ತಂದೆಯ ಸಾವಿನ ಬಳಿಕ ಮನೆಯಲ್ಲಿ ದೆವ್ವ ಓಡಾಡುತ್ತಿತ್ತು; ಅವಳಿ ಜವಳಿ ನಟಿಯರು ಬಿ ಚ್ಚಿಟ್ಟ ಸತ್ಯ

 | 
Hs
ಸ್ಯಾಂಡಲ್ವುಡ್ನ ಹಿಟ್ ಸಿನಿಮಾ ರಾಮಾಚಾರಿಯಲ್ಲಿ ನಟಿಸಿದ್ದ ನಟಿ ಅದ್ವಿತಿ ಶೆಟ್ಟಿ, ಆಶ್ವಿತಿ ಸಿನಿಪ್ರಿಯರಿಗೆ ಚಿರಪರಿಚಯ. . ನೋಡುವುದಕ್ಕೆ ಒಂದೇ ರೀತಿ ಇರುವ ನಟಿ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ಇನ್ಸ್ಟಾಗ್ರಾಂನಲ್ಲೂ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದಾರೆ. ಅದರಲ್ಲೂ ಆಗಾಗ ಸ್ಟೋರಿ ಹಾಕಿಕೊಂಡು ಸಖತ್‌ ಸುದ್ದಿಯಲ್ಲಿ ಇರುತ್ತಾರೆ.
ಇತ್ತೀಚೆಗೆ ನಟಿಯರ ತಂದೆ ನಿಧನರಾಗಿದ್ದರು. ಸ್ಟೋರಿ ಹಾಕಿದ ನಟಿ ಓಂ ಶಾಂತಿ ಎಂದು ಬರೆದಿದ್ದರು. ನಟಿಯ ಈ ಪೋಸ್ಟ್ ನೋಡಿದ ನೆಟ್ಟಿಗರು ನಟಿ ತಂದೆಯನ್ನು ಕಳೆದುಕೊಂಡಿದ್ದು ಓಂ ಶಾಂತಿ ಎಂದು ಕಮೆಂಟ್ ಮಾಡಿ ಸಮಾಧಾನ ಮಾಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ತಂದೆ ಸತ್ತ ನಂತರ, ಅವರ ಆತ್ಮ ಕಂಡು ಬೆಚ್ಚಿಬಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಪ್ಪ ತೀರಿಕೊಂಡ ನಂತರ ಅವರ ಆತ್ಮ ನಮ್ಮ ಮನೆಯಲ್ಲೇ ಇತ್ತು. 
ಅವರ ಆತ್ಮವನ್ನು ನಾವು ನೋಡಿದ್ದೇವೆ. ಅವರಿಗೆ ಅವರದ್ದೇ ಆದ ಒಂದು ಫೇವರೇಟ್‌ ಖುರ್ಚಿ ಇತ್ತು. ಅದರಲ್ಲಿ ಕೂರಿಸಿದ್ವಿ.ಅಪ್ಪನ ಕಾರ್ಯ ಎಲ್ಲವೂ ಮುಗಿದ ಮೇಲೆ ಆ ಚೇರನ್ನು ಯಾರೋ ಅಡುಗೆ ಮನೆಯ ಒಳಗಡೆ ಇಟ್ಟು ಬಿಟ್ಟಿದ್ದರು. ರಾತ್ರಿ ನಾವು ಹೀಗೆ ಸೋಫಾ ಮೇಲೆ ಕೂತ್ಕೊಂಡಿದ್ದಾಗ ಯಾರೋ ಕಿಚನ್‌ ಒಳಗೆ ಹೋದಂತೆ ಅಯ್ತು. ಅದೇ ಪಂಚೆ ಮತ್ತು ಸರ್ಟ್‌ನಲ್ಲಿ ಹೇಗೆ ಕಾಣಿಸಿದ್ದರೋ ಅದೇ ರೀತಿ ಅವರ ನೆರಳನ್ನು ನೋಡಿದ್ದೇವು ಎಂದು ಹೇಳಿಕೊಂಡಿದ್ದಾರೆ.
ಹಾಗೇ ನಾರ್ಮಲ್‌ ಆಗಿ ಒಂದು ದಿನ ಇದ್ದೆವು.. ನಾನು ಆ ರಾತ್ರಿ ಯಾರಿಗೂ ಏನನ್ನೂ ಹೇಳಲಿಲ್ಲ. ಮರುದಿನ ಎಲ್ಲರಿಗೂ ಹೇಳಿದೆ ಅಪ್ಪನನ್ನು ನೋಡಿದೆ ಅಂತ. ಎಲ್ರೂ ಶಾಕ್‌ ಆಗಿದ್ದರು. ಅಪ್ಪ ತೀರಿಕೊಳ್ಳುವ ಮುಂಚೆ ಅವರು ಬಳಸುತ್ತಿದ್ದ ಪೌಡರ್‌ ವಾಸನೆ ಅವರು ಹೋದಮೇಲೆ ಆಗಾಗ ಬರುತ್ತಿತ್ತು.ಇನ್ನು ವಿಚಿತ್ರ ಅಂದರೆ ಅವರು ಅನಾರೋಗ್ಯ ತಪ್ಪಿದಾಗ ಅವರಿಗೆ ಮಾತೇ ನಿಂತು ಹೋಗಿತ್ತು. ಅವರಿಗೆ ನಮ್ಮ ಮನೆಯ ನಾಯಿ ತುಂಬಾ ಇಷ್ಟ. ನಾಯಿ ಮಾತ್ರ ಅಪ್ಪನನ್ನು ನೋಡುತ್ತಿರಲಿಲ್ಲ. 
ಆದರೆ ಅಪ್ಪ ತೀರಿಕೊಂಡ ಎರಡನೇ ದಿನ ನಾಯಿ ಕೊಟ್ಟ ವಿಚಿತ್ರ ಲುಕ್‌ಗೆ ನನ್ನ ಅಮ್ಮ ಭಯ ಪಟ್ಟು ಜೋರಾಗಿ ಕಿರುಚಿದರು.ಅಣ್ಣ ಓಡಿಬಂದು ನೋಡಿದಾಗ ಮತ್ತೆ ಅಪ್ಪ ಬಳಸುತ್ತಿದ್ದ ಅದೇ ಪೌಡರ್ ವಾಸನೆ ಆ ನಾಯಿಯಿದ್ದ ಜಾಗದಲ್ಲಿ ತುಂಬಾ ಜೋರಾಗಿ ಮೂಗಿಗೆ ಬರುತ್ತಿತ್ತು ಎಂದಿದ್ದಾರೆ ಸಹೋದರಿಯರು. ಅಪ್ಪ ಸತ್ತ 11 ದಿನಗಳಲ್ಲಿ ಈ ರೀತಿಯ ಸಾಕಷ್ಟು ಅನುಭವಗಳಾಗಿವೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಇದನ್ನು ನೋಡಿದ ವೀಕ್ಷಕರು ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.