ಟ್ರೋಫಿ ಗೆದ್ದ ಬಳಿಕ‌ ಸಂಗೀತ ಮೇಲೆ ತಿರುಗಿ ಬಿದ್ದ ಕಾರ್ತಿಕ್, ಮನೆಯವರ ಮುಂದೆಯೇ ಆವಾಜ್

 | 
J

ಬಿಗ್ ಬಾಸ್ ಕನ್ನಡ ಸೀಸನ್ 10’ ವಿಜೇತ ಕಾರ್ತಿಕ್ ಮಹೇಶ್ ಅವರು ಚಿತ್ರರಂಗದಲ್ಲಿ 9 ವರ್ಷ ಕಷ್ಟಪಟ್ಟಿದ್ದು, ಧಾರಾವಾಹಿ, ಸಿನಿಮಾದಲ್ಲಿ ನಟಿಸಿದ್ದು, ಬಿಗ್ ಬಾಸ್ ಮನೆಯಲ್ಲಿನ ಆಟ, ಅವಮಾನ, ಆರೋಪಗಳ ಬಗ್ಗೆ ಈಗ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆಯ ಬಗ್ಗೆ ಅವರು ಮಾತನಾಡಿದ್ದಾರೆ.

ಮುಂಚೆ ಕಾರ್ತಿಕ್ ಮಹೇಶ್ ಅಂದರೆ ಕೆಲವರಿಗೆ ಗೊತ್ತಿತ್ತು, ಇವತ್ತು ಇಡೀ ಕರ್ನಾಟಕ ಯಾರು ಅಂತ ಗುರುತಿಸುತ್ತಿದೆ. ಕಾರ್ತಿಕ್ ಅಂದರೆ ನಿಮ್ಮನ್ನು ಎಲ್ಲೋ ನೋಡಿದೀನಲ್ಲಾ ಅಂತ ಹೇಳುತ್ತಿದ್ದವರು ಇಂದು ಬಿಗ್ ಬಾಸ್ ಮನೆಯಲ್ಲಿ ನಿತ್ಯ ನಿಮ್ಮನ್ನು ನೋಡುತ್ತಿದ್ವಿ, ಮತ ಹಾಕಿದ್ವಿ ಅಂತ ಹೇಳಿದ್ರು.

ಅವಮಾನ ಆಗಬೇಕು, ಅವಮಾನ ಆಗಿಲ್ಲ ಅಂದ್ರೆ ನಾನು ಹಾರಾಡುತ್ತಿದ್ದೆ. ಅವಮಾನ ಆದಾಗಲೇ ಅವರ ಸಾಮರ್ಥ್ಯ ಏನು ಅಂತ ಗೊತ್ತಾಗುತ್ತದೆ. ಒಂದಷ್ಟು ಬಾಣಗಳು ನನ್ನ ವಿರುದ್ಧ ಬಂದಿದ್ದಕ್ಕೆ ನಾನು ಏನು ಅಂತ ಗೊತ್ತಾಯ್ತು.ಟೀಕೆ ಮಾಡೋರು ಮಾಡ್ತಾ ಇರ್ತಾರೆ, ಟಿಪ್ಪಣಿ ಬರೆಯೋರು ಬರೆಯುತ್ತಿರುತ್ತಾರೆ, ಮಾತಾಡೋರು ಮಾತಾಡ್ತಾರೆ. ಅದಕ್ಕೆಲ್ಲ ಉತ್ತರ ಸಿಕ್ಕಿದೆ.

ಬಿಗ್ ಬಾಸ್ ಮನೆಯಲ್ಲಿಯೂ ಸಾಕಷ್ಟು ಮಾತು ಕೇಳಿ ಬಂತು. ತಂಗಿ ಮದುವೆ ಮಾಡಬೇಕಿತ್ತು. ತಂದೆ ಹೋದಮೇಲೆ ತುಂಬ ಕಷ್ಟ ಆಯ್ತು. ದುಡ್ಡಿಗೋಸ್ಕರ ನಾನು ಕೆಲಸ ಮಾಡಬೇಕಾಗಿ ಬಂತು. ಏನೇ ಮಾತು ಬಂದರೂ ನಾನು ನನ್ನ ಕೆಲಸದ ಬಗ್ಗೆ ಯೋಚನೆ ಮಾಡ್ತಿದ್ದೆ.ರಾತ್ರೋ ರಾತ್ರಿ ಈ ಥರ ಯಶಸ್ಸು ಸಿಕ್ಕಿದ್ರೆ ನನಗೆ ಮಾತಾಡೋಕೆ ಬರ್ತಿರಲಿಲ್ಲ. 

ನಾನು ಸಾಕಷ್ಟು ಕಷ್ಟಗಳನ್ನು ದಾಟಿ ಮುಂದೆ ಬಂದಿದ್ದೇನೆ. ನೋವು ಅನುಭವಿಸಿದಾಗಲೇ ಮನುಷ್ಯ ಮನುಷ್ಯನಾಗ್ತಾನೆ. ನಾನು ಝೀರೋ ಎಂದವರಿಗೆ ಇದು ನನ್ನ ಉತ್ತರ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.