ಯಶ್ ಕಾರಿಗೆ Boss ಎಂಬ ನಂಬರ್ ಪ್ಲೇಟ್ ಅಳವಡಿಕೆ; ಬಾಲಿವುಡ್ ನಲ್ಲಿ ರಾಕಿ ಬಾಯ್ ದರ್ಬಾರ್
Aug 12, 2024, 17:31 IST
|
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಏನೇ ಮಾಡಿದರೂ ಜನರ ಗಮನ ಸೆಳೆಯುತ್ತದೆ. ಐರಾ ಮತ್ತು ಅಥರ್ವ್ ಆಗಮನದ ಬಳಿಕ ರಾಧಿಕಾ ಪಂಡಿತ್ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟಿದ್ದಾರೆ. ಯಾವುದೇ ಕಾರ್ಯಕ್ರಮವಿರಲಿ ಯಶ್ ಕೈ ಹಿಡಿದುಕೊಂಡು ರಾಧಿಕಾ ಎಂಟ್ರಿ ಕೊಟ್ಟೇ ಕೊಡುತ್ತಾರೆ. ಕೆಲವು ದಿನಗಳ ಹಿಂದೆ ಯಶ್ ತಮ್ಮ ಟಾಕ್ಸಿಕ್ ಸಿನಿಮಾ ಮುಹೂರ್ತದಲ್ಲಿ ಭಾಗಿಯಾಗಿದ್ದು, ಚಿತ್ರೀಕರಣ ಆರಂಭಿಸಿದ್ದಾರೆ.
ಶೂಟಿಂಗ್‌ಗೆ ತೆರಳುವಾಗ ಯಶ್ ತಮ್ಮ ಕಪ್ಪು ಬಣ್ಣದ ಐಷಾರಾಮಿ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ, ಈ ಕಾರು ಜನರ ಗಮನ ಸೆಳೆದಿದೆ.ಹೌದು! ಯಶ್ ಶೂಟಿಂಗ್‌ಗೆ ತೆರಳುವ ಕಾರು ಕಪ್ಪು ಬಣ್ಣದ ರೇಂಜ್ ರೋವರ್. ಈ ಕಾರಿನ ಸಂಖ್ಯೆ KA 01 NA 8055. KA ಕರ್ನಾಟಕವನ್ನು ಪ್ರತಿನಿಧಿಸುವ ಈ ಕಾರು ಬೆಂಗಳೂರು ಕೇಂದ್ರ ಆರ್‌ಟಿಒನಲ್ಲಿ ನೊಂದಣಿಯಾಗಿದೆ ಹೀಗಾಗಿ NA 01 ಪಡೆದಿದೆ.
8055 ಸಂಖ್ಯೆಯನ್ನು BOSS ಸಾಮ್ಯತೆ ಇರುವುದರಿಂದ ನಮ್ಮ ಯಶ್ ಬಾಸ್ ಕರ್ನಾಟಕಕ್ಕೆ ನಂಬರ್ 1 ಎನ್ನುತ್ತಾರೆ ಫ್ಯಾನ್ಸ್. ಈ ಕಾರನ್ನು 2023ರ ಜನವರಿಯಲ್ಲಿ ಖರೀದಿಸಿದ್ದರು. ಇದರ ಬೆಲೆ ಸುಮಾರು 5 ಕೋಟಿ ರೂಪಾಯಿ ಎನ್ನಲಾಗಿದೆ. ಯಶ್ ಬಳಿ ಎಷ್ಟೇ ಕಾರುಗಳು ಇದ್ದರೂ ಅವರ ಸಂಪೂರ್ಣ ಆಸೆ ಇರುವುದು ಆರ್‌ಎಕ್ಸ್ 100 ಬೈಕ್ ಮೇಲೆ.
ಏಕೆಂದರೆ ಹೈಸ್ಕೂಲ್‌ನಲ್ಲಿ ಇರುವಾಗಲೇ ಬೈಕ್ ಬೇಕು ಎಂದು ತಂದೆ ಬಳಿ ಕೇಳಿದ್ದರಂತೆ ಹೀಗಾಗಿ ಕಾಲೇಜ್‌ಗೆ ಕಾಲಿಡುತ್ತಿದ್ದಂತೆ ಆರ್‌ಎಕ್ಸ್ 100 ಬೈಕನ್ನು ತಂದೆ ಗಿಫ್ಟ್ ನೀಡಿದ್ದರು. ಓದಿನ ಕಡೆ ಗಮನ ಕಡಿಮೆಯಾಗಿದೆ ಅದಕ್ಕೆ ಈ ಬೈಕ್ ಕಾರಣ ಎಂದು ಯಶ್ ತಂದೆ ಈ ಬೈಕನ್ನು ಮಾರಿಬಿಟ್ಟರಂತೆ.
ಇನ್ನು ಕಾರುಗಳನ್ನು ಯಶ್ ಖರೀದಿಸಿದ ಮೊದಲ ಕಾರು ಮಹೀಂದ್ರಾ ಸ್ಕಾರ್ಪಿಯೋ ಇದರ ಬೇಲೆ ಆಗ ಇದ್ದಿದ್ದು 9 ಲಕ್ಷದಿಂದ 16 ಲಕ್ಷ. ಇದಾದ ಮೇಲೆ ಬಂದಿದ್ದೆಲ್ಲವೂ ಐಷಾರಾಮಿ ಕಾರುಗಳಾಗಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.