ಬಿಗ್ ಬಾಸ್.ಗೆ ಮಂಗಳಮುಖಿ ಬರುತ್ತಾರಾ, ಈ ಬಾರಿಯ ಬಿಗ್ ಬಾಸ್ ಹೇಗಿರುತ್ತದೆ ಗೊತ್ತಾ

 | 
Ndhshsh

ಅಕ್ಟೋಬರ್ 8ರಿಂದ 'ಬಿಗ್ ಬಾಸ್ ಕನ್ನಡ ಸೀಸನ್ 10' ಶೋ ಶುರುವಾಗಲಿದೆ ಎಂಬುದಂತೂ ಖಾತರಿಯಾಗಿದೆ. ಕಲರ್ಸ್ ಕನ್ನಡ ವಾಹಿನಿಯ 'ಅನುಬಂಧ 2023' ಅವಾರ್ಡ್ಸ್ ಸಮಾರಂಭದಲ್ಲಿ ಬಿಗ್ ಬಾಸ್ ಯಾವಾಗ ಶುರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಗಾದರೆ ಯಾರು ಯಾರು ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬ ಪ್ರಶ್ನೆ ಏಳೋದು ಸಹಜ. 

ಮೊದಲ ಬಾರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೊದಲ ಸ್ಪರ್ಧಿಯನ್ನು ಕಲರ್ಸ್ ವಾಹಿನಿ ರಿವೀಲ್ ಮಾಡಿದೆ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಕಲರ್ಸ್ ವಾಹಿನಿಯಾಗಲೀ, ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಸ್ಪರ್ಧಿಗಳಾಗಲೀ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವ ವಿಚಾರವನ್ನು ರಿವೀಲ್ ಮಾಡೋದಿಲ್ಲ. ಸ್ಪರ್ಧಿಗಳು ಯಾರು ಎನ್ನೋದು 'ಬಿಗ್ ಬಾಸ್ ಕನ್ನಡ ಸೀಸನ್ 10' ಲಾಂಚ್ ಆಗುವ ದಿನವೇ ಗೊತ್ತಾಗುತ್ತದೆ. 

ಆದರೆ ಈ ಬಾರಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿ ಯಾರು ಎನ್ನೋದನ್ನು ವಾಹಿನಿ ಹೇಳಿದೆ. ಬೆಸ್ಟ್ ರೇಟೆಡ್ ಚಲನಚಿತ್ರ - 777 ಚಾರ್ಲಿ'. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ" ಎಂದು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಇನ್ನು ಎರಡನೇ ಸ್ಪರ್ಧಿಯಾಗಿ ತನ್ನಂತೆ ಯಾರೂ ಬೀದಿಪಾಲಾಗಬಾರದು. ತನಗೆ ಕಾಡಿದ ಅನಾಥ ಪ್ರಜ್ಞೆ ಇನ್ಯಾರಿಗೂ ಆಗಬಾರದು. ಬೀದಿಯಲ್ಲಿ ಮಲಗಿ, ನೂರಾರು ಜನರಿಂದ ಒದೆಸಿಕೊಳ್ಳುವ ಸ್ಥಿತಿ ಮತ್ತೊಬ್ಬರಿಗೆ ಬರಬಾರದು.

 ಹೀಗೆ ತನ್ನ ಸ್ವಂತ ಕಹಿ ಘಟನೆಯಿಂದಲೇ ಘಟ್ಟಿಗಿತ್ತಿಯಾಗಿ ಬೆಳೆದ ನಕ್ಷತ್ರ ಅವರು ಹೋಗಲಿದ್ದಾರೆ. 
ಮಂಗಳಮುಖಿ ನಕ್ಷತ್ರ ‘ನಮ್ಮನೆ ಸುಮ್ಮನೆ’ ಎಂಬ ಅನಾಥಾಶ್ರಮ ಆರಂಭಿಸಿ ಅನಾಥರಿಗೆ ನೆಲೆ ಕಲ್ಪಿಸಿದ್ದಾರೆ. ರಾಜ್ಯ ಸರ್ಕಾರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಅನಾಥಾಶ್ರಮಕ್ಕಾಗಿ, ಪೀಣ್ಯ 2ನೇ ಹಂತದ ಗಂಗೊಂಡನಹಳ್ಳಿಯಲ್ಲಿ 20 ಸಾವಿರ ಚದರ ಅಡಿ ಜಾಗವನ್ನು ನೀಡಿದೆ. 

ನಕ್ಷತ್ರ ಅವರ ಸಂಸ್ಥೆಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಸಿಕ್ಕಿದೆ. ಇವರು ಎರಡನೇ ಕಂಟೆಸ್ಟೆಂಟ್ ಆಗ್ತಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.