ಕಂಠಪೂರ್ತಿ ಕುಡಿದು ನಡು ಬೀದಿಯಲ್ಲಿ ಜಗಳ ಮಾಡಿಕೊಂಡ ಟಿಕ್ ಟಾಕ್ ಸ್ಟಾರ್

 | 
ಸಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಕಂಡ ಕಂಡಲ್ಲಿ ರೀಲ್ಸ್ ಮಾಡುವುದು ಸಾಮಾನ್ಯ ಎನಿಸಿದೆ. ಸಾರ್ವಜನಿಕ ಸ್ಥಳ ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಬಸ್‌, ಮೆಟ್ರೋ, ರಸ್ತೆ ರೈಲುಗಳಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ರೀಲ್ಸ್ ಮಾಡುತ್ತಾರೆ. ಇದರಿಂದ ಕೆಲವೊಮ್ಮೆ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗುತ್ತಾರೆ. 

ಅಲ್ಲದೇ ತಾವೇ ಹೀರೋಗಳಂತೆ ಬೀಗುತ್ತಾರೆ ಹೌದು ಅದೇ ರೀತಿ ಯೂಟ್ಯೂಬ್ ಅಲ್ಲಿ ಮೋಜ್ ನಿಶಾ ನಿಖಿಲ್ ಅವರ ಸಾಕಷ್ಟು ಕಾಮಿಡಿ ವಿಡಿಯೋಗಳಿದ.ಅಲ್ಲದೆ ಈಗಾಗಲೇ ನಿಶಾ ನಿಖಿಲ್ ವಲೋಗ್ಸ್ ಎಂದೇ ಹೆಸರುವಾಸಿಯಾಗಿರುವ ಇವರು ಮೂರು ಲಕ್ಷಕ್ಕೂ ಮೀರಿದ ಅಭಿಮಾನಿಗಳನ್ನು ಹೊಂದಿದ್ದಾರೆ. ಹೌದು ಅಣ್ಣ ತಂಗಿ ಇಬ್ಬರೂ ಸೇರಿ ಹೊಸ ಹೊಸ ವಿಡಿಯೋ ಮಾಡಿ ವಾರದಲ್ಲಿ ಮೂರ್ನಾಲ್ಕು ಬಾರಿ ಹರಿಬಿಡುತ್ತಾರೆ. 

ಅದನ್ನು ಕಂಡ ಜನ ಖುಷಿಯಿಂದ ಇನ್ನಷ್ಟು ಪ್ರೋತ್ಸಾಹಿಸಿ ಕಾಮೆಂಟ್ ಮಾಡುತ್ತಾರೆ. ಎಲ್ಲವೂ ಇಷ್ಟೇ ಇದ್ದರೆ ಪರವಾಗಿರಲಿಲ್ಲ. ಆದರೆ ಇತ್ತೀಚಿಗೆ ನಿಖಿಲ್ ಕುಡಿದು ಕಾರ್ ಓಡಿಸಿದ್ದಲ್ಲದೆ ಅವರಿಗೆ ಫೈನ್ ಹಾಕಲು ಬಂದ ಪೊಲೀಸ್ ಜೊತೆ ಜೋರು ದನಿಯಲ್ಲಿ ಮಾತನಾಡಿದ್ದ. ನಾನ್ಯಾರು ಗೊತ್ತಾ? ನನ್ನ ಅಭಿಮಾನಿ ಬಳಗದ ಬಗ್ಗೆ ಗೊತ್ತಾ ಎಂದು ದೊಡ್ಡ ಹೀರೋ ಮಾದರಿಯಲ್ಲಿ ಮಾತನಾಡಿ ಪೊಲೀಸರ ಪಿತ್ತ ನೆತ್ತಿಗೇರುವಂತೆ ಮಾಡಿದ್ದಾನೆ. 

ಇದರಿಂದ ಕೋಪಗೊಂಡ ಪೊಲೀಸರು ನಿಖಿಲ್ ಅನ್ನು ಡ್ರಿಂಕ್ ಅಂಡ್ ಡ್ರೈವ್ ಕೇಸ್ ಮೇಲೆ ಬಂಧಿಸಿದ್ದಾರೆ. ಅಲ್ಲದೇ ಕೊನೆಗೆ ಕ್ಷಮೆಯಾಚಿಸಿ ನಿಖಿಲ್ ಬೇಲ್ ಮೇಲೆ ಆಚೆ ಬಂದಿದ್ದಾರೆ. ಯೂಟ್ಯೂಬ್ ನಲ್ಲಿ ವಿಡಿಯೋ ಮಾಡಿದ ಮಾತ್ರಕ್ಕೆ. ಮೋಜ್ ಅಲ್ಲಿ ನಿಮ್ಮ ವಿಡಿಯೋ ಹೆಚ್ಚು ವೀಕ್ಷಣೆ ಕಂಡ ಮಾತ್ರಕ್ಕೆ ನೀವು ಸ್ಟಾರ್ ಪಟ್ಟ ಏರುವುದಿಲ್ಲ ಎಂದು ಪೊಲೀಸರು ಬುದ್ದಿ ಹೇಳಿ ಕಳುಹಿಸಿ ಕೊಟ್ಟಿದ್ದಾರೆ ಎನ್ನಲಾಗ್ತಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.