ಸಾಕಷ್ಟು ಬ್ರೇಕಪ್ ಆಗಿದೆ, ಇದೀಗ ನನ್ನ ಬಳಿ ಏನೂ ಉಳಿದಿಲ್ಲ; ಅಮೃತ ಅಯ್ಯಂಗಾರ್
Feb 20, 2025, 17:18 IST
|

ಲವ್ ಮಾಕ್ಟೇಲ್', 'ಪಾಪ್‌ಕಾರ್ನ್ ಮಂಕಿ ಟೈಗರ್', 'ಬಡವ ರಾಸ್ಕಲ್' ರೀತಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದ್ದವರು ಅಮೃತಾ ಅಯ್ಯಂಗಾರ್. ಕಳೆದ ವರ್ಷ 'ಅಬ್ಬಬ್ಬಾ' ಹಾಗೂ 'ಜೀಬ್ರಾ' ಚಿತ್ರಗಳಲ್ಲಿ ನಟಿಸಿ ಗೆದ್ದಿದ್ದರು. ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಪಾಕ್‌ಕಾಸ್ಟರ್‌ನಲ್ಲಿ ಅಮೃತಾ ಭಾಗಿ ಆಗಿದ್ದಾರೆ. ಹಾಗೂ ತಮ್ಮ ಜೀವನದ ಹಲವು ಅನುಭವ ಹಂಚಿಕೊಂಡಿದ್ದಾರೆ.
ತಮ್ಮ ವೈಯಕ್ತಿಕ ಜೀವನ, ಸಿನಿಮಾ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಖ್ಯವಾಗಿ ತಮ್ಮ ಬಾಲ್ಯ, ತಂದೆ- ತಾಯಿ ದೂರಾಗಿದ್ದು ಸಿಂಗಲ್ ಪೇರೆಂಟಿಂಗ್‌ನಲ್ಲಿ ಬೆಳೆದಿದ್ದು ಹೀಗೆ ಸಾಕಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಂದೆ- ತಾಯಿ ದೂರಾಗಿದ್ದು ಯಾಕೆ? ತಾಯಿ ಒಬ್ಬೊಂಟಿಯಾಗಿ ತನ್ನನ್ನು ಸಾಕಿ ಸಲಹಿದ ಬಗ್ಗೆಯೂ ಅಮೃತಾ ಮಾತನಾಡಿದ್ದಾರೆ.
ಇನ್ನು ನಟಿ ಅಮೃತಾ ಅಯ್ಯಂಗಾರ್ ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟೀವ್ ಆಗಿದ್ದಾರೆ. ಡಾಲಿ ಧಂಜಯ್ ಹಾಗೂ ಅಮೃತಾ 4 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ. ಇಬ್ಬರೂ ಮದುವೆ ಆಗುತ್ತಾರೆ ಎಂದು ಕೆಲವರು ಭಾವಿಸಿದ್ದರು. ಅದು ಸುಳ್ಳಾಗಿದೆ.
ಇತ್ತೀಚೆಗೆ ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಸಂದರ್ಶನ ಕಾರ್ಯಕ್ರಮದಲ್ಲಿ ಅಮೃತಾ ಬಹಿರಂಗವಾಗಿಯೇ ಈ ಬಗ್ಗೆ ಮಾತನಾಡಿದ್ದಾರೆ. ನಾವಿಬ್ಬರು ಒಳ್ಳೆ ಸ್ನೇಹಿತರು. ಹುಡುಗ- ಹುಡುಗಿ ಕ್ಯಾಷುವಲ್ ಸ್ನೇಹಿತರಾಗಿ ಇರುವುದು ತಪ್ಪಾ? ದಕ್ಷಿಣದಲ್ಲಿ ಮಾತ್ರ ಹೀಗೆ. ಬಾಲಿವುಡ್‌ನಲ್ಲಿ ಹೀಗೆ ಇಲ್ಲ, ಒಟ್ಟಿಗೆ ನಟಿಸಿ ಹಿಟ್ ಪೇರ್ ಎನಿಸಿಕೊಳ್ಳುವುದು ಇಷ್ಟ. ಒಟ್ಟಿಗೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದರೆ ಜನ ಹೀಗೆ ಅಂದುಕೊಳ್ಳುವುದು ಸಹಜ ಎಂದಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.