ಹುಲಿ ಉಗುರಿನ ಕೇ.ಸ್, ಸಂಬರಗಿ ಬೈದಿದ್ದು ಯಾರಿಗೆ ಗೊತ್ತಾ

 | 
ರರ

 ಹುಲಿ ಉಗುರು ಪ್ರಕರಣದಲ್ಲಿ ಕನ್ನಡ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ 10 ಸ್ಪರ್ಧಿಯಾಗಿದ್ದ  ವರ್ತೂರು ಸಂತೋಷ್ ಬಂಧನ ಬಳಿಕ ಸ್ವಾಮೀಜಿ, ಸೆಲೆಬ್ರಿಟಿ, ರಾಜಕಾರಣಿಗಳು ಧರಿಸಿರುವ ಬಗ್ಗೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹುಲಿ ಉಗುರು ಪ್ರಕರಣ ಇದೀಗ ಕಾಂಗ್ರೆಸ್ ಕೊರಳಿಗೆ ಕೈಹಾಕಿದೆ.

ಹೌದೂ ಕನ್ನಡ ಪರ ಹೋರಾಟಗಾರ ಹಿಂದೂ ಸಂಘಟನೆಗಳ ಕಾರ್ಯಕರ್ತ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರಗಿ ಈ ಕುರಿತಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಹೌದು ಇಷ್ಟು ದಿನ ಅಧಿಕಾರಿಗಳೇನು ಮಲಗಿದ್ದರಾ? ಇದೀಗ ಬಂದು ಹಿಂದೂ ಕಾರ್ಯಕರ್ತರ ಮೇಲೆ ಇಂತಹ ಮಸಲತ್ತು ಮಾಡಲು ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ಹಲ್ಲು, ಚರ್ಮ, ಕೊಂಬು ಹಾಗೂ ಇತರೆ ಅಂಗಗಳ ಬಳಕೆ ಮಾಡಿರುವುದು ಬಯಲಾಗಿ ಶಿಕ್ಷೆಗೆ ಒಳಗಾಗಿರುವುದು ಗೊತ್ತೆ ಇರುವ ವಿಚಾರ. ಈಗ ರಾಜ್ಯದಲ್ಲೂ ನಡೆಯುತ್ತಿರುವ ವಿದ್ಯಾಮಾನಗಳಲ್ಲಿ ಹುಲಿ ಉಗುರು ಬಳಕೆ ಮಾಡಿ ಜನರಲ್ಲಿ ಆಕರ್ಷಣೆ ಉಂಟು ಮಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ಬಂಧನಗಳಾಗಿವೆ. ಇನ್ನಷ್ಟು ಬಂಧನದ ಸಾಧ್ಯತೆಗಳನ್ನು ಅವರು ನಿರಾಕರಣೆ ಮಾಡಲಿಲ್ಲ. 

ಬದಲಿಗೆ ನೆಲದ ಕಾನೂನಿನಂತೆ ಕ್ರಮ ಜರುಗುಸಲಾಗುವುದು ಎಂದೆನ್ನುತ್ತಾರೆ ಆದರೆ ಬಂಧಿಸುವುದು ಹಿಂದೂ ವಾದಿ ವರ್ತೂರ್ ಸಂತೋಷ್ ಅವರನ್ನೂ ಹಾಗೂ ಬಿಜೆಪಿಯ ಮುಖಂಡ ನಟ ಜಗ್ಗೇಶ್ ಅವರನ್ನ ಹಾಗೂ ಸುಮಲತಾ ಅವರನ್ನು ಬೆಂಬಲಿಸುವ ದರ್ಶನ್ ಹಾಗೂ ರಾಕ್ ಲೈನ್ ವೆಂಕಟೇಶ್ ಹಾಗೂ ಬಿಜೆಪಿಯ ಪರ ಗುರುತಿಸಿಕೊಂಡ ವಿನಯ್ ಗುರೂಜಿ ಅವರೇ ಕಾಂಗ್ರೆಸ್ ಅವರ ಮೂಲ ಟಾರ್ಗೆಟ್ ಎಂದು ಕಿಡಕಾರಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.