80 ವರ್ಷದ ಮುದುಕನ ರೀಲ್ಸ್ ನೋಡಿ ಪ್ರೀತಿಗೆ ಜಾರಿದ ಯುವತಿ; ಮದುವೆ ಮಾಡ್ಕೋ ಎಂದು ಒತ್ತಾಯ
Apr 6, 2024, 11:05 IST
|

ಆಕೆ ಬೇರೆ ರಾಜ್ಯ, ಈತ ಬೇರೆ ರಾಜ್ಯ. ಇಬ್ಬರನ್ನು ಒಂದು ಮಾಡಿತು ಪ್ರೀತಿ ಹೌದು 80 ವರ್ಷ ವಯಸ್ಸಿನ ವೃದ್ಧನೋರ್ವ 34 ವರ್ಷದ ಮಹಿಳೆಯನ್ನ ಪ್ರೀತಿಸಿ ವಿವಾಹವಾದ ಘಟನೆ ಮಧ್ಯಪ್ರದೇಶದ ಅಗರ್ ಜಿಲ್ಲೆಯ ಸುಸ್ನರ್ ತೆಹಸಿಲ್ ಬಳಿಯ ಮಗರಿಯಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಬಲುರಾಮ್ ಬಗ್ರಿ ಎಂಬವರು ಶೀಲಾ ಇಂಗ್ಲೆ ಯನ್ನು ವಿವಾಹವಾಗಿದ್ದಾರೆ.
ಅಂದಹಾಗೆಯೇ ಬಲುರಾಮ್ ಮತ್ತು ಶೀಲಾ ಇಬ್ಬರು ಪ್ರೇಮ ವಿವಾಹವಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ಪರಿಚಯಾಯ್ತು. ಬಳಿಕ ಸ್ನೇಹ ಬೆಳೆಯಿತು. ನಂತರ ಪ್ರೀತಿಗೆ ತಿರುಗಿತ್ತು. ಶೀಲಾ ಇಂಗ್ಲೆ ಮಹಾರಾಷ್ಟ್ರದ ಅಮರಾತಿಯವರಾಗಿದ್ದು, ಸಾಮಾಜಿಕ ಜಾಲತಾಣ ಇವರಿಬ್ಬರನ್ನು ಪ್ರೇಮ ಬಂಧನದಲ್ಲಿ ಬೀಳಿಸಿದೆ.
ಇಬ್ಬರ ನಡುವೆ 46 ವರ್ಷಗಳ ಅಂತರವಿದ್ದರು ಸಹ ಇದ್ಯಾವುದಕ್ಕೆ ಕ್ಯಾರೆ ಅನ್ನದೆ ಈ ಜೋಡಿ ಮದುವೆಯಾಗಲು ಬಯಸುತ್ತಾರೆ. ಹಾಗೂ ಈ ಜೊಡಿ ಸ್ನೇಹಿತರ, ಕುಟುಂಬಸ್ಥರ ಸಮ್ಮುಖದಲ್ಲಿ ಹಾರವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮದುವೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ಸಂಗತಿ ವೈರಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023