ನಾವು ಡಿವೋರ್ಸ್ ಆಗ್ತಾ ಇದ್ದೇವೆ; ಕನ್ನಡಿಗರ ಮುಂದೆ ಬಂದು ಓಪನ್ ಹೇಳಿ‌ ಕೆ

 | 
He

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಲ್ಲಿ ಒಂದಾದ ಚಂದನ್ ಶೆಟ್ಟಿ- ನಿವೇದಿತಾ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಶಾಂತಿನಗರದ ಕೋರ್ಟ್ ನಲ್ಲಿ ನಿನ್ನೆ ಕೇಸ್ ದಾಖಲಿಸಿದ್ದರು. ಪ್ರಕರಣದ ಮೊದಲ ವಿಚಾರಣೆ ಹಿನ್ನೆಲೆಯಲ್ಲಿ ಇಬ್ಬರೂ ಇಂದು 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾದರು.

ಬಿಗ್​ ಬಾಸ್​ ಕನ್ನಡ ಸೀಸನ್​ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿ, ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು. 2017ರಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್​ ಶೆಟ್ಟಿ ಅವರು ಪ್ರಪೋಸ್​ ಮಾಡಿದ್ದರು. ಬಳಿಕ ಅವರಿಬ್ಬರು 2020 ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಬಳಿಕ ಗಿಚ್ಚಿಗಿಲಿಗಿಲಿ ಸೇರಿದಂತೆ ಹಲವು ಟಿವಿ ರಿಯಾಲಿಟಿ ಶೋಗಳಲ್ಲಿ ಈ ಜೋಡಿ ಕಾಣಿಸಿಕೊಳ್ಳುತಿತ್ತು. ಇನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಆಗಾಗ ಹೊಸ ಹೊಸ ರೀಲ್ಸ್​ ಹಂಚಿಕೊಳ್ಳುತ್ತಾರೆ. ಕೆಲವು ರೀಲ್ಸ್‌ಗಳನ್ನು ನೋಡಿ ನೆಟ್ಟಿಗರು ಗರಂ ಆಗುತ್ತಿದ್ದರು. ಕಮೆಂಟ್​ಗಳಲ್ಲಿ ಅನೇಕರು ಚಂದನ್​ ಶೆಟ್ಟಿಯ ಹೆಸರನ್ನೂ ಆಗಾಗ ಎಳೆದು ತರುತ್ತಿದ್ದರು. ಮಗು ವಿಚಾರವೇ ಅವರಿಬ್ಬರ ನಡುವಿನ ದಾಂಪತ್ಯ ಜೀವನ ಬಿರುಕುಗೊಳ್ಳಲು ಕಾರಣ ಎಂಬುದು ತಿಳಿದುಬಂದಿದೆ.

ಡಿವೋರ್ಸ್ ಪಡೆದುಕೊಂಡ ಬಳಿಕ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರೂ ಸೋಷಿಯಲ್ ಮೀಡಿಯಾಗಳಲ್ಲಿ ಪರಸ್ಪರ ಅನ್‌ಫಾಲೋ  ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಾವು ಬೇರೆ ಆಗುತ್ತಿರುವ ವಿಷಯವನ್ನು ಸಹ ಹಂಚಿಕೊಂಡಿದ್ದರು.ಡಿವೋರ್ಸ್ ಬಳಿಕ ಸಾಮಾನ್ಯವಾಗಿ ಜೋಡಿಗಳು ಜಗಳ ಆಡ್ತಾರೆ, ಮುಖ ಸಿಂಡರಿಸಿಕೊಂಡು ಹೋಗುತ್ತಾರೆ. 

ಆದರೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಫ್ರೆಂಡ್ಲಿ ಆಗಿಯೇ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಕ್ಕೆ ಹಾಜರಾದ ಈ ಜೋಡಿ ಅಕ್ಕ ಪಕ್ಕ ಕುಳಿತು ವಿಚಾರಣೆ ಎದುರಿಸಿದ್ದಾರೆ. ಡಿವೋರ್ಸ್ ಮಂಜೂರಿನ ಬಳಿಕ ಕೈ ಕೈ ಹಿಡಿದುಕೊಂಡು ತೆರಳಿದ ವಿಡಿಯೋಗಳು ಭಾರಿ ವೈರಲ್ ಆಗಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.