ಅವಿವಾ ಜೊತೆ ಅಭಿಷೇಕ್ ಹನಿಮೂನ್, ಕಾಡಿನ ಮಧ್ಯೆ ಜೀಪ್ ನಿಲ್ಲಿಸಿ ತುಂಟಾಟ

 | 
Hshs

ಕೆಲವೇ ತಿಂಗಳುಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಸುತ್ತಾಟ ನಡೆಸಿದ್ದಾರೆ. ಬಿಳಿ ಬಣ್ಣದ ಜೀಪ್‌ನಲ್ಲಿ ಸುತ್ತಾಟ ಮಾಡಿದ ಈ ಜೋಡಿ ಒಂದಷ್ಟು ಸುಂದರ ಸಮಯವನ್ನು ಕಳೆದಿದೆ. 

ಅವಿವಾ ಅವರು ಈ ರೊಮ್ಯಾಂಟಿಕ್ ಕ್ಷಣಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದನ್ನು ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಅಂಬರೀಶ್ ಅವರು 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತು ಭಾರೀ ಕುತೂಹಲ ಸೃಷ್ಟಿಯಾಗಿದೆ. 

ಇದರ ಜೊತೆಗೆ ಸಿನಿಮಾ ಕಾರ್ಯಕ್ರಮಗಳಿಗೆ ಅವಿವಾ ಅವರು ಪತಿಯ ಜೊತೆಗೆ ಹಾಜರಿ ಹಾಕುತ್ತಿದ್ದಾರೆ. ಅವಿವಾ ಬಿದ್ದಪ್ಪ ಮತ್ತು ಅಭಿಷೇಕ್ ಅಂಬರೀಶ್ ಯಾವ ಅರಣ್ಯದಲ್ಲಿ ಇದ್ದಾರೆ ಅನ್ನುವ ವಿಷಯ ಶೇರ್ ಮಾಡಿಕೊಂಡಿಲ್ಲ. ಆದರೆ ಇರೋ ಫೋಟೋದಲ್ಲಿ ಸುಂದರ ಕ್ಷಣಗಳು ಕ್ಯಾಪ್ಚರ್ ಆಗಿವೆ. ಪತಿ-ಪತ್ನಿಯ ಸುಮಧುರ ಕ್ಷಣದ ಚಿತ್ರಣದಂತೇನೂ ಕಾಣಿಸುತ್ತಿವೆ.

ಅವಿವಾ ಮತ್ತು ಅಭಿ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಜೀಪ್‌ ಮೇಲೆ ರೊಮ್ಯಾಂಟಿಕ್ ಪೋಸ್ ಕೊಟ್ಟಿದ್ದಾರೆ. ಇಡೀ ಊರು ಕಾವೇರಿ ನೀರಿನ ಚಿಂತೆ ಮಾಡುತ್ತಿದೆ ಆದರೆ ನೀವಿಬ್ಬರು ಜಾಲಿ ಮೂಡ್‌ನಲ್ಲಿದ್ದೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.