ಬಳಕುವ ಬಳ್ಳಿಯಂತೆ ರಾಕಿ ಬಾಯ್ ಜೊತೆ ಸ್ಟೆಪ್ ಹಾಕಿದ ನಟಿ ರಮ್ಯಾಕೃಷ್ಣ, ರಾಧಿಕಾ ಪಂಡಿತ್ ಗರಂ

 | 
ರು

 ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಗಿದೆ. ಜೂನ್ 5ರಂದೇ ಹೊಸ ಜೀವನ ಆರಂಭ ಆಗಿದೆ. ಆದರೆ, ಸಂಭ್ರಮ ಮಾತ್ರ ಇನ್ನೂ ಮುಗಿದಿಲ್ಲ. ನಿನ್ನೆಯಷ್ಟೇ ಜೋಡಿ ಆತ್ಮೀಯರಿಗೆ ಹಾಗೂ ಸ್ನೇಹಿತರಿಗೆ 'ಸಂಗೀತ್' ಕಾರ್ಯಕ್ರಮವನ್ನು ಆಯೋಜಿಸಿತ್ತು.ಖಾಸಗಿ ಹೊಟೇಲ್‌ನಲ್ಲಿ ಸುಮಲತಾ ಅಂಬರೀಶ್ ಈ ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. 

ಅಲ್ಲದೆ ಬೇರೆ ಬೇರೆ ಕ್ಷೇತ್ರದಲ್ಲಿರೋ ತಮ್ಮ ಆತ್ಮೀಯರಿಗೆ ಆಹ್ವಾನವನ್ನೂ ನೀಡಿದ್ದರು. ಯಶ್, ದರ್ಶನ್ ಸೇರಿದಂತೆ ಚಿತ್ರರಂಗದ ಗಣ್ಯರು ಈ ಸಂಗೀತ್ ಸಮಾರಂಭದಲ್ಲಿ ಭಾಗಿಯಾಗಿದ್ದರು.ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಆರತಕ್ಷತೆಗೆ ಬರಲು ಸಾಧ್ಯವಾಗದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 

ಸುಮಲತಾ ಬಹುಭಾಷಾ ನಟಿ. ಅವರಿಗೆ ದಕ್ಷಿಣ ಭಾರತದಲ್ಲಿ ಸ್ನೇಹಿತೆಯರ ಬಳಗವೇ ಇದೆ. ಹೀಗಾಗಿ ಮದುವೆಗೆ, ಆರತಕ್ಷತೆಗೆ ಬರಲಾರದವರು ಸಂಗೀತ್‌ ಕಾರ್ಯಕ್ರಮಕ್ಕೆ ಬಂದಿದ್ದರು. 'ಬಾಹುಬಲಿ' ಶಿವಗಾಮಿ ಖ್ಯಾತಿಯ ರಮ್ಯಾಕೃಷ್ಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.


ಅಭಿಷೇಕ್ ಅಂಬರೀಶ್-ಅವಿವಾ ಸಂಗೀತ್ ಕಾರ್ಯಕ್ರಮದಲ್ಲಿ ಬಹುಭಾಷಾ ನಟಿ ರಮ್ಯಾ ಕೃಷ್ಣ ಜೊತೆಗೆ ಮಾಲಾಶ್ರೀ ಭಾಗವಹಿಸಿದ್ದರು. ಈ ವೇಳೆ ಸುಮಲತಾ ಜೊತೆ ರಮ್ಯಾ ಕೃಷ್ಣ, ಮಾಲಾಶ್ರೀ ಮೂವರು ಸೇರಿ ಹೆಜ್ಜೆ ಹಾಕಿದರು.
ಇನ್ನು ಕೆಜಿಎಫ್ ಸ್ಟಾರ್ ಯಶ್ ಹಾಗೂ ನಟಿ ರಮ್ಯಾ ಕೃಷ್ಣ ಸಕ್ಕತ್ತಾಗಿ ನೃತ್ಯ ಮಾಡಿದ್ದಾರೆ. ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳು ಕೇಜಿಎಫ್ vs ಬಾಹುಬಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.