ಸ್ಪಂದನಾ ಅಕಾಲಿಕ ಮ.ರಣದಿಂದ ಹೊರಬರಲಾಗದೆ ದಿನನಿತ್ಯ ದೇವರ ಭಜನೆ ಹಾಡು ಹಾಡುತ್ತಿರುವ ರಾಘು

 | 
Tt

ವಿಜಯ್ ರಾಘವೇಂದ್ರ ಪ್ರತಿಯೊಂದು ವಿಚಾರಕ್ಕೂ ತನ್ನ ಪತ್ನಿ ಸ್ಪಂದನಾ ಸಲಹೆ ಕೇಳ್ತಿದ್ರು. ಇದೀಗ ರಾಘು ಮುನ್ನಡೆಸಲು ಸ್ಪಂದನಾ ಇಲ್ಲ. ಕದ್ದ ಚಿತ್ರ ಸಿನಿಮಾ ಪ್ರಚಾರದ ವೇಳೆ ಸ್ಪಂದನಾ ನೆನಪುಗಳ ಬಗ್ಗೆ ವಿಜಯ್ ರಾಘವೇಂದ್ರ ಹಂಚಿಕೊಂಡಿದ್ದಾರೆ. ಬೆಳಗ್ಗೆ ಹಲ್ಲುಜ್ಜುವುದರಿಂದ ಹಿಡಿದು, ರಾತ್ರಿ ಮಲಗುವವರೆಗೂ ಅವಳ ನನ್ನ ಜತೆಗಿರುತ್ತಿದ್ದಳು. 

ತಮಾಷೆ ಮಾಡುವುದು, ಮಾತುಕತೆ, ಅದು ಬೇಕು, ಇದು ಬೇಡ ಎನ್ನುವ ಮಾತುಕತೆಗಳು ನಮ್ಮ ಮಧ್ಯೆ ತುಂಬಾ ಇರುತ್ತಿತ್ತು. ಇನ್ಮೇಲೆ ನನಗೆ ಅವಳ ಕಾಲ್ ಬರಲ್ಲ. ಶೂಟಿಂಗ್ ಸಮಯದಲ್ಲಿ ತಡವಾದ ಯಾಕೆ ಲೇಟ್ ಎಂದು ಕೇಳುವವರಿಲ್ಲ. ಬೇಗ ಬನ್ರೀ ಎಂದ್ರು ಹೇಳುವವರಿಲ್ಲ. ಆದರೆ, ಅವಳು ನನ್ನ ಜತೆ ಇದ್ದಷ್ಟು ದಿನ ನನಗೆ ಒಂದು ರೂಟ್ ಹಾಕಿಕೊಟ್ಟು ಹೋಗಿದ್ದಾಳೆ ಎಂದು ವಿಜಯ್ ರಾಘವೇಂದ್ರ ಹೇಳಿದ್ರು.

ನಾನು ಏನು ಮಾಡಬೇಕು, ಏನು ಮಾಡಬಾರದು ಎಲ್ಲವನ್ನೂ ನನಗೆ ಹೇಳಿಕೊಟ್ಟಿದ್ದಾಳೆ. ನನಗಾಗಿಯೇ ಒಂದು ಬ್ಲೂ ಪ್ರಿಂಟ್ ಹಾಕಿಕೊಟ್ಟಿದ್ದಾಳೆ. ಇದೀಗ ನಾನು ಅವಳು ಹಾಕಿಕೊಟ್ಟ ಹಾದಿಯಲ್ಲೇ ಸಾಗುವೆ ಎಂದು ವಿಜಯ್ ರಾಘವೇಂದ್ರ ಹೇಳಿದ್ರು. ಒಂದು ಖಾಲಿತನ ನನ್ನನ್ನು ಆವರಿಸಿದೆ. ಸದ್ಯ ಅದನ್ನು ನಿಭಾಯಿಸುವುದೇ ನನ್ನ ಮುಂದಿನ ಅತೀ ದೊಡ್ಡ ಸವಾಲಾಗಿದೆ. ನಾನು ಕಂಪ್ಲೀಟ್ ಬ್ಲಾಂಕ್ ಆಗಿದ್ದೇನೆ.

ಈ ಖಾಲಿತನದ ಜೊತೆ ಹೇಗೆ ಬದುಕುತ್ತೇನೋ ಗೊತ್ತಿಲ್ಲ ಎಂದ್ರು. ಇನ್ನು ಓಮ್ಮೊಮ್ಮೆ ಅವಳ ನೆನಪಾದಾಗ ಮೌನವಾಗಿ ಧ್ಯಾನದ ಮೊರೆ ಹೋಗುತ್ತೇನೆ. ಅವಳು ಇನ್ನಿಲ್ಲ ಎನ್ನುವ ಭಾವದಿಂದ ಹೊರಬರಬೇಕೆಂದುಕೊಂಡರು ಸಾಧ್ಯವಾಗುತ್ತಿಲ್ಲ ಎನ್ನುವುದು ದುಃಖಕರ ವಿಷಯ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.