ಚಿರು ಸರ್ಜಾ ಬೆನ್ನಲ್ಲೇ ಧ್ರುವ ಸರ್ಜಾಗೆ ಆರೋಗ್ಯ ಸಮಸ್ಯೆ ಎದುರಾಯಿತಾ, ಕಣ್ಣೀರಿಟ್ಟ ಅರ್ಜುನ್ ಸರ್ಜಾ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ಜೋಗಿ ಪ್ರೇಮ್ ಕಾಂಬಿನೇಷನ್‌ನಲ್ಲಿ ಘೋಷಣೆ ಆಗಿದ್ದ ಸಿನಿಮಾಗೆ 'ಕೆಡಿ' ಟೈಟಲ್ ಫಿಕ್ಸ್ ಆಗಿರುವುದು ತಿಳಿದ ವಿಚಾರ. ಈಗಾಗಲೇ ಟೈಟಲ್ ಟೀಸರ್ ಕೂಡಾ ರಿಲೀಸ್ ಆಗಿದ್ದು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಭಿಮಾನಿಗಳು ಕೂಡಾ ಕಾಯುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಹೆಚ್ಚಾಗಿದೆ.
ಇನ್ನು 'ಪೊಗರು' ಚಿತ್ರದಲ್ಲಿ ಧ್ರುವ ಸರ್ಜಾ ಎರಡು ಶೇಡ್‌ನಲ್ಲಿ ನಟಿಸಿದ್ದು ಗೊತ್ತಿರುವ ವಿಚಾರ. ಈ ಚಿತ್ರಕ್ಕಾಗಿ ಧ್ರುವ ಹೈಸ್ಕೂಲ್ ಹುಡುಗನ ಪಾತ್ರಕ್ಕಾಗಿ 30 ಕಿಲೋ ತೂಕ ಇಳಿಸಿಕೊಂಡಿದ್ದರು. ಇದಕ್ಕಾಗಿ ಅವರು ಲಿಕ್ವಿಡ್ ಡಯೆಟ್ ಮಾಡಿದ್ದರು, ಬಹಳ ಹಸಿವಾದಾಗ ಇಡ್ಲಿಯನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ತಿನ್ನುತ್ತಿದ್ದೆ ಎಂದು ಕೂಡಾ ಧ್ರುವ ಸರ್ಜಾ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಹೇಳಿಕೊಂಡಿದ್ದರು. ಚಿತ್ರದಲ್ಲಿ ಧ್ರುವ ಅವರನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಧ್ರುವ ಮೇಕ್ ಓವರ್ ಹಾಗೂ ಅದಕ್ಕಾಗಿ ಅವರು ವಹಿಸಿದ ಶ್ರಮ ನೋಡಿ ಧ್ರುವ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಮತ್ತೊಮ್ಮೆ ಧ್ರುವ ಇಂತದ್ದೇ ಸಾಹಸಕ್ಕೆ ಕೈ ಹಾಕಿದ್ದಾರೆ.
ಧ್ರುವ ಸದ್ಯಕ್ಕೆ 'ಕೆಡಿ' ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕಾಗಿ ಮತ್ತೆ ಧ್ರುವ ತೂಕ ಇಳಿಸಿಕೊಂಡಿದ್ದಾರಂತೆ. ಈ ವಿಚಾರವನ್ನು ಸ್ವತ: ನಿರ್ದೇಶಕ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ''ಧ್ರುವ ಸರ್ಜಾ 23 ದಿನಗಳಲ್ಲಿ 18 ಕಿಲೋ ತೂಕ ಇಳಿಸಿಕೊಂಡು ಕೆಡಿ ವಾರ್ ಫೀಲ್ಡ್‌ಗೆ ಎಂಟ್ರಿ ಕೊಡಲು'' ರೆಡಿ ಆಗಿದ್ದಾರೆ ಎಂದು ಪ್ರೇಮ್ ಬರೆದುಕೊಂಡಿದ್ದಾರೆ. ''ಕೆಡಿ ಚಿತ್ರಕ್ಕೆ ಮುನ್ನ ಕೆಡಿ ಚಿತ್ರದ ನಂತರ'' ಎಂದು ಕ್ಯಾಪ್ಷನ್ ಕೊಟ್ಟು ಧ್ರುವ ಜೊತೆಗೆ ಅಂದು-ಇಂದು ತೆಗೆಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಮೊದಲ ಫೋಟೋಗೆ ಹೋಲಿಸಿದರೆ ಈಗಿನ ಫೋಟೋದಲ್ಲಿ ಧ್ರುವ ಸರ್ಜಾ ಎಷ್ಟು ಬದಲಾಗಿದ್ದಾರೆ ಎಂಬುದನ್ನು ಗಮನಿಸಬಹುದು.
ಈ ಫೋಟೋ ನೋಡಿ ನೆಟಿಜನ್ಸ್ ನಾನಾ ಕಮೆಂಟ್ಸ್ ಮಾಡುತ್ತಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ತೂಕ ಇಳಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಲಹೆ ನೀಡುತ್ತಿದ್ದಾರೆ. ಜೊತೆಗೆ ಪ್ರೇಮ್ ಕುರಿತು, ದಯವಿಟ್ಟು ಸ್ಟೋರಿ ಬಿಲ್ಡ್ ಮಾಡಿ, ಧ್ರುವ ಬಾಡಿಯನ್ನಲ್ಲ ಎಂದು ಮನವಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಧ್ರುವ ಅವರ ಡೆಡಿಕೇಶನ್‌ಗೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ. ಒಟ್ಟಿನಲ್ಲಿ 'ಕೆಡಿ' ಸಿನಿಮಾ ಚಿತ್ರೀಕರಣದ ಹಂತದಲ್ಲಿರುವಾಗಲೇ ಸದ್ದು ಮಾಡ್ತಿರೋದಂತು ನಿಜ.
'KD'ಸಿನಿಮಾ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆ ಈ ಚಿತ್ರದಲ್ಲಿದೆಯಂತೆ. ಬಾಲಿವುಡ್ ನಟ ಸಂಜಯ್ ದತ್ ಕೂಡಾ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ್ಕಕಾಗಿ ಬೆಂಗಳೂರಿನ ಸುಂಕದಕಟ್ಟೆಯಲ್ಲಿರುವ 20 ಎಕರೆ ಸ್ಥಳದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ ಎನ್ನಲಾಗಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡಾ ಈ ಚಿತ್ರದಲ್ಲಿ ಅಣ್ಣಯಪ್ಪ ಎಂಬ ಪಾತ್ರದಲ್ಲಿ ನಟಿಸಿದ್ದು ಈಗಾಗಲೇ ರವಿಚಂದ್ರನ್ ಅವರ ಫಸ್ಟ್‌ಲುಕ್ ಕೂಡಾ ಬಿಡುಗಡೆ ಆಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಕಾಳಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಹೊರ ಬೀಳಲಿದೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.