ಯೂಟ್ಯೂಬರ್ ಸಮೀರ್ ಅಕ್ಕನಿಗೆ ಮೋಸ ಮಾಡಿದ ಭಾವ, ಅತ್ತೆ ಮನೆಯಲ್ಲಿ ಕಣ್ಣೀರು ಹಾಕಿದ ಸಮೀರ್

 | 
Hhh
ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಸಮೀರ್‌ ಅವರು ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ತಮ್ಮ ಅಕ್ಕನ ಗಂಡನ ಮೇಲೆ ಮೋಸ, ಸಾಲ ಮತ್ತು ಹಣ ವಸೂಲಿ ಆರೋಪ ಮಾಡಿದ್ದಾರೆ. ಡಿಕೆ ಶಿವಕುಮಾರ್‌ ಮತ್ತು ಕಿಚ್ಚ ಸುದೀಪ್‌ ಅವರ ಹೆಸರು ಬಳಸಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಸಮೀರ್‌ ಅವರು ಏಕಾಏಕಿ ಇನ್‌ಸ್ಟಾಗ್ರಾಮ್‌ ಲೈವ್‌ ಬಂದು, ತನ್ನ ಅಕ್ಕನ ಗಂಡ ಮಾಡಿರುವ ಮೋಸದ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ನೋಡಿ ಅನೇಕರು ಫ್ರಾಂಕ್‌ ಆಗಿರಬಹುದು ಎಂದು ಕಾಮೆಂಟ್‌ ಮಾಡಿದ್ದಾರೆ. ಏಕಾಏಕಿ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಸಮೀರ್‌ ಅವರು ಬಾವನ ಮೇಲೆ ಆರೋಪ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಮೀರ್‌ ಜೊತೆಗೆ ಅವರ ಬಾವ ಕೂಡ ಇದ್ದಾರೆ.
 ನನ್ನ ಅಕ್ಕನನ್ನು ಮದುವೆಯಾದರು. ಹುಡುಗಿ ಬೇಕು, ಇಷ್ಟ ಆಗಿದೆ, ಇಲ್ಲ ಅಂದ್ರೆ ಎತ್ತಾಕೊಂಡು ಹೋಗ್ತೀನಿ ಅಂತ ಹೇಳಿ ಅಕ್ಕನನ್ನು ಮದುವೆಯಾದರು. ನನ್ನ ಅಕ್ಕನ ಹೆಸರಿನಲ್ಲಿ ಏಳು ಲಕ್ಷ ರೂಪಾಯಿ ಸಾಲ ಮಾಡಿಸಿದ್ದಾನೆ. ಆಮೇಲೆ ಪೊಲೀಸರು, ಬ್ಯಾಂಕ್‌ನವರು ಮನೆಗೆ ಬಂದು ನನ್ನ ಅಕ್ಕನಿಗೆ ತೊಂದರೆ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್‌, ಕಿಚ್ಚ ಸುದೀಪ್‌ ಅವರ ಜೊತೆ ನಾನು ಕೆಲಸ ಮಾಡ್ತೀನಿ ಅಂತ ಧೈರ್ಯದಲ್ಲಿ ಏನು ಬೇಕಿದ್ರೂ ಮಾಡ್ತಾರಂತೆ.
 ಅವರನ್ನು ಕಾಂಟ್ಯಾಕ್ಟ್‌ ಮಾಡಸ್ತೀನಿ, ಫೋಟೋ ತೆಗೆಸಿಕೊಡ್ತೀನಿ ಅಂತ ಹೇಳಿ ಹಣ ವಸೂಲಿ ಮಾಡ್ತೀನಿ ಅಂತ ಹೇಳಿದ್ದಾರೆ. ನನ್ನ ಅಕ್ಕನ ಹೆಸರಿನಲ್ಲಿ ಸಾಲ ಮಾಡಿ ಇನ್ನೊಂದು ಹುಡುಗಿಗೆ ಐಫೋನ್‌ ಕೊಡಿಸಿದ್ದಾನೆ. ಇವನಿಗೆ ಹುಡುಗಿಯರ ಶೋಕಿ ಕೂಡ ಇದೆ. ನನ್ನ ಕಾರ್‌ ತಗೊಂಡು, ಬೇರೆ ಹುಡುಗಿಯರನ್ನು ತಿರುಗಿಸುತ್ತಾನೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.