ಡೆಲಿವರಿ ವೇಳೆ ಬಾಣಂತಿ ಹೊಟ್ಟೆ ಒಳಗಡೆ ಬಟ್ಟೆ ಉಂಡೆ ಹಾಕಿ ಆಪರೇಷನ್ ಮಾಡಿದ ಪುತ್ತೂರಿನ ಪ್ರತಿಷ್ಠಿತ ಆಸ್ಪತ್ರೆ ಡಾಕ್ಟರ್

 | 
ಕಿ
ವೈದ್ಯೋ ನಾರಾಯಣೋ ಹರಿಃ ಅನ್ನುವ ಕಾಲ ಬದಲಾಗಿದೆ. ಹೌದು ಹಲವು ನಿದರ್ಶನಗಳಲ್ಲಿ ವೈದ್ಯರು ದೇವರಾಗಿ ಕಂಡರೂ ಕೆಲವು ಸಲ ವೈದ್ಯರುಗಳ ನಿರ್ಲಕ್ಷಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲ ವೈದ್ಯರೂ ಹಾಗೆ ಎಂದು ನಾವ್ ಹೇಳ್ತಿಲ್ಲ. ಕೆಲ ವೈದ್ಯರುಗಳಷ್ಟೇ ಈ ಪಟ್ಟಿಯಲ್ಲಿ ಸೇರ್ತಾರೆ. ಹೌದು ಕೆಲ ದಿನಗಳ ಹಿಂದಷ್ಟೇ ಬೆಳಗಾವಿಯ ಚಿಕ್ಕೋಡಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಬಾಣಂತಿ ಹೊಟ್ಟೆಯ ಕೆಳಭಾಗದಲ್ಲಿ ಬಟ್ಟೆ ಉಂಡೆಗಳನ್ನು ಬಿಟ್ಟು ಹೊಲಿಗೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿತ್ತು 
ಸ್ನೇಹಿತರೇ... ಇದಾದ ನಂತರದಲ್ಲಿ ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಕೂಡ ವೈದ್ಯರ ಇಂತಹದೇ ಎಡವಟ್ಟು ಬಟಾಬಯಲಾಗಿತ್ತು . ಆ ಘಟನೆ ಮರೆಯುವ ಮುನ್ನವೇ ಬುದ್ದಿವಂತರ ಪ್ರದೇಶ ಎಂದು ಕರೆಸಿಕೊಳ್ಳುವ ಪುತ್ತೂರಿನಲ್ಲಿ ನಡೆದಿದೆ.ಸಿಝೇರಿಯನ್ ಹೆರಿಗೆಯಾದ ಬಳಿಕ ಬಾಣಂತಿಯ ಹೊಟ್ಟೆಯೊಳಗೆ ಬಟ್ಟೆಯ ತುಂಡು ಬಾಕಿ ಉಳಿಸಿದ್ದು, ಇದೀಗ ವೈದ್ಯರ ನಿರ್ಲಕ್ಷ್ಯ ದ ಬಗ್ಗೆ ಬಾಣಂತಿಯ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಶರಣ್ಯಾ ಲಕ್ಷ್ಮೀ ಅವರಿಗೆ ಪುತ್ತೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಸಿಸೇರಿಯನ್ ಹೆರಿಗೆ ಅಗಿತ್ತು.
ಸ್ನೇಹಿತರೇ... ಸಿಸೇರಿಯನ್ ಹೆರಿಗೆ ಬಿಡಿ ಎಲ್ಲರಿಗೂ ಆಗತ್ತೆ ಅದರಲ್ಲೇನು ವಿಶೇಷ ಅಂದುಕೊಂಡ್ರಾ . ಇಲ್ಲೆ ಇರೋದು ಟ್ವಿಸ್ಟ್ ಡಾಕ್ಟರ ಅನಿಲ್ ಕೇವಲ ಸಿಸೇರಿಯನ್ ಹೆರಿಗೆ ಮಾತ್ರ ಮಾಡಿಸಿರಲಿಲ್ಲ. ಬದಲಾಗಿ ಹೊಟ್ಟೆಯಲ್ಲಿ ಬಟ್ಟೆ ಹಾಕಿಯೇ ಹೊಲಿಗೆ ಹಾಕಿದ್ರು.ಅಷ್ಟಕ್ಕೂ ಆಗಿದ್ದೇನಪ್ಪ ಅಂದ್ರೆ 2024ರ ನವಂಬರ್ 27ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ 33 ವರ್ಷ ಪ್ರಾಯದ ಶರಣ್ಯಾ ಲಕ್ಷ್ಮೀ ಬಿ. ಎಂಬವರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಯಾಗಿತ್ತು. ನಂತರದಲ್ಲಿ ಡಿಸೆಂಬರ್ 2ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ರು ಇದಾದ ಬಳಿಕ ವಿಪರೀತ ಜ್ವರ ಬಂದಿತ್ತು. ಇದನ್ನು ಹೆರಿಗೆ ಮಾಡಿಸಿದ ಡಾ. ಅನಿಲ್ ಗಮನಕ್ಕೆ ತಂದಾಗ ಜ್ವರದ ಔಷಧಿ ನೀಡಿದ್ದರು. ಕೆಲವು ದಿನಗಳ ಬಳಿಕ ಮಗುವನ್ನು ಹಾಸಿಗೆಯಿಂದ ಎತ್ತಲಾಗದ, ನಿಲ್ಲಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಅವರಿಗೆ ಹೊಟ್ಟೆ ಮುಟ್ಟಿದಾಗ ಏನೋ ಉಂಡೆಯ ಮಾದರಿ ಮುಟ್ಟಿದಂತೆ ಆಗಿದೆ . ಬಳಿಕ ಜನವರಿ 25ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ಡಾ. ವಿವೇಕ್ ಕಜೆ ನೇತೃತ್ವದಲ್ಲಿ ಸುಮಾರು 4 ತಾಸಿನ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿ ಬಾಕಿಯಾಗಿದ್ದ ಬಟ್ಟೆಯನ್ನು ತೆರವು ಮಾಡಲಾಗಿದೆ.ಇದರಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗಿದ್ದಲ್ಲದೇ, ಸಾಕಷ್ಟು ಹಣವೂ ಖರ್ಚಾಗಿದೆ ಎಂದು ಅವರ ಪತಿ ಗಗನ್ ದೀಪ್ ಬಿಆರೋಪಿಸಿದ್ದಾರೆ
ಸ್ನೇಹಿತರೇ... ಡಾಕ್ಟರ ಅನಿಲ್ ನಿರ್ಲಕ್ಷದಿಂದ ಸಾಕಷ್ಟು ನೋವು ಅನುಭವಿಸಿದ ಕುಟುಂಬ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಪಿ.ಜಿ. ಪೋರ್ಟಲ್‌ನಲ್ಲಿ ಮೊದಲು ದೂರು ದಾಖಲಿಸಿದ್ದಾರೆ.ಅಷ್ಟೇ ಅಲ್ಲದೆ ಫೆಬ್ರವರಿ 22ರಂದು ಜಿಲ್ಲಾ ಆರೋಗ್ಯಧಿಕಾರಿಗಳಿಗೆ ವೈದ್ಯರ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲಾಗಿದೆ. ಫೆಬ್ರವರಿ 23ರಂದು ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಅನಿಲ್ ಮೇಲೆ ಪುತ್ತೂರು ನಗರ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಡಿಯನ್ ಮೆಡಿಕಲ್ ಬೋರ್ಡ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲೂ ದೂರು ದಾಖಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗಗನ್ ದೀಪ್ ಹೇಳಿದ್ದಾರೆ . ಇನ್ನು ಇವರ ಸಂಬಂಧಿಕರಾದ ಶಿವಪ್ರಸಾದ್ ಸರಳಿ ಮತ್ತು ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಲು ಕೇಳಿಕೊಂಡಿದ್ದಾರೆ