ಖ್ಯಾತ ಕಾಮಿಡಿ ನಟನ ವಿರುದ್ಧ ನಟಿ ಪ್ರೇಮಾ ಗಂಭೀರ ಆರೋಪ, ಕಣ್ಣೀರಿಟ್ಟ ಚಿತ್ರರಂಗದ ಕಲಾವಿದರು

 | 
Nd

ಕಾಲಿವುಡ್ ಹಾಸ್ಯ ನಟ ವಡಿವೇಲು ಯಾರಿಗೆ ಗೊತ್ತಿಲ್ಲ ಹೇಳಿ.ಭಾಷೆ ಮೀರಿದ ಪ್ರೀತಿ ತೋರಿಸಿ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರರಂಗದವರು ಕೂಡ ವಡಿವೇಲು ಸಿನಿಮಾ ಅಂದ್ರೆ ತುಂಬಾ ಇಷ್ಟ ಪಡುತ್ತಾರೆ. ಒಂದು ಕಾಲದಲ್ಲಿ ವಡಿವೇಲು ಸಿನಿಮಾದಲ್ಲಿದ್ದಾರೆ ಅಂದ್ರೆ ಕಥೆ ಸೂಪರ್ ಹಿಟ್ ಕಾಮಿಡಿ ಡಬಲ್ ಹಿಟ್ ಅನ್ನೋ ಲೆಕ್ಕ ಇರುತ್ತಿತ್ತು. ಹೀಗಾಗಿ ಅದೆಷ್ಟೋ ಸಲ ವಡಿವೇಲು ಹೇಳಿದ ರೀತಿ ನಿರ್ದೇಶಕರು ಮತ್ತು ನಿರ್ಮಾಪಕರು ಕೇಳುತ್ತಿದ್ದರಂತೆ. 

ಆದರೆ ಇದರಿಂದ ಅದೆಷ್ಟೋ ಮಂದಿಗೆ ಕಷ್ಟವಾಗಿತ್ತು ಆಗ ಯಾರೂ ಹೇಳಿಕೊಂಡಿರಲಿಲ್ಲ ಈಗ ಒಬ್ಬೊಬ್ಬರಾಗಿ ಹಂಚಿಕೊಳ್ಳುತ್ತಿದ್ದಾರೆ. ಹೌದು! ತಮಿಳು ನಟಿ ಪ್ರೇಮಾ ಪ್ರಿಯಾ ಕೆಲವು ದಿನಗಳ ಹಿಂದೆ ಯುಟ್ಯೂಬ್ ಸಂದರ್ಶನದಲ್ಲಿ ವಡಿವೇಲು ನನ್ನ ವೃತ್ತಿ ಬದುಕು ನಾಷ ಮಾಡಿದ್ದಾರೆ ಎಂದು ಹೇಳಿದ್ದಾರೆ. ಪ್ರೇಮಾ ಗಂಭೀರ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಇತ್ತೀಚಿಗೆ ವಡಿವೇಲು ಮಾಮಣ್ಣನ್ ಸಿನಿಮಾ ನಟಿಸಿದ್ದಾರೆ ವಿಶೇಷ ಪಾತ್ರವಾಗಿದ್ದು ಸಿನಿರಸಿಕರ ಮಚ್ಚುಗೆ ಪಡೆದಿದ್ದಾರೆ. ಖುಷಿಯಲ್ಲಿ ಸುದ್ದಿಯಲ್ಲಿರುವ ವಡಿವೇಲು ವಿರುದ್ಧ ನಾಯಕಿಯರು ಬಾಂಬ್ ಹಾಕುತ್ತಿದ್ದಾರೆ. ಸಾಕಷ್ಟು ಪಾತ್ರಗಳು ನನ್ನನ್ನು ಹುಡುಕಿಕೊಂಡು ಬಂದಿತ್ತು. ಆದರೆ ವಡಿವೇಲು ಮಧ್ಯೆ ಪ್ರವೇಶ ಮಾಡಿದ್ದರಿಂದ ಬೇರೆಯವರ ಪಾಲಾಗಿತ್ತು ಎಂದಿ 62 ವರ್ಷದ ವಡಿವೇಲು ವಿರುದ್ಧ ಹೇಳಿಕೆ ನೀಡಿದ್ದಾರೆ. 'ನಾನು ವಡಿವೇಲು ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವೆ. 

ಆದರೆ ವಡಿವೇಲು ಅವರೇ ಚಿತ್ರರಂಗದಲ್ಲಿ ನನ್ನ ಬೆಳವಣಿಗೆಯನ್ನು ತಡೆದರು. ತುಂಬಾ ಅವಕಾಶಗಳು ನನ್ನನ್ನು ಹುಡುಕಿಕೊಂಡು ಬಂದಿದ್ದವು ಆದೆಲ್ಲಾ ತಡೆದಿರುವುದು ವಡಿವೇಲು ಅವರೇ. ಒಳ್ಳೆ ಸಿನಿಮಾಗಳನ್ನು ಕೈ ತಪ್ಪಿ ಹೋದವು. ವಡಿವೇಳು ವಿರುದ್ಧ ಮಾತಾಡಿದ್ದಕ್ಕೆ ನಿರ್ದೇಶಕರೊಬ್ಬರು ನನಗೆ ಅವಕಾಶ ಕೊಡುವುದಕ್ಕೆ ನಿರಾಕರಿಸಿದರು. ಅಷ್ಟೇ ಅಲ್ಲದೆ ಆ ವಿಡಿಯೋವನ್ನು ತೆಗೆದು ಹಾಕುವಂತೆ ಕೇಳಿಕೊಂಡಿದ್ದರು ಎಂದು ಪ್ರೇಮಾ ಪ್ರಿಯಾ ಹೇಳಿದ್ದಾರೆ. 

ವಲ್ಲವನ್, ಸಿಂಗಂ, ರಾಜಾ ರಾಣಿ, ಮಣಿದನ್, ಹರ ಹರ ಮಹಾ ದೇವಕಿ. ಅಡೈ, ಸಭಾಪತಿ ಅಂತ ಸಿನಿಮಾಗಳಲ್ಲಿ ಪ್ರೇಮಾ ಪ್ರಿಯಾ ನಟಿಸಿದ್ದಾರೆ. ಪ್ರೇಮಾ ಪ್ರಿಯಾ ಕೂಡ ತಮಿಳು ಚಿತ್ರರಂಗದ ಜನಪ್ರಿಯಾ ಹಾಸ್ಯ ನಟಿ. ಕೊರೋನಾ ಸಮಯದಲ್ಲಿ ಕುಟುಂಬವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡರು. 

ಕೊರೋನಾ ಸಮಯದಲ್ಲಿ ನನ್ನ ಸಹೋದರಿ ಅಗಲಿದರು. 10 ದಿನಗಳ ಬಳಿಕ ನನ್ನ ತಂದೆ ಅಗಲಿದರು. ಎರಡು ತಿಂಗಳ ಬಳಿಕ ನನ್ನ ಗಂಡ ಕೂಡ ಬಹು ಅಂಗಾಗ ವೈಫಲ್ಯದಿಂದ ಅಗಲಿದರು. ಆ ವೇಳೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೆ. ಏನು ಮಾಡಬೇಕು ಅಂತಾನೆ ಗೊತ್ತಾಗಲಿಲ್ಲ. ಆಗ ನಟ ಸೂರಿ ಅರ್ಥಿಕವಾಗಿ ಸಹಾಯ ಮಾಡಿದರು. ಅವರನ್ನು ಎಂದೂ ಮರೆಯುವುದಿಲ್ಲ ಎಂದು ಪ್ರೇಮಾ ಪ್ರಿಯಾ ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.