ಈ ತಾಯಿಯ ಕೂಗು ಧರ್ಮಸ್ಥಳ ಮಂಜುನಾಥನಿಗೆ ಕೇಳುತ್ತಿಲ್ಲ ಯಾಕೆ, ಕರುಳಿನ ಕೂಗು

 | 
Jd

ಧರ್ಮಸ್ಥಳದಲ್ಲಿ ಇವತ್ತು ತಮ್ಮ ಮಗಳ ಸಾವಿಗೆ ನ್ಯಾಯ ಕೇಳಲು ಬಂದ ಸೌಜನ್ಯ ತಾಯಿ ಮತ್ತು ತಮ್ಮನ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾದ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಆ ಸಂದರ್ಭದಲ್ಲಿ ವ್ಯಕ್ತಿ ಒಬ್ಬ ಬೆರಳು ತೋರಿಸಿ ನಿನ್ನನ್ನು ನೋಡಿಕೊಳ್ಳುವೆ ಎಂದು ಕಾಲಾರ್ ಗೆ ಕೈ ಹಾಕಿದ ಪ್ರಕರಣ ನಡೆದಿತ್ತು.

ಕುಸುಮಾವತಿಯವರ ಮಗನ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾದ ವ್ಯಕ್ತಿಯ ವಿರುದ್ಧ ಬೆಳ್ತಂಗಡಿಯ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದೆ. ಸೌಜನ್ಯ ತಾಯಿ ಕುಸುಮಾವತಿ ಮತ್ತು ಸಹೋದರ ಜಯರಾಂ ದೂರಿನ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ. ನಿನ್ನೆ ಉಜಿರೆಯಲ್ಲಿ ಧರ್ಮಸ್ಥಳದ ವಿವಿಧ ಸಂಘ ಸಂಸ್ಥೆಗಳು ಮತ್ತು ಅಖಿಲ ಕರ್ನಾಟಕ ಮಂಜುನಾಥ ಸ್ವಾಮಿ ಭಕ್ತ ವೃಂದದಿಂದ ಸೌಜನ್ಯ ಹತ್ಯ ಆರೋಪಿಗಳನ್ನು ಪತ್ತೆಹಚ್ಚಬೇಕು ಮತ್ತು ಮುಖ್ಯವಾಗಿ ಧರ್ಮಸ್ಥಳದ ಕ್ಷೇತ್ರದ ಮತ್ತು ವೀರೇಂದ್ರ ಹೆಗ್ಗಡೆಯವರ ವಿರುದ್ಧದ ಅಪಮಾನವನ್ನು ನಿಲ್ಲಿಸಬೇಕು ಎನ್ನುವ ವಿಷಯವನ್ನು ಇಟ್ಟುಕೊಂಡು ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಂಬಂಧ ಭಾರಿ ಪ್ರತಿಭಟನೆಯನ್ನು ಏರ್ಪಡಿಸಲಾಗಿತ್ತು. 

ಉಜಿರೆ ಬೆಳ್ತಂಗಡಿ ವ್ಯಾಪ್ತಿಯ ಧರ್ಮಸ್ಥಳಕ್ಕೆ ಸಂಬಂಧಪಟ್ಟ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಶಾಲೆಗಳು ಕೂಡ ರಜೆ ಘೋಷಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. 
ಈ ಸಂದರ್ಭ, ಸೌಜನ್ಯ ತಾಯಿ, ತಮ್ಮ, ಸಹೋದರಿಯರು ಕೂಡಾ ನ್ಯಾಯ ಕೇಳುವುದಕ್ಕಾಗಿ ಅಲ್ಲಿನ ಸಭೆಗೆ ತೆರಳುತ್ತಾರೆ. ಸೌಜನ್ಯ ತಾಯಿ ವೇದಿಕೆ ಹತ್ತಲು ಮುಂದಾಗುತ್ತಾರೆ. ಆಗ ಆಯೋಜಕರು ಅದನ್ನು ತಡೆಯುತ್ತಾರೆ. 

ಆಗ ಅಲ್ಲಿದ್ದ ಧಡಿಯ ವ್ಯಕ್ತಿಯೊಬ್ಬ, ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಅಂಗೀಕ ಭಾವ ಪ್ರದರ್ಶಿಸಿ ಸೌಜನ್ಯ ತಾಯಿ ಹಾಗೂ ತಮ್ಮನ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾಗಿದ್ದಾನೆ. ಈಗ ಈ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿಡಿಯೋಗಳಲ್ಲಿ ಕಂಡುಬರುವಂತೆ ಆತ ಕುಸುಮಾವತಿಯವರ ಮಗನ ಕಾಲರ್ ಗೆ ಕೈ ಹಾಕಿದ್ದ ಎನ್ನಲಾಗಿದೆ. ಒಟ್ಟಿನಲ್ಲಿ ಸೌಜನ್ಯಾ ಪರ ನ್ಯಾಯ ಕೇಳಲು ಹೋದ ಸೌಜನ್ಯಾ ತಮ್ಮನ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.