ಕಾಂಗ್ರೆಸ್ ಯಾವ ಜಾತಿಗೆ ಹೆಚ್ಚು ಅವಕಾಶ ಕೊಡುತ್ತದೆ; ಇಲ್ಲಿ ಇರುವವರು ಯಾವ ಜಾ.ತಿಯವರು

 | 
Yii

ಎಲ್ಲರನ್ನೂ ಸಮಾನವಾಗಿ ಕಾಣುವ ಕಾಂಗ್ರೆಸ್ ಸರ್ಕಾರ ಯಾರಿಗೆಲ್ಲ ಟಿಕೇಟ್ ಹಂಚಿಕೆ ಮಾಡಿದೆ ಎಂದು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ. ಹಿಂದೂ ಮುಸ್ಲಿಂ ಎಂದು ಧರ್ಮಾಡೇ ಮುಖ ನೋಡದೆ. ಹಿಂದುಳಿದ ವರ್ಗ ಜಾತಿ ಎಂದೆಲ್ಲ ನೋಡದೇ ಎಲ್ಲರನ್ನೂ ಸಮಾನ ಮನಸ್ಕರು ಎಂದು ಪರಿಗಣಿಸಿ ಮಹಿಳೆಯರಿಗೂ ಸಮಾನ ಅದ್ಯತೆ ನೀಡಿ ಲೊಕಸಭಾ ಚುನಾವಣೆಗೆ ಟಿಕೆಟ್ ನೀಡಿದೆ.

ಲೋಕಸಭಾ ಚುನಾವಣೆಗೆ ಕರ್ನಾಟಕ 28 ಲೋಕಸಭಾ ಕ್ಷೇತ್ರಗಳ ಫೈಕಿ ಕಾಂಗ್ರೆಸ್‌ 24 ‌ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದ್ದು ಅವರಲ್ಲಿ 5 ರಿಂದ 6 ಜನ ಮಹಿಳೆಯರೇ ಆಗಿದ್ದಾರೆ. ಇನ್ನೂ ಕಾಂಗ್ರೆಸ್‌ ಹಲವು ಲೆಕ್ಕಾಚಾರ ಹಾಕಿಕೊಂಡು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದು, ಅದರಲ್ಲಿ ಜಾತಿ ಲೆಕ್ಕಾಚಾರ ಕೂಡ ಪ್ರಮುಖವಾಗಿದೆ. 

ಇನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಕಾಂಗ್ರೆಸ್‌ ಹೈಕಮಾಂಡ್‌ ಇದುವರೆಗೂ 24 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಅದರಲ್ಲಿ 6 ಒಕ್ಕಲಿಗ, 5 ಲಿಂಗಾಯತ, 3 ಎಸ್‌ಸಿ, 2 ಎಸ್‌ಟಿ, 2 ಕುರುಬ, ಈಡಿಗ, ಬಿಲ್ಲವ, ಬಂಟ, ರೆಡ್ಡಿ, ಮುಸ್ಲಿಂ, ಮರಾಠ ಸಮುದಾಯಕ್ಕೆ ತಲಾ ಒಂದು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿದೆ. ಇನ್ನು, ಬಿಜೆಪಿ ಇದುವರೆಗೂ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ .

ಅದರಲ್ಲಿ 8 ಲಿಂಗಾಯತ, 3 ಒಕ್ಕಲಿಗ, 2 ಎಸ್‌ಸಿ, 2 ಬ್ರಾಹ್ಮಣ, ಕ್ಷತ್ರೀಯ, ಬಂಜಾರ, ವಾಲ್ಮೀಕಿ ನಾಯಕ, ಬಂಟ, ಬಿಲ್ಲವ ಸಮುದಾಯಕ್ಕೆ ಟಿಕೆಟ್‌ ನೀಡಿದೆ.ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದೆ. ಮಹಿಳಾ ಸಬಲೀಕರಣ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಈ ಕಾರ್ಯ ಕೈಗೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.