ಕಾಡಿ ಬೇಡಿ ಪ್ರೀತಿಸಿ ಮದುವೆಯಾದ, ಮೊದಲ ರಾತ್ರಿಯಾದ ಸ್ಪಲ್ಪ ದಿನದಲ್ಲೇ ಏನಾಯಿತು ಗೊ.ತ್ತಾ

 | 
Bgg

ಅವರಿಬ್ಬರು ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಒಂದು ವರ್ಷದ ಹಿಂದೆ ಮದುವೆ ಆಗಿದ್ದರು. ಮೂಲತಃ ತಮಿಳುನಾಡಿನ ಆ ಜೋಡಿ ಬೆಂಗಳೂರಲ್ಲಿ ವಾಸವಾಗಿತ್ತು. ಅವರಿಗೆ ಮುದ್ದಾದ ಮಗುವು ಜನಿಸಿತ್ತು. ಆದರೆ ಪ್ರೀತಿಸಿದವಳ ಉಸಿರನ್ನೇ ನಿಲ್ಲಿಸಿ ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಪತಿ ಈಗ ಜೈಲಿನಲ್ಲಿ ಬಂಧಿಯಾಗಿದ್ದಾನೆ.

ಬೆಂಗಳೂರಿನ ಯಲಹಂಕ ಉಪನಗರ 3ನೇ ಹಂತದಲ್ಲಿ ಸಂತೋಷ್‌ ಎಂಬಾತ ತನ್ನ ಪತ್ನಿ ರೇಖಾಳನ್ನು ಹತ್ಯೆ ಮಾಡಿದ್ದಾನೆ. ರೇಖಾಳ ಉಸಿರು ನಿಲ್ಲಿಸಿ, ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದ. ಕುಟುಂಬಸ್ಥರಿಗೆ ಅನುಮಾನ ಬರದಂತೆ ಸಂಶೋಷ್‌ ನಾಟಕವಾಡಲು ಮುಂದಾಗಿದ್ದ.
ರೇಖಾ ಹಾಗೂ ಸಂತೋಷ್‌ ಶಾಲೆಯಲ್ಲಿ ಇರುವಾಗಲೇ ಪ್ರೀತಿಸುತ್ತಿದ್ದರು. 

ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ, ನಂತರ ಮನೆಯವರನ್ನೆಲ್ಲ ಒಪ್ಪಿಸಿ ಮದುವೆಯಾಗಿದ್ದರು. ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ರೇಖಾ ಹಾಗೂ ಸಂತೋಷ್‌ಗೆ ಈಗ 6 ತಿಂಗಳ ಮುದ್ದಾದ ಹೆಣ್ಣು ಮಗು ಸಹ ಇದೆ. ಮದುವೆ ಆದಾಗಿನಿಂದಲೂ ಹಣಕ್ಕಾಗಿ ಸಂತೋಷ್‌ ಪೀಡಿಸುತ್ತಾ ಎನ್ನಲಾಗಿದೆ. ಹಣ, ಒಡವೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದರು. 

ಆದರೂ ಸಂತೋಷ್‌ ರೇಖಾ ಬಳಿ ಸೈಟ್ ಖರೀದಿ ಮಾಡಬೇಕು ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದ. ಇದಕ್ಕೆ ರೇಖಾ ಒಪ್ಪದಿದ್ದಾಗ ಹಲವು ಬಾರಿ ಗಲಾಟೆ ಮಾಡಿ ಸಂತೋಷ್‌ ಹೊಡೆದು ಬಡಿದು ಮಾಡಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಮತ್ತೆ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಮೂಲತಃ ತಮಿಳುನಾಡಿನ ಮೂಲದವರ ಇವರಿಬ್ಬರು ಬೆಂಗಳೂರಿನಲ್ಲೇ ನೆಲೆಸಿದ್ದರು.

ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನ ಅನಂತಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸಂತೋಷ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ. ಆರೋಪಿ ಸಂತೋಷ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ರೇಖಾ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.