ಯೌವನ ಇದ್ದಾಗ ನನ್ನ ಸರಿಯಾಗಿ ಬಳಸಿಕೊಂಡು ಮೋರಿಗೆ ಎಸೆದುಬಿಟ್ಟ, ವಿಜಯಲಕ್ಷ್ಮಿ
Updated: Mar 5, 2025, 23:34 IST
|

ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ವಿಜಯಲಕ್ಷಿ ಅವರು ಬಳಿಕೆ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಹಲವು ವರ್ಷಗಳ ಬಳಿಕ ಅವರು ಕರ್ನಾಟಕಕ್ಕೆ ಮರಳಿ ಹಲವು ಸ್ಫೋಟಕ ವಿಚಾರಗಳನ್ನು ಹಂಚಿಕೊಂಡಿದ್ರು. ಈಗ ಮತ್ತೆ ಅವರು ವಿಡಿಯೋ ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ನಿರ್ದೇಶಕ ಹಾಗೂ ರಾಜಕಾರಣಿ ಸೀಮನ್ ಅವರ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಕಣ್ಣೀರಿಡುತ್ತಲೇ ಅವರಿಗೆ ಹಿಡಿಶಾಪ ಕೂಡ ಹಾಕಿದ್ದಾರೆ.
ಇತ್ತೀಚಿಗೆ ನಾಮ್ ತಮಿಳರ್ ಪಕ್ಷದ ನಾಯಕ ಸೀಮನ್ ಅವರು ನಟಿ ವಿಜಯಲಕ್ಷ್ಮಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಕೊಟ್ಟಿದ್ದರು ಎನ್ನಲಾಗಿದೆ. ವಿಜಯಲಕ್ಷ್ಮಿ ಅವರನ್ನು ವೇಶ್ಯೆಯರಿಗೆ ಹೋಲಿಸಿದ್ದರು ಎಂದೂ ವರದಿಯಾಗಿದೆ. ಈ ಬಗ್ಗೆ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ವಿಜಯಲಕ್ಷ್ಮಿ ಅವರು ನನ್ನನ್ನು ವೇಶ್ಯೆಗೆ ಹೋಲಿಸುತ್ತೀಯಾ? ನಾನು ವೇಶ್ಯೆ ಎನ್ನುವುದಕ್ಕೆ ನಿನ್ನತ್ರ ಸಾಕ್ಷಿ ಇದೆಯಾ? ನೀನು ಹೇಳಿದಂತೆ ನಾನು ವೇಶ್ಯೆ ಆಗಿದ್ದರೆ, ಈ ರೀತಿ ಇರುತ್ತಿರಲಿಲ್ಲ.
ನನ್ನ ಕಣ್ಣೀರು ನಿನ್ನನ್ನ ಸರ್ವನಾಶ ಮಾಡುತ್ತೆ, ನೋಡ್ತಾ ಇರು ನೀನು ಸರ್ವನಾಶ ಆಗ್ತೀಯ ಕಣೋ ಎಂದು ಏಕವಚನದಲ್ಲೇ ಶಾಪ ಹಾಕಿದ್ದಾರೆ.ನಾನು ವೇಶ್ಯೆನಾ? ಅದಕ್ಕೆ ಸಾಕ್ಷಿ ಇದ್ರೆ ತೋರಿಸುತ್ತೀಯಾ? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲವಾ? ನಿನಗೆ ಜನ್ಮ ನೀಡಿದ ತಾಯಿ ಕೂಡ ಒಂದು ಹೆಣ್ಣು, ನಿನಗೆ ಅಕ್ಕ ತಂಗಿ, ಹೆಂಡತಿ ಇಲ್ವಾ? ಪ್ರತಿದಿನ ನನ್ನನ್ನ ಅವಮಾನ ಮಾಡುತ್ತಲೇ ಇದ್ದೀಯ, ನೀನು ಸರ್ವನಾಶ ಆಗೋಗ್ತೀಯಾ ಎಂದು ವಿಜಯಲಕ್ಷ್ಮಿ ಅವರು ಕಣ್ಣೀರಿಡುತ್ತಲೇ ವಿಡಿಯೋದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023