ಬಹು ವರ್ಗಗಳ ಬಳಿಕ ಸಿಹಿಸುದ್ದಿ ಕೊಟ್ಟ ಸುನಾಮಿ ಕಿಟ್ಟಿ, ಬಿಳಿ ಚೆಲುವೆಯನ್ನು ನೋಡಿ ಫಿದಾ ಆದ ಕಿಟ್ಟಿ
Apr 18, 2025, 22:02 IST
|

ಕೋರ ಕಾಡಿನಲ್ಲಿ ನಡೆಯುವ ವಿಭಿನ್ನ ಕತೆಯಾಗಿದ್ದು, ಒರಟ ಶ್ರೀ ನಿರ್ದೇಶನ ಮಾಡಿದ್ದಾರೆ. ಪಿ. ಮೂರ್ತಿ ನಿರ್ಮಿಸಿರುವ ಈ ಚಿತ್ರದಲ್ಲಿ ಸುನಾಮಿ ಕಿಟ್ಟಿ ನಾಯಕನಾಗಿದ್ದಾರೆ. ಕೋರ ಸಿನಿಮಾ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ ಸುನಾಮಿ ಕಿಟ್ಟಿ ಇಷ್ಟು ವರ್ಷಗಳ ಕಾಲ ಸಮಯ ವ್ಯರ್ಥ ಮಾಡಿದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಕೊರಗಜ್ಜನ ಭಕ್ತನಾಗಿದ್ದು, ಸಿನಿಮಾದಲ್ಲಿ ಆದಿವಾಸಿಗಳು ಆರಾಧಿಸುವ ಕೊರಗಜ್ಜ ದೈವದ ಕತೆಯನ್ನು ಬಳಸಿಲಾಗಿದೆ. ಇದು ಶುದ್ಧ ಕಮರ್ಶಿಯಲ್ ಸಿನಿಮಾವಾಗಿದೆ. ಸಿನಿಮಾದ ಪ್ರಿವ್ಯೂ ನೋಡಿಯೇ ತೆಲುಗು ಮತ್ತು ತಮಿಳು ಭಾಷೆಗೆ ಮಾರಾಟವಾಗಿದ್ದು, ಈ ಭಾಷೆಗಳಿಗೆ ಡಬ್ ಮಾಡಲಾಗಿದೆ. ಯಾವುದೇ ಬಹುಕೋಟಿ ಸಿನಿಮಾಗಳಿಗೆ ಕಡಿಮೆಯಾಗದಂತೆ ಬಹಳ ಕಷ್ಟಪಟ್ಟು ಸಿನಿಮಾ ಚಿತ್ರೀಕರಿಸಲಾಗಿದ್ದು, ಪ್ರೇಕ್ಷಕರಿಗೆ ಖಂಡಿತಾ ನಿರಾಸೆ ಮಾಡುವುದಿಲ್ಲ ಎಂದು ಹೇಳಿದರು.
ಸುನಾಮಿ ಕಿಟ್ಟಿ ತನ್ನನ್ನು ನಾಯಕನನ್ನಾಗಿ ಮಾಡಿದ ನಿರ್ಮಾಪಕರಿಗೆ ಮತ್ತು ನಟಿಸಲು ಸಿದ್ಧತೆ ಮಾಡಿಸಿದ ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಿದರು. ನಾಯಕ ನಟಿ ಚರಿಷ್ಮಾ, ಸಹ ನಿರ್ಮಾಪಕ ಚೆಲುವರಾಜು, ಕಲಾವಿದರಾದ ಮುನಿ, ಸೌಜನ್ಯ, ರಾಜು ನಾಯಕ್, ಗಿರೀಶ್ ಕಚ್ಚೆ, ಆರ್ಯ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಂಕಲನಕಾರ ಗಿರೀಶ್ ಇದ್ದರು. ತನಿಶಾ ಕುಪ್ಪಂಡ, ರಜತ್, ಸಲಗ ಸೂರಿ, ಸಂಜಯ್ ಗೌಡ, ಎ.ಕೆ.ಮೂರ್ತಿ, ರಮೇಶ್ ಶುಭ ಕೋರಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023