ಎಲ್ಲರ ಮುಂದೆಯೇ ಮಂಗಳೂರಿನ ಬ್ಯಾಂಕ್ ದರೋಡೆ ಮಾಡಿದ ಕಳ್ಳ; 24 ಗಂಟೆ ಕಳೆದರೂ ಪೊಲೀಸರಿಗೆ ಹಿಡಿಯಲು ಸಾಧ್ಯವಾಗಿಲ್ಲ
Jan 18, 2025, 12:40 IST
|

ಗ್ಯಾಂಗ್ ನಲ್ಲಿ ಆರು ಜನರಿದ್ದು, ಐವರು ಬ್ಯಾಂಕ್ ಗೆ ನುಗ್ಗಿ ಓರ್ವ ರಸ್ತೆಯಲ್ಲಿದ್ದ. ಪಿಸ್ತೂಲು ಮತ್ತು ತಲವಾರು ತೋರಿಸಿದ ಗ್ಯಾಂಗ್ ಬ್ಯಾಂಕ್ ನಿಂದ ಸುಮಾರು ಐದು ಲಕ್ಷ ರೂ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದೆ. ಒಟ್ಟು ಹತ್ತು ಕೋಟಿ ರೂ ಮೌಲ್ಯದ ದರೋಡೆ ಮಾಡಲಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಕೆ.ಸಿ.ರೋಡು ಜಂಕ್ಷನ್ ನಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ಕಾರಣ ಜನಸಂಚಾರ ವಿರಳವಾಗಿತ್ತು. ಇದೇ ಸಮಯ ನೋಡಿಕೊಂಡು ದರೋಡೆಕೋರರ ಗುಂಪು ಬ್ಯಾಂಕ್ ಗೆ ದಾಳಿ ನಡೆಸಿದೆ.
ಬ್ಯಾಂಕ್ ಕಚೇರಿ ಮೊದಲ ಮಹಡಿಯಲ್ಲಿದೆ. ಕಟ್ಟಡದ ಕೆಳಗಿನ ಭಾಗದಲ್ಲಿದ್ದ ಬೇಕರಿಯಲ್ಲಿ ನಾಲ್ಕು ವಿದ್ಯಾರ್ಥಿಗಳು ತಿಂಡಿ ತಿನ್ನುತ್ತಿದ್ದರು. ಬ್ಯಾಂಕ್ ನ ಗಲಾಟೆ ಕೇಳಿ ಮೊದಲ ಮಹಡಿಗೆ ಬಂದ ವಿದ್ಯಾರ್ಥಿಗಳಿಗೆ ಆಗಂತುಕರು ಪಿಸ್ತೂಲು ತಲವಾರ್ ತೋರಿಸಿ ಓಡಿಸಿದ್ದಾರೆ. ಅಗ ಕೆಳಕ್ಕೆ ಬಂದ ಹುಡುಗರು ಬೊಬ್ಬೆ ಹಾಕಿದ್ದಾರೆ.ದರೋಡೆ ನಡೆಸಿ ಹಳೆಯ ಪೀಯಾಟ್ ಕಾರಿನಲ್ಲಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ. ದರೋಡೆಕೋರರು ಕನ್ನಡ ಮಾತನಾಡುತ್ತಿದ್ದರು ಎನ್ನಲಾಗಿದೆ.
ಇನ್ನು ವಿಧಾನಸಭಾಧ್ಯಕ್ಷ, ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.ಕೆಲ ವರ್ಷಗಳ ಹಿಂದೆ ಇದೇ ಬ್ರ್ಯಾಂಚ್ ನಲ್ಲಿ ದರೋಡೆಯಾಗಿತ್ತು. ಆಗ ಬ್ಯಾಂಕ್ ಬೇರೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಬಳಿಕ ನಡೆದ ತನಿಖೆಯಲ್ಲಿ ಆಗಿನ ಬ್ಯಾಂಕ್ ನಿರ್ದೇಶಕರ ಪತಿ ದರೋಡೆಯಲ್ಲಿ ಶಾಮೀಲಾಗಿ ಗೊತ್ತಾಗಿ ಬಂಧನಕ್ಕೊಳಗಾಗಿದ್ದರು. ಆದರೀಗ ಮತ್ತೊಮ್ಮೆ ಅಂತಹದೇ ಘಟನೆ ನಡೆದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,13 Mar 2025