ಫಯಾಜ್ ಎಂತಹ ವ್ಯಕ್ತಿಗೆ ಕರೆ ಮಾಡಿದ್ದಾನೆ ಗೊ.ತ್ತಾ; ಬೆಚ್ಚಿಬಿದ್ದ ನೇಹಾ ತಂದೆ ತಾಯಿ

 | 
Yy

ಪ್ರೀತಿ ನಿರಾಕರಿಸಿದ ಕಾರ್ಪೊರೇಟರ್​​​ ಪುತ್ರಿ ನೇಹಾ ಮಣ್ಣಲ್ಲಿ ಮಣ್ಣಾದ್ರು. ಆದರೆ ಹಾಡಹಗಲೇ ನಡೆದ ಈ ಕೃತ್ಯ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಅರೋಪಿ ಫಯಾಜ್​​​ನನ್ನ ಗಲ್ಲಿಗೇರಿಸುವಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ನೇಹಾ ಕುಟುಂಬಕ್ಕೆ  ಕರುನಾಡೇ ಬೆಂಬಲ ಸೂಚಿಸಿದೆ. ಈ ನಡುವೆ ನೇಹಾ ಕೊಲೆ ಪ್ರಕರಣದಲ್ಲಿ ಕೃತ್ಯ ನಡೆದ ಒಂದೇ ಗಂಟೆಯಲ್ಲಿ ಕೊಲೆ ಆರೋಪಿತ ಬಂಧಿಸಿದ ತಂಡಕ್ಕೆ ಕಾಪ್ ಆಫ್ ದಿ ಮಂತ್ ಅವಾರ್ಡ್​ ನೀಡಲಾಗಿದೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ನೇಹಾಳನ್ನು ಚಾಕುವಿನಿಂದ ಇರಿದು ಫಯಾಜ್ ಬರ್ಬರವಾಗಿ ಕೊಲೆ ಮಾಡಿದ್ದ. ಕೃತ್ಯ ನಡೆದ ಬಳಿಕ ಸ್ಥಳದಿಂದ ಕೂಡಲೇ ಫಯಾಜ್ ಪರಾರಿಯಾಗಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಎಸಿಪಿ ಶಿವಪ್ರಕಾಶ ನಾಯ್ಕ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ಪಿಐ ಡಿ.ಕೆ ಪಾಟೀಲ್ ರವರ ನೇತೃತ್ವ ತಂಡದಿಂದ ಆರೋಪಿ ಬಂಧನವಾಗಿತ್ತು.

ಇನ್ನು ಫಯಾಜ್ ಮೊಬೈಲ್ ಟ್ರ್ಯಾಕ್ ಮಾಡಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಒಂದೇ ಗಂಟೆಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಪೊಲೀಸ್ ತಂಡದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಪೊಲೀಸ್ ಆಯುಕ್ತರಿಂದ ಪ್ರಶಸ್ತಿ ಕೂಡ ದೊರೆತಿದೆ.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಇನ್​​​ಸ್ಟಾದಲ್ಲಿ ಪೋಸ್ಟ್ ಹಾಕಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನೇಹಾ ಹಾಗೂ ಫಯಾಜ್ ಫೋಟೋ ಹಾಕಿ ಜಸ್ಟೀಸ್ ಫೋರ್ ಲವ್ ಎಂದು ಯುವಕರು ಪೋಸ್ಟ್ ಹಾಕಿದ್ದರು. ಸಮರ್ಥನೆ ಮಾಡಿಕೊಳ್ತಾ ಇದ್ದಾರೆ ಎಂದು ಹಿಂದೂಪರ ಸಂಘಟನೆಗಳ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೋಸ್ಟ್ ಹಾಕಿದ್ದವರನ್ನ ಕರೆತಂದು ನಗರದ ವಿದ್ಯಾಗಿರಿ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

ಸಾದಿಕ್ ಇಮಾಮ್ ಸಾಬ್ ತಡಕೋಡ ಹಾಗೂ ಆದಿಲ್ ಪೊಲೀಸ್ ವಶಕ್ಕೆ ತೆಗೆದುಕೊಂಡ ಧಾರವಾಡದ ನಿವಾಸಿಗಳಾಗಿದ್ದು, ಜಸ್ಟೀಸ್ ಫಾರ್ ದಿ ಲವ್ ಎಂಬ ಪೋಸ್ಟ್ ಮಾಡಿದ್ದರಂತೆ ಹಾಗಾಗಿ ಅವರನ್ನು ಸಹ ಪೋಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.