ಬಹುದಿನಗಳ ಬಳಿಕ ಒಮ್ಮೆಲೇ ಪ್ರತ್ಯಕ್ಷವಾದ ವಿಜಯಲಕ್ಷ್ಮಿ, ಈಕೆಯ ಈ ಬಾರಿಯ ಕಥೆ ಕೇಳಿದರೆ ತಲೆ ಕೆಡುತ್ತೆ

 | 
Hx

ಮತ್ತೊಮ್ಮೆ ಸುದ್ಧಿಯಲ್ಲಿದ್ದಾರೆ ಕನ್ನಡದ ನಾಗಮಂಡಲ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ವಿಜಯಲಕ್ಷ್ಮಿ ಅವರು. ಹೌದು ತಮಿಳುನಾಡಿನ ಹೆಸರಾಂತ ರಾಜಕಾರಣಿ ಸೀಮನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಕುರಿತು ಅವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ತಮ್ಮನ್ನು ಸೀಮನ್ ಮದುವೆಯಾಗಿ ಏಳು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ಅವರು ದೂರಿನಲ್ಲಿ ಬರೆದುಕೊಂಡಿದ್ದರು.

ಹೌದು ನಿರ್ದೇಶಕ, ರಾಜಕಾರಣಿ ಸೀಮನ್ ವಿರುದ್ಧ ನಟಿ ವಿಜಯಲಕ್ಷ್ಮಿ ದೂರು ನೀಡಿದ್ದಾರೆ. ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪ ಮಾಡಿದ್ದಾರೆ. ನಟಿ ವಿಜಯಲಕ್ಷ್ಮಿ ಗ್ರೇಟರ್ ಚೆನ್ನೈನಲ್ಲಿರುವ ಪೊಲೀಸ್ ಕಮೀಷನರ್​ಗೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ 2008ರಲ್ಲಿ ಸೀಮನ್ ಅವರ ಪರಿಚಯವಾಗಿತ್ತು.

ಅದಾದ ನಂತರ ಪ್ರೀತಿಸಿ ಸಹಜೀವನ ನಡೆಸಿದ್ದೆವು ಎಂದಿದ್ದಾರೆ. ಸೀಮನ್ ನನಗೆ ವಂಚಿಸಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ. ಸಹಚರರನ್ನ ಬಿಟ್ಟು ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.2020ರಲ್ಲಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸಂಬಂಧ ತಿರುವಾನ್ಮಿಯೂರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿ ತನಿಖೆ ಮುಂದುವರಿದಿದೆ. 

ತಿರುವಳ್ಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ನಟಿ ವಿಜಯಲಕ್ಷ್ಮಿ ಹಲವು ವಿಚಾರಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದುವರೆಗೂ ಮದುವೆ ಬಗ್ಗೆ ಮಾತಾಡದ ವಿಜಯಲಕ್ಷ್ಮಿ, ನನಗೆ ಸೀಮನ್ ಜೊತೆ ಮದುವೆಯಾಗಿದೆ ಎಂದಿದ್ದಾರೆ. 
ಚೆನ್ನೈನ ಪೊಲೀಸ್ ಆಯುಕ್ತರ ಸಹಾಯ ಪಡೆದುಕೊಂಡು ದೂರು ದಾಖಲಿಸಿದ್ದ ವಿಜಯಲಕ್ಷ್ಮಿ ತಮಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಸೀಮನ್ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಷ್ಟೇ ಅಲ್ಲದೇ ನಿನ್ನೆ ಫೇಸ್ ಬುಕ್ ಲೈವ್​ಗೆ ಬಂದ ವಿಜಯಲಕ್ಷ್ಮಿ ಕಣ್ಣೀರು ಹಾಕಿದ್ದಾರೆ. ಪ್ರಭಾವಿ ರಾಜಕಾರಣಿ ಆಗಿರುವುದರಿಂದ ನ್ಯಾಯ ಸಿಗುತ್ತಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
ಈ ಘಟನೆಯ ಕುರಿತು ವಿಜಯಲಕ್ಷ್ಮಿ ಪರ ಹೋರಾಟ ಮಾಡುತ್ತಿರುವ ತಮಿಳರ್ ಮುನ್ನೆಟ್ರ ಪಡೈಯ ಅಧ್ಯಕ್ಷೆ ವೀರಲಕ್ಷ್ಮಿ ಕೂಡ ಪ್ರತಿಕ್ರಿಯೆ ನೀಡಿದ್ದು, ಹಲವಾರು ವರ್ಷಗಳಿಂದ ಈ ಕುರಿತು ಹೋರಾಟ ಮಾಡುತ್ತಿದ್ದೇವೆ. ಈ ಬಾರಿ ನ್ಯಾಯ ಸಿಗುವ ನಂಬಿಕೆ ಬಂದಿದೆ ಎಂದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.