ಮಂಗಳೂರು ಮಹೇಶ್ ಬಸ್ ಮಾಲಿಕನ ಸಾ.ವಿಗೆ ಕಾರಣ ಏನು, ಹಿಂದಿನ ದಿನ ರಾತ್ರಿ ಇದ್ದಿದ್ದು ಎಲ್ಲಿ ಗೊ.ತ್ತಾ

 | 
Jgg

ಇತ್ತೀಚಿಗೆ ಮಂಗಳೂರಿನ ಖಾಸಗಿ ಬಸ್ ನ ಮಾಲೀಕರೊಬ್ಬರು ತಾವು ಇರುವ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಣವಿತ್ತು ನೂರಾರು ಬಸ್ ಇವರ ಒಡೆತನದಲ್ಲಿತ್ತು. ಮುದ್ದಾದ ಪತ್ನಿ ಮಕ್ಕಳಿದ್ದರು. ಆದರೂ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾದರು ಏಕೆ ಎಂದು ಹಲವರಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.

ಖ್ಯಾತ ಸಾರಿಗೆ ಉದ್ಯಮಿ, ಬಸ್‌ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೇಖ ಅವರ ಪುತ್ರರಾಗಿರುವ ಪ್ರಕಾಶ್‌ ಅವರು, ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು. ಫ್ಲ್ಯಾಟ್‌ನಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದ ಅವರು ಭಾನುವಾರ ಬೆಳಗ್ಗೆ ತನ್ನ ರೂಮ್‌ಗೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೂ ಹೊರಗೆ ಬಂದಿರಲಿಲ್ಲ.

ಪತ್ನಿ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಇದರಿಂದ ಸಂಶಯಗೊಂಡು ಬಾಗಿಲು ಒಡೆದು ನೋಡಿದಾಗ ಪ್ರಕಾಶ್‌ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಪೊಲೀಸರು ಬಂದು ಗಮನಿಸಿದಾಗ ಮೃತಪಟ್ಟಿರುವುದು ಖಚಿತವಾಗಿತ್ತು.

ಖಾಸಗಿ ಬಸ್, ಟೂರಿಸ್ಟ್, ಲಾರಿ ಉದ್ಯಮದಲ್ಲಿ ಹೆಸರು ಮಾಡಿದ್ದ ಪ್ರಕಾಶ್ ಶೇಖ ಅವರು ನೂರಕ್ಕೂ ಅಧಿಕ ಬಸ್‌ಗಳನ್ನು ಹೊಂದಿದ್ದರು. ಇನ್ನು ಮಂಗಳೂರು, ಉಡುಪಿಯಲ್ಲಿ ಮಹೇಶ್ ಟ್ರಾವೆಲ್ಸ್ ಭಾರೀ ಪ್ರಸಿದ್ಧಿ ಗಳಿಸಿತ್ತು. ಮಂಗಳೂರಿನಲ್ಲಿ ತಮ್ಮದೇ ಆದ ಹೆಸರು ಗಳಿಸಿದ್ದ ಪ್ರಕಾಶ್ ಶೇಖ ಏಕಾಏಕಿ ಸಾವಿಗೆ ಶರಣಾಗಿರುವುದು ನಂಬಲು ಅಸಾಧ್ಯ ಎಂದು ಅನೇಕರು ಸಂತಾಪ ಸೂಚಿಸಿದ್ದಾರೆ. 

ಆದರೆ ಈವರೆಗೆ ಪ್ರಕಾಶ್ ಶೇಖ ಅವರ ಈ ನಿರ್ಧಾರಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ.ಆದರೆ ಕೆಲವರ ಪ್ರಕಾರ ವ್ಯಾಪಾರದಲ್ಲಿ ಬಹಳ ನಷ್ಟ ಹೊಂದಿದ್ದರು ಎನ್ನಲಾಗ್ತಿದೆ. ಈ ಕುರಿತು ಮಂಗಳೂರಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕಾಶ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ವ್ಯಾಪಾರದ ನಷ್ಟದಿಂದ ಈ ನಿರ್ಧಾರ ಕೈಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು ತನಿಖೆ ಕೈಗೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.