ಮದ್ವೆಯಾಗಿ 6 ವಷ೯ ಆದರೂ ಇವರು ಮಕ್ಕಳು ಮಾಡಲಿಲ್ಲ ಯಾಕೆ, ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ

 | 
Hs
 ಕನ್ನಡದ ಮನಸಾರೆ ಬೆಡಗಿ ಐಂದ್ರಿತಾ ರೇ ಕಳೆದ ಕೆಲ ದಿನಗಳಿಂದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.ಹಾಗೆಂದು ಮದುವೆ ಆದನಂತರ ಚಿತ್ರರಂಗ ಬಿಟ್ಟಿದ್ದಾರೆ ಅಂತೇನಿಲ್ಲ.ಸ್ಯಾಂಡಲ್‌ವುಡ್‌ ನ ಕ್ಯೂಟ್ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ ಪೋಷಕರಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ನಟಿ ಐಂದ್ರಿತಾ ರೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾನು-ದಿಗಂತ್ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ನಾನು ಮತ್ತು ದಿಗಂತ್ ಈಗಾಗಲೇ ಪೋಷಕರಾಗಿದ್ದೇವೆ' ಎಂದಿದ್ದಾರೆ ಐಂದ್ರಿತಾ ರೇ. ಹಾಗೆಂದ ಮಾತ್ರಕ್ಕೆ ಈ ದಂಪತಿ ಮಕ್ಕಳನ್ನು ಹೊಂದಿದ್ದಾರೆ ಎಂದರ್ಥವಲ್ಲ.ನಾನು ದಿಗಂತ್ ಎರಡು ನಾಯಿಗಳನ್ನು ನಮ್ಮ ಮಕ್ಕಳಂತೆಯೇ ಸಾಕುತ್ತಿದ್ದೇವೆ. ಡಾಗ್ ಪೇರೆಂಟ್ಸ್ ಇನ್ನು ಮುಂದೆಯೂ ಹೀಗೆ ಇರಬೇಕು ಎಂದುಕೊಂಡಿದ್ದೇವೆ' ಎಂದಿದ್ದಾರೆ ನಟಿ ಐಂದ್ರಿತಾ ರೇ.
ಅಷ್ಟಕ್ಕೂ ಇತ್ತೀಚೆಗೆ ನಟ ದಿಗಂತ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸಂದರ್ಶಕಿಯು ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಎಂದು ಕೇಳಿದಾಗ, 'ಸುಮ್ಮನಿರಿ ಅದರ ಬಗ್ಗೆ ಮಾತನಾಡಬೇಡಿ' ಎಂದು ತಮಾಷೆಯಾಗಿ ಸನ್ನೆ ಮಾಡಿದ್ದರು. ಇದೇ ಕಾರಣಕ್ಕೆ ದಿಗಂತ್-ಐಂದ್ರಿತಾ ಮಗುವಿನ ನಿರೀಕ್ಷೆಯಲ್ಲಿರಬಹುದು ಎನ್ನಲಾಗಿತ್ತು.2018 ರ ಡಿಸೆಂಬರ್ ತಿಂಗಳಲ್ಲಿ ಈ ಯುವ ಜೋಡಿ ವಿವಾಹವಾಗಿದ್ದರು. 
ಇಬ್ಬರೂ ಸಹ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿರುವುದರ ಜೊತೆಗೆ ಹಲವಾರು ಸಾಹಸಗಳನ್ನು ಒಟ್ಟಿಗೆ ಮಾಡುತ್ತಿರುತ್ತಾರೆ. ರಿವರ್‌ ರ್ಯಾಫ್ಟಿಂಗ್, ಸೈಕ್ಲಿಂಗ್, ವ್ಯಾಯಾಮ, ಕಸರತ್ತು, ಸರ್ಫಿಂಗ್ ಹೀಗೆ ಹಲವು ಸಾಹಸ ಕ್ರೀಡೆಗಳಲ್ಲಿ ಈ ಜೋಡಿ ತೊಡಗಿಕೊಂಡಿದ್ದಾರೆ. ಆದರೆ ಇಬ್ಬರಿಗೂ ಮಕ್ಕಳ ಬಗೆಗಿನ ಆಸೆ ಆಸಕ್ತಿ ಇಲ್ಲದಿರೋ ಕಾರಣದಿಂದಾಗಿ ಇವರಿಬ್ಬರೂ ಮಕ್ಕಳ ಬಯಸುತ್ತಿಲ್ಲ ಎನ್ನಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.