ಡ್ರೋನ್ ಪ್ರತಾಪ್ ಕ್ರೇಜ್ ನೋಡಿ ಸ್ವತಃ ಕಿಚ್ಚನೇ ಶಾ.ಕ್

 | 
Bs

ಒಂದು ಕಾಲದಲ್ಲಿ ತಾನೇ ಖುದ್ದಾಗಿ ಡ್ರೋನ್ ಕಂಡುಹಿಡಿದಿದ್ದೇನೆ ಅಂತ ಊರು ತುಂಬ ಸುಳ್ಳು ಹೇಳಿ, ಅನೇಕ ಸಭೆ-ಸಮಾರಂಭಗಳಿಗೆ ಅತಿಥಿಯಾಗಿ ಹೋಗಿ ಮೋಟಿವೇಶನಲ್ ಭಾಷಣ ಕೊಡುತ್ತಿದ್ದವರು ಪ್ರತಾಪ್. ಆಮೇಲೆ ಇವರು ಇಷ್ಟು ದಿನ ಕಾಗೆ ಹಾರಿಸಿದ್ದರು ಅಂತ ಅನೇಕರಿಗೆ ಗೊತ್ತಾಗಿ, ಟ್ರೋಲ್‌ಪೇಜ್‌ಗಳಲ್ಲಿ ರಾರಾಜಿಸತೊಡಗಿದರು. 

ಈಗ ಪ್ರತಾಪ್ ಅವರು ಬಿಗ್ ಬಾಸ್ ಮನೆಯ ಸ್ಪರ್ಧಿ. ಆರಂಭದಲ್ಲಿ ಎಲ್ಲರೂ ಅವರನ್ನು ಆಡಿಕೊಂಡವರೇ ಈಗ ಅವರ ತಾಳ್ಮೆ ಅನೇಕರಿಗೆ ಇಷ್ಟ ಆಗಿದೆ. ಮೊದಮೊದಲು ಸೋಶಿಯಲ್ ಮೀಡಿಯಾದಲ್ಲಿ ಪ್ರತಾಪ್ ಅವರನ್ನು ಮನಸ್ಸಿಗೆ ಬಂದ ಹಾಗೆ ಟ್ರೋಲ್ ಮಾಡಲಾಗಿತ್ತು. ಅದು ಇನ್ನೂ ಮುಂದುವರೆದಿದೆ. ಇದು ಪ್ರತಾಪ್‌ಗೂ ಗೊತ್ತಿದೆ. ಇದನ್ನೆಲ್ಲ ಈಗ ಅವರು ಮನಸ್ಸಿಗೆ ಹಚ್ಕೊಂಡು ತಲೆ ಕೆಡಿಸಿಕೊಳ್ಳೋದೇ ಇಲ್ಲ. 

ಜನರು ನನ್ನ ಬಗ್ಗೆ ನೆಗೆಟಿವ್ ಆಗಿಯೇ ಮಾತನಾಡುತ್ತಾರೆ, ಮಾತನಾಡಿಕೊಳ್ಳಲಿ, ನಾನು ಕೆಲಸ ಮಾಡ್ತೀನಿ ಅಂತ ಪ್ರತಾಪ್ ಫಿಕ್ಸ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿಯೂ ಅವರನ್ನು ಸಿಕ್ಕಾಪಟ್ಟೆ ನಿಂದಿಸಲಾಯ್ತು, ಆಮೇಲೆ ನಿಂದಿಸಿದವರನ್ನು ಕಿಚ್ಚ ಸುದೀಪ್ ಅವರು ಕಿವಿ ಹಿಂಡಿ ಬುದ್ಧಿ ಹೇಳಿದ್ದೂ ಆಯ್ತು.
ಇವೆಲ್ಲವುಗಳ ಮಧ್ಯೆ ಒಮ್ಮೆಯೂ ಪ್ರತಾಪ್ ಅವರಿಗೆ ಹೊರಗಡೆ ಜನರು ನನ್ನನ್ನು ಇಷ್ಟಪಡುತ್ತಿದ್ದಾರೆ.

ನಾನು ಸತ್ಯ ಹೇಳ್ತಿದೀನಿ ಅಂತ ಅವರು ಮೆಚ್ಚುತ್ತಿದ್ದಾರೆ, ನಾನು ಬೇರೆಯವರಿಗೆ ಕೊಡುತ್ತಿರುವ ಗೌರವ, ನನ್ನ ತಾಳ್ಮೆ, ನನ್ನ ಪರಿಶ್ರಮ ಎಲ್ಲವೂ ಇಂದು ಬಿಗ್ ಬಾಸ್ ಪ್ರಿಯರ ಮನಸ್ಸು ಗೆದ್ದಿದೆ ಅಂತ ಗೊತ್ತಿರಲಿಕ್ಕಿಲ್ಲ. ಒಟ್ಟಾರೆಯಾಗಿ ಪ್ರತಾಪ್ ದೊಡ್ಮನೆಯಲ್ಲಿ ಸನ್ನಡತೆ ದೃಷ್ಟಿಯಿಂದ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ.

ತಾವು ಏನು? ತಮ್ಮ ವ್ಯಕ್ತಿತ್ವ ಏನು ಎಂದು ಸಾಬೀತುಪಡಿಸಿಕೊಳ್ಳಲು ನಿಜಕ್ಕೂ ಪ್ರತಾಪ್ ಅವರಿಗೆ 'ಬಿಗ್ ಬಾಸ್ ಕನ್ನಡ ಸೀಸನ್ 10 ಶೋ' ಒಂದು ಚಾನ್ಸ್ ಕೊಟ್ಟಿದೆ. ಅದನ್ನು ಪ್ರತಾಪ್ ಅವರು ಸದ್ಬಳಕೆ ಮಾಡಿಕೊಳ್ಳುತ್ತಿರುವ ಹಾಗೆ ಕಾಣ್ತಿದೆ. ಎಕೆಂದರೆ ಮಂಡ್ಯದ ಜನ ಮಾತ್ರವಲ್ಲ ಕರ್ನಾಟಕದ ಜನರೆಲ್ಲರೂ ಅಷ್ಟೇ ಏಕೆ ಆಂದ್ರ ಪ್ರದೇಶದ, ತಮಿಳು ನಾಡಿನಲ್ಲಿ ಕೂಡ ಪ್ರತಾಪ್ ಅವರ ಅಭಿಮಾನಿಗಳಿದ್ದಾರೆ. 

ಈ ಮೂಲಕ ಪ್ರತಾಪ್ ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಾಪ್ ಹೇಗೆ ಅನ್ನೋದು ಎಲ್ಲರಿಗೂ ಗೊತ್ತಾಗಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.