ಮಗನಿಗಾಗಿ ರಾತ್ರಿಯಿಡೀ ನಿದ್ದೆಗೆಟ್ಟ ನಟ ವಿಜಯ ರಾಘವೇಂದ್ರ, ಕಂಬನಿ ಮಿಡಿದ ಕನಾ೯ಟಕ
Feb 9, 2025, 10:57 IST
|

ಸಿನಿಮಾ ತಾರೆಯರು ಅಂದ್ರೆ ಬಿಡಿ. ಮಕ್ಕಳನ್ನು ಕೂಡ ಬಾಡಿಗೆ ತಾಯಿಯ ಹತ್ರ ಮಾಡಿ ಕೊಳ್ತಾರೆ. ಬೆಳೆಸೋದು ಕೂಡಾ ಆಳುಗಳು ಅನ್ನೊ ಮೊದ್ಲು ಇಲ್ಲೊಮ್ಮೆ ನೋಡಿ.ಸಾಮಾನ್ಯವಾಗಿ ಮನೆಗಳಲ್ಲಿ ಅಮ್ಮಂದಿರೇ ಮಕ್ಕಳ ಸಲುವಾಗಿ ನಿದ್ದೆಗೆಡುವುದು ಸಹಜ. ಆಕೆ ನೌಕರಿಗೆ ಹೋಗುತ್ತಿರಲಿ ಇಲ್ಲವೇ ಮನೆಕೆಲಸಗಳಲ್ಲಿ ಬಿಜಿ ಇರಲಿ, ನಸುಕಿನಲ್ಲಿಯೇ ಏಳುವ ಅನಿವಾರ್ಯತೆಯೂ ಇರಲಿ... ಕುಟುಂಬ, ಮಕ್ಕಳ ವಿಷಯ ಬಂದಾಗ ಎಲ್ಲರ ಮನೆಯಲ್ಲಿ ಅಲ್ಲದಿದ್ದರೂ ಬಹುತೇಕರ ಮನೆಯಲ್ಲಿ ಅಮ್ಮಂದೇ ಕಾಳಜಿ ಹೆಚ್ಚು.
ಅದರಲ್ಲಿಯೂ ಮಕ್ಕಳು ಪರೀಕ್ಷೆಯ ಸಮಯದಲ್ಲಿ ನಿದ್ದೆಗೆಟ್ಟು ಓದುತ್ತಿದ್ದರೆ, ಅವರಿಗೆ ಮಧ್ಯರಾತ್ರಿ ಬೇಕಾದ ತಿಂಡಿ, ಪಾನೀಯ ಪೂರೈಕೆ ಮಾಡಬೇಕಲ್ಲ, ಅದಕ್ಕಾಗಿಯಾದರೂ ಅಮ್ಮಂದಿರು ಎದ್ದಿರುತ್ತಾರೆ.ಇದೀಗ ನಟ ವಿಜಯ ರಾಘವೇಂದ್ರ ಅವರೂ ನಿದ್ದೆಗೆಟ್ಟು ಒಂದು ವಿಡಿಯೋ ಮಾಡಿ ಅದನ್ನು ಅಪ್ಲೋಡ್ ಮಾಡಿದ್ದಾರೆ.
ಅವರು ಅದರಲ್ಲಿ ನಿದ್ದೆಗೆಟ್ಟು ಕಾಯುತ್ತಿರುವುದನ್ನು ನೋಡಬಹುದು. ಅವರು ಮಾತಿನಲ್ಲಿ ಏನೂ ಹೇಳದಿದ್ದರೂ, ಅವರ ಹಿಂದುಗಡೆ ಮಗ ಓದುತ್ತಿರುವುದನ್ನು ನೋಡಬಹುದಾಗಿದೆ. ಪರೀಕ್ಷೆಯ ಸಮಯ ಎಂದು ವಿಜಯ್ ರಾಘವೇಂದ್ರ ಶೀರ್ಷಿಕೆ ಕೊಟ್ಟಿರು ಕಾರಣ, ಮಗನಿಗಾಗಿ ಅಪ್ಪ ರಾತ್ರಿ ಜಾಗರಣೆ ಮಾಡುತ್ತಿರುವುದು ತಿಳಿಯುತ್ತದೆ.
ಅಂದಹಾಗೆ ವಿಜಯ ರಾಘವೇಂದ್ರ ಮತ್ತು ಸ್ಪಂದನಾ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಗ ಶೌರ್ಯನಿಗೆ ಪಾಲಕರಾಗಿದ್ದಾರೆ. ಅದರೆ ಸ್ಪಂದನಾ ಅವರು 2023ರಲ್ಲಿ ಎಲ್ಲರನ್ನೂ ಬಿಟ್ಟು ಅಗಲಿದರು. ಇದೀಗ ಮಗನಿಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ ವಿಜಯ್ ಅವರು. ಮಗನ ಪರೀಕ್ಷೆಯ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಜೊತೆ ಪತ್ನಿ ಸ್ಪಂದನಾ ಕೂಡ ಹೀಗೆ ಕಾಳಜಿ ತೋರುತ್ತಿದ್ದರು.
ವಿಧಿಯ ಆಟದ ಮುಂದೆ ಏನು ಹೇಳಬೇಕು ಎಂದು ಅಭಿಮಾನಿಗಳು ವಿಜಯ್ ಅವರ ವಿಡಿಯೋಗೆ ಕಮೆಂಟ್ ಮೂಲಕ ಕಂಬನಿ ಮಿಡಿಯುತ್ತಿದ್ದಾರೆ. ಮಗ ಶೌರ್ಯನಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತಿದ್ದಾರೆ. ಆತ ಕೂಡ ಅಪ್ಪನಂತೆ ಸಿನಿಮಾದಲ್ಲಿ ಮಿಂಚಲಿ ಎನ್ನುವುದು ಅಭಿಮಾನಿಗಳ ಹಾರೈಕೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.