ಲಿ ಒಂದು ಸೀನ್ ಇದೆ, ನಾನಲ್ಲಿ ಭಯ ಪಡಬೇಕಿತ್ತು. ಅದನ್ನು ನೋಡಿದ ನನ್ನ ಸ್ನೇಹಿತೊಬ್ಬರು, ಆ ಸೀನ್ ಅನ್ನು ನೀನು ಇನ್ನೂ ಎಫೆಕ್ವೀವ್ ಆಗಿ ಮಾಡಬಹುದಾಗಿತ್ತು, ಆ ಭಯ ಮುಖದಲ್ಲಿ ಇನ್ನೂ ಜಾಸ್ತಿ ಕಾಣಬೇಕಿತ್ತು ಎಂದು ಸಲಹೆ ನೀಡಿದರು. ಇಲ್ಲಿ ಪರ್ಫೆಕ್ಟ್ ಅಂತ ಯಾರೂ ಇಲ್ಲ.ಎಂದು ಷಣ್ಮುಖ ಹೇಳಿದ್ದಾರೆ.ಟ್ರೋಲ್ ಅನ್ನೋದನ್ನು ಸಿನಿಮಾಗೆ ಬಂದಾಗಿನಿಂದ ಅಲ್ಲ, ಯಾವಾಗಿನಿಂದಲೋ ನೋಡ್ತಾನೇ ಇದ್ದೇನೆ.
ಸ್ಕೂಲ್ ಟೈಮ್‌ನಲ್ಲೂ ನನ್ನನ್ನು ರೇಗಿಸುತ್ತಿದ್ದರು. ಆಗ ಬೇಜಾಗುತ್ತಿತ್ತು, ಈಗಲೂ ಬೇಜಾರಾಗುತ್ತದೆ. ಆದರೆ ಈಗ ಅಭ್ಯಾಸ ಆಗಿದೆ, ಇದು ಜೀವನದ ಒಂದು ಭಾಗ ಆಗಿದೆ. ಸ್ಟಾರ್ ಕುಟುಂಬದಲ್ಲಿ ಇರುವಾಗ, ಟ್ರೋಲ್ ಅನ್ನೋದು ಒಂದು ಭಾಗವಾಗಿ ಬರುತ್ತದೆ. ಅದನ್ನು ಸ್ವೀಕಾರ ಮಾಡಬೇಕು ಎಂದು ನನ್ನ ಹೆಂಡತಿ ಕೂಡ ಹೇಳುತ್ತಿರುತ್ತಾಳೆ. ಆದರೆ ಹೆಂಡತಿಗೂ ಬೇಜಾರಾಗುತ್ತಿರುತ್ತದೆ. ತೇಗಳುವವರು ಇರುವಾಗ, ಪ್ರೀತಿ ಮಾಡುವವರು ಇರುತ್ತಾರೆ. ತಲೆ ಕೆಡಿಸಿಕೊಳ್ಳಬೇಡ ಎಂದು ಅವಳಿಗೆ ಹೇಳುತ್ತಿರುತ್ತೇನೆ ಎನ್ನುತ್ತಾರೆ ಷಣ್ಮುಖ ಗೋವಿಂದರಾಜ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,20 May 2025