ಮದುವೆ ಮುನ್ನ ರಾತ್ರಿ ಬಾ ಅಂತ ಕರೆದಿದ್ದ; ಮೌನಮುರಿದ ಸಂಜು ಬಸಯ್ಯ ಪತ್ನಿ

 | 
Nd
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದಿಂದ ಫೇಮಸ್‌ ಆದ ಸಂಜು, ತಮ್ಮ ಕುಟುಂಬ ನಡೆಸಿಕೊಂಡು ಬರ್ತಿದ್ದ ಆರ್ಕೆಸ್ಟ್ರಾಗಳಲ್ಲಿಯೂ ಮತ್ತಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡರು. ಉತ್ತರ ಕರ್ನಾಟಕ ಭಾಗದ ಬಹುತೇಕ ಜಾತ್ರಾ ಸಮಯದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಗಳು, ನಾಟಕಗಳಲ್ಲಿ ಕಾಣಿಸಿಕೊಂಡು ಫೇಮ್‌ ಗಿಟ್ಟಿಸಿಕೊಂಡರು. 
ಮದುವೆ ಬಳಿಕ ಜೋಡಿ ನಂಬರ್‌ 1 ಶೋನಲ್ಲಿಯೂ ಪತ್ನಿ ಪಲ್ಲವಿ ಬಳ್ಳಾರಿ ಅವರ ಜತೆಗೆ ತೆರಳಿದ್ದರು. ಆದರೆ, ಇದೇ ಸಂಜು ಬಸಯ್ಯ ಮತ್ತು ಪಲ್ಲವಿ ಜೋಡಿಯ ಮದುವೆ ಅಷ್ಟು ಸುಲಭವಾಗಿ ನಡೆದಿಲ್ಲ. ಏಕೆಂದರೆ, ಈ ಜೋಡಿ ಎರಡೂ ಮನೆ ಕಡೆಯಿಂದ ಒಪ್ಪಿ ಮದುವೆ ಆಗಿಲ್ಲ. ಕೊನೆಗೆ ರಜಿಸ್ಟರ್ ಮದುವೆ ಆಗಿ ನಂತರದಲ್ಲಿ ಮನೆಯವರ ಒಪ್ಪಿಗೆ ಪಡೆದಿದ್ದಾರೆ.
ನಾನು ನಾಟಕಗಳನ್ನು ಮಾಡುತ್ತಿದ್ದೆ, ಆರ್ಕೆಸ್ಟ್ರಾದಲ್ಲಿ ಭಾಗವಹಿಸುತ್ತಿದ್ದೆ. ಆಗ ನನಗೆ ಸಂಜು ಬಸಯ್ಯ ಅವರು ಪರಿಚಯ ಆಯ್ತು. ಸಂಜು ಅವರನ್ನು ನೋಡಿ ನಾನು ನನಗಿಂತ ಚಿಕ್ಕವರು ಅನ್ಕೊಂಡಿದ್ದೆ, ಆಮೇಲೆ ಅವರು ನನಗಿಂತ 6 ತಿಂಗಳು ದೊಡ್ಡವರು ಅಂತ ಗೊತ್ತಾಯ್ತು. ಆರಂಭದಲ್ಲಿ ನಾನು, ಸಂಜು ಸ್ನೇಹಿತರಾಗಿದ್ದೆವು, ನಾನು ಏನೇ ಕಷ್ಟ ಸುಖ ಇದ್ದರೂ ಅವರ ಬಳಿ ಹೇಳ್ತಿದ್ದೆ, ಅವರು ನನಗೆ ಮೆಸೇಜ್ ಮಾಡ್ತಿದ್ರು, ವಿಡಿಯೋ ಕಾಲ್ ಮಾಡ್ತಿದ್ರು. ಆಮೇಲೆ ಒಂದಿನ ಅವರು ನನಗೆ ಪ್ರೇಮ ನಿವೇದನೆ ಮಾಡಿದರು. ನಾನು ಮೂರು ದಿನ ಬಿಟ್ಟು ಉತ್ತರ ಕೊಟ್ಟೆ.
ಈ ಕುಳ್ಳನಿಂದ ನೀನೇನು ಸುಖ ಪಡ್ತೀ ಎಂದು ಒಂದು ಸೂಟ್ ಕೇಸ್ ತುಂಬ ಹಣ ತಂದು ಕೊಟ್ಟು ಮದುವೆ ಆಗ್ತೀನಿ ಅಂದಿದ್ದರು ಆದ್ರೆ ನಾನು ಅದ್ಯಾವುದಕ್ಕೂ ಕರಗಲೇ ಇಲ್ಲ. ಇನ್ನು ಜನರು ತುಂಬ ಹೀಯಾಳಿಸಿ ಮಾತನಾಡಿದ್ರು. ನಾನು ಈ ವೇದಿಕೆ ಮೇಲೆ ನಿಲ್ಲಲು ನನ್ನ ತಂದೆ ಹಾಗೂ ಪಲ್ಲವಿ ಕಾರಣ. ನಾನು ಪಲ್ಲವಿಯನ್ನು ಅರ್ಥ ಮಾಡಿಕೊಂಡಿದ್ದೀನಿ, ಅವಳು ನನ್ನ ಅರ್ಥ ಮಾಡಿಕೊಂಡಿದ್ದಾಳೆ. ದಯವಿಟ್ಟು ಯಾರೂ ಚಟಕ್ಕೋಸ್ಕರ ಪ್ರೀತಿ ಮಾಡಬೇಡಿ, ಮನಸ್ಸಿನಿಂದ ಪ್ರೀತಿ ಮಾಡಿ ಎಂದು ಸಂಜು ಬಸಯ್ಯ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.