ಕನ್ನಡದ ಹಿರಿಯ ನಟಿ ಮಾಧುರಿ ಅವರನ್ನು ಮಜಾ ಮಾಡಲು ನೋಡಿದ್ಯಾರು ಗೊತ್ತಾ

 | 
Bj

ಬಹಳ ವರ್ಷಗಳ ಹಿಂದೆ ಚಿತ್ರರಂಗ ಹಾಗೂ ಕಿರುತೆರೆ ಎರಡರಲ್ಲೂ ಸಕ್ರಿಯರಾಗಿದ್ದ ಕೆಲವು ನಟಿಯರು ನಾನಾ ಕಾರಣಕ್ಕೆ ಇಂದು ನಟನೆ ತೊರೆದಿದ್ದಾರೆ. ಅದರಲ್ಲಿ ಕೆಲವರು ಮದುವೆ ಮಕ್ಕಳು ಎಂದು ಚಿತ್ರರಂಗದಿಂದ ದೂರ ಸರಿದರೆ, ಇನ್ನೂ ಕೆಲವರು ಅವಕಾಶಗಳ ಕೊರತೆಯಿಂದ ಆಕ್ಟಿಂಗ್‌ ತೊರೆದಿದ್ದಾರೆ. ಇನ್ನೂ ಕೆಲವರು ಚಿತ್ರರಂಗದಲ್ಲಿ ಅನುಭವಿಸಿದ ನೋವುಗಳಿಂದ ಸಿನಿಮಾ ಸಹವಾಸವೇ ಬೇಡ ಎಂದು ಗುಡ್‌ ಬೈ ಹೇಳಿದ್ದಾರೆ. 

ಅಂತಹ ನಟಿಯರಲ್ಲಿ ಮಾಧುರಿ ಕೂಡಾ ಒಬ್ಬರು.
ನಟಿ ಮಾಧುರಿ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿದ್ದ ನಟಿ. ಒಂದೆಡೆ ತಮ್ಮ ಚೆಲುವು, ಮತ್ತೊಂದೆಡೆ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಈಕೆ, ಇದ್ದಕ್ಕಿದ್ದಂತೆ ನಟನೆಯಿಂದ ದೂರಾಗಿದ್ದರು. ಮಾಧುರಿ ಎಲ್ಲಿದ್ದಾರೆ? ಹೇಗಿದ್ದಾರೆ ಎಂಬ ವಿಚಾರ ಹಲವರಿಗೆ ಗೊತ್ತಿರಲಿಲ್ಲ. ಇದೀಗ ಬಹಳ ವರ್ಷಗಳ ನಂತರ ಅವರು ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ನಿರ್ದೇಶಕ ರಘುರಾಮ್‌ ನಡೆಸಿಕೊಡುತ್ತಿರುವ ಕನಸುಗಳ ಕಾರ್ಖಾನೆ, ನೂರೊಂದು ನೆನಪು ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಮಾಧುರಿ ಅವರನ್ನು ಬಹಳ ವರ್ಷಗಳ ನಂತರ ಕ್ಯಾಮರಾ ಮುಂದೆ ಕರೆತಂದಿದ್ದಾರೆ. ಮಾಧುರಿ, ತಮ್ಮ ಬಾಲ್ಯದಿಂದ ಹಿಡಿದು, ಇದುವರೆಗೂ ಅವರ ಜೀವನದಲ್ಲಿ ನಡೆದ ಅನೇಕ ವಿಚಾರಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.

ಮಾಧುರಿ ಮೊದಲ ಹೆಸರು ಛಾಯಾದೇವಿ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಮಾಧುರಿ, ಬಡತನದಲ್ಲಿ ಬೆಳೆದ ಹುಡುಗಿ. ಚಿತ್ರರಂಗಕ್ಕೆ ಬರಬೇಕೆಂದು ಎಂದಿಗೂ ಕನಸು ಕಾಣದ ಮಾಧುರಿಗೆ ಐಎಎಸ್‌ ಮಾಡುವ ಆಸೆ ಇತ್ತಂತೆ. ಆದರೆ ಮಾಧುರಿ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದರು. ಕಾಶಿನಾಥ್‌ ನಿರ್ದೇಶನದ 'ಅಜಗಜಾಂತರ' ಸಿನಿಮಾ ಮೂಲಕ ಮಾಧುರಿ ಚಿತ್ರರಂಗಕ್ಕೆ ಬಂದರು. ಕನ್ನಡದ ಜೊತೆಗೆ ಹಿಂದಿ ಧಾರಾವಾಹಿಗಳಲ್ಲಿ ಕೂಡಾ ನಟಿಸುತ್ತಿದ್ದರು. ಕನ್ನಡ-ಹಿಂದಿಯಲ್ಲಿ ಬ್ಯುಸಿಯಾಗಿದ್ದ ಆಕೆ ಉತ್ತಮ ಅವಕಾಶಗಳನ್ನೇನೋ ಪಡೆದರು. ಆದರೆ ಇದರ ಹಿಂದೆಯೇ ಅವರಿಗೆ ಚಿತ್ರರಂಗದವರಿಂದಲೇ ಕಿರುಕುಳ ಆರಂಭವಾಯ್ತು.Vb

ನಾನು ಹಿಂದಿ ಸಿನಿಮಾಗಳಿಗಾಗಿ ಮುಂಬೈಗೆ ಹೋಗುವಾಗ ನನ್ನ ಬಗ್ಗೆ ಬೇಕಂತಲೇ ಪತ್ರಿಕೆಗಳಲ್ಲಿ ಸುಳ್ಳು ಸುದ್ದಿ ಬರೆಸಿದ್ದರು. ನನ್ನ ಬೆಳವಣಿಗೆ ಸಹಿಸಲಾಗದೆ, ನಮ್ಮ ಚಿತ್ರರಂಗದವರೇ ದುಡ್ಡು ಕೊಟ್ಟು, ನಾನು ಬಿ ಗ್ರೇಡ್‌ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಬರೆಸಿದ್ದರು. ಇದು ನನಗೆ ಬಹಳ ನೋವಾಗಿತ್ತು. ನಂತರ ಆ ರೀತಿ ಬರೆಸಿದ್ದು ಯಾರು ಎಂಬ ವಿಚಾರ ಗೊತ್ತಾಯ್ತು. ಆ ಸಮಯದಲ್ಲಿ ನನ್ನ ಪತಿ ಬೆಂಬಲಕ್ಕೆ ನಿಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿ ಬೇಸರವಾಗಿತ್ತು. ಮಗ ಜನಿಸಿದ ನಂತರ ಆತನ ಆರೈಕೆಯಲ್ಲಿ ಬ್ಯುಸಿ ಆದೆ. ಆದರೆ ಮತ್ತೆ ನನಗೆ ನಟಿಸಬೇಕು ಎನ್ನಿಸಲಿಲ್ಲ'' ಎಂದು ಮಾಧುರಿ ಅಂದಿನ ಘಟನೆಗಳನ್ನು ನೆನೆದಿದ್ದಾರೆ.

ಮಾಧುರಿ ಗೂಂಡಾ ರಾಜ್ಯ, ಸೂರ್ಯ ಪುತ್ರ, ಸಿಬಿಐ ಶಿವ, ಬಾಂಬೆ ದಾದಾ, ಸ್ಟೇಟ್‌ ರೌಡಿ, ಜೀವನ ಸಂಘರ್ಷ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ಯಾದಾನ ಹಾಗೂ ಇನ್ನಿತರ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.