ತುಳುನಾಡಿನ ಜನ ಸೆಲ್ಫಿ ಕೇಳಿದಕ್ಕೆ ಯಶ್ ಕೊಟ್ಟ ಉತ್ತರಕ್ಕೆ ಜನ ಮೆಚ್ಚುಗೆ;

 | 
U
ರಾಕಿಂಗ್ ಸ್ಟಾರ್ ಯಶ್ ಕಳೆದ ದಿನ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಕುಟುಂಬ ಸಮೇತ ದೇವರ ದರ್ಶನ ಪಡೆದು ಹರಕೆ ತೀರಿಸಿ ಅನ್ನ ಪ್ರಸಾದ ಸ್ವೀಕರಿಸಿದರು. ಪತ್ನಿ ರಾಧಿಕಾ ಪಂಡಿತ್ ಹಾಗೂ ತಮ್ಮಿಬ್ಬರ ಮಕ್ಕಳೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ಯಶ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಆಗಾಗ ಅವರು ಕುಟುಂಬ ಸಮೇತ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನವನ್ನು ಪಡೆಯುತ್ತಲೇ ಇರುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಯಶ್ ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ಮಾತ್ರ ಹಿಂದೆ ಉಳಿದಿಲ್ಲ. ಸಿನಿಮಾ ಶೂಟಿಂಗ್‌ನಲ್ಲಿ ಎಷ್ಟೇ ಬ್ಯೂಸಿ ಆಗಿದ್ದರೂ ಕೂಡ ದೇವರ ಪೂಜೆ, ಹಬ್ಬ ಹರಿದಿನಗಳ ಆಚರಣೆ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡುವುದು ಮಾತ್ರ ಯಶ್ ತಪ್ಪಿಸಿಲ್ಲ.
https://www.youtube.com/live/9TqcbR7lYc0?si=k9KD7-65ghw4HHlD
ಅದರಲ್ಲೂ ವಿಶೇಷವಾಗಿ ಧರ್ಮಸ್ಥಳಕ್ಕೆ ಯಶ್ ಆಗಾಗ ಭೇಟಿ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಕಾರಣ ಅವರ ತಂದೆ. ಯಶ್ ತಾವು ಧರ್ಮಸ್ಥಳಕ್ಕೆ ಭೇಟಿ ನೀಡುವ ಕಾರಣವನ್ನು ಈ ಹಿಂದೆ ಹೇಳಿದ್ದರು. ಅದನ್ನು ಈಗ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಯಶ್ ಅವರು ಅಂದು ಹೇಳಿದ್ದು ಏನು ಗೊತ್ತಾ.ಅಪ್ಪ ಯಾವಾಗಲೂ ಹೇಳುತ್ತಾ ಇರುತ್ತಾರೆ. ಧರ್ಮಸ್ಥಳ ಮಂಜುನಾಥನ ಬೇಡಿಕೋ ಎಲ್ಲದೂ ಆಗುತ್ತದೆ. ಆ ನಂಬಿಕೆಯಲ್ಲಿ ಬೆಳೆದು ಬಂದವರು ನಾವು, ಸಂಪೂರ್ಣ ಕರ್ನಾಟಕ ಆ ನಂಬಿಕೆಯಲ್ಲಿ ಬದುಕುತ್ತಾ ಇದೆ. ನನಗೆ ಇದ್ದಿದ್ದು ಒಂದೇ ನಂಬಿಕೆ ಎಂದರೆ ಮಂಜುನಾಥ ಸ್ವಾಮಿ ಕೈ ಬಿಡಲ್ಲ ಎಂದು ಯಶ್ ಅವರು ಈ ಮೊದಲು ಹೇಳಿಕೊಂಡಿದ್ದರು.
ಆದರೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಸದ್ಯ ಟಾಕ್ಸಿಕ್ ಸಿನಿಮಾ ಶೂಟಿಂಗ್ ಆರಂಭವಾಗುತ್ತಿರುವ ಬೆನ್ನೆಲೆಯಲ್ಲಿ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.ಕಳೆದ ದಿನ ಮಂಗಳೂರಿನ ಬೆಳ್ತಂಗಡಿ ತಾಲೂಕು ಸೂರಿಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ದಂಪತಿ ಭೇಟಿ ನೀಡಿದರು. ಟಾಕ್ಸಿಕ್ ಚಲನಚಿತ್ರದ ಡೈರೆಕ್ಟರ್ ವೆಂಕಟ್ ಜೊತೆಯಲ್ಲಿ ಯಶ್ ಕುಟುಂಬ ದೇವಸ್ಥಾನಕ್ಕೆ ಭೇಟಿ ನೀಡಿದೆ. ಇನ್ನು ಸೆಲ್ಫಿ ಕೇಳಲು ಬಂದ ಅಭಿಮಾನಿಗಳ ಬಾಡಿಗಾರ್ಡ್ ತಳ್ಳಿದ್ದರಿಂದ ಕೋಪಗೊಂಡು ಅಭಿಮಾನಿಗಳ ಬಿಡು ಎಂದು ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.