ಭೇಟಿಯಾದ ಮಾತ್ರಕ್ಕೆ ದಶ೯ನ್ ನನ್ನ ನಡುವೆ ಎಲ್ಲವೂ ಸರಿಯಾಗಿಲ್ಲ, ಬತ್೯ಡೇ ದಿನ ರಹಸ್ಯ ಬಿಚ್ಚಿಟ್ಟ ಕಿಚ್ಚ

 | 
Hd

 ನಟ ಸುದೀಪ್ ಹಾಗೂ ದರ್ಶನ್ ನಡುವೆ ಸಂಧಾನ ನಡೆಯಲಿದೆ ಎಂಬ ಮಾತುಗಳು ತುಸು ಜೋರಾಗಿಯೇ ಇತ್ತೀಚೆಗೆ ಕೇಳಿ ಬಂದಿದ್ದವು. ಸಂಸದೆ, ನಟಿ ಸುಮಲತಾರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಪಾಲ್ಗೊಂಡಿದ್ದರು. ಇಬ್ಬರೂ ಸೇರಿ ‘ದಿಗ್ಗಜರು’ ಸಿನಿಮಾ ಮಾಡಲಿದ್ದಾರೆ ಎಂದೂ ಸಹ ಹೇಳಲಾಯ್ತು. ನಿನ್ನೆ ಸುದೀಪ್ ಹುಟ್ಟುಹಬ್ಬದಂದು ಮಾಧ್ಯಮಗಳೊಟ್ಟಿಗೆ ಕಿಚ್ಚ ಮಾತನಾಡುವಾಗ ಮತ್ತೆ ಈ ಪ್ರಶ್ನೆ ಎದುರಾಯ್ತು. ಪ್ರಶ್ನೆಗೆ ತಮಾಷೆಯಾಗಿಯೇ ಉತ್ತರ ಕೊಟ್ಟರು ಸುದೀಪ್.

ಇಬ್ಬರೂ ದೂರವಾಗಿರುವ ವಿಚಾರ ಗುಟ್ಟಿನದ್ದೇನಲ್ಲ. ಆದರೂ, ಇಬ್ಬರು ಮತ್ತೆ ಒಂದಾಗುತ್ತಾರೆ, ಮತ್ತೆ ಮೊದಲಿನಂತೆ ಸ್ನೇಹಿತರಾಗಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕಾಯುವಿಕೆ ಇಬ್ಬರ ಅಭಿಮಾನಿಗಳಲ್ಲೂ ಇದೆ. ಮೊನ್ನೆ ಅಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿತ್ತು. ಆದರೂ, ಇಬ್ಬರೂ ಮಾತಾಡಲಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇತ್ತು.

ಈ ಕುರಿತು ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಕುರಿತಾಗಿ ಮಾತನಾಡಿದ ಕಿಚ್ಚ, ನಾನು ಸುಮಲತಾ ಅವರ ಹುಟ್ಟು ಹಬ್ಬದ ಪಾರ್ಟಿಗೆ ಹೋಗಿದ್ದೆ. ಮುಂಚೆನೇ ದರ್ಶನ್ ಇರ್ತಾರೆ ಅಂತ ನಂಗೂ ಗೊತ್ತಿತ್ತು. ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನೋದು ಕಲ್ಪನೆ. ಗೋಡೆ ಮುರಿಬೇಕು, ಆದರೆ ಕಲ್ಪನೆ ಇರಬಾರದು. ನನ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ. ಪ್ರಶ್ನೆಗಳು ಬರ್ತಾವೆ, ಒಳ್ಳೇದು, ಕೆಟ್ಟದು ಇರ್ತಾವೆ. ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ. ಇಬ್ರು matured ಇದೀವಿ. ಎಲ್ಲವೂ ಸರಿ ಹೋಗ್ಬೇಕು, ಇಬ್ಬರೂ ಒಂದೇ ವೇದಿಕೆಯಲ್ಲಿ ಕಂಡ ಕ್ಷಣ ಎಲ್ಲವೂ ಸರಿ ಹೋಯಿತು ಎಂದಲ್ಲ. ಕಾಲ ಬಂದಾಗ ಸರಿ ಹೋಗುತ್ತೆ ಎಂದರು.

ಸುದೀಪ್ ಮತ್ತು ದರ್ಶನ್ ಯಾವ ಕಾರಣಕ್ಕೆ ದೂರವಾದರು ಎನ್ನುವುದು ಈಗಲೂ ಯಕ್ಷ ಪ್ರಶ್ನೆ. ಆದರೂ, ದರ್ಶನ್ ಬಗ್ಗೆ ಸುದೀಪ್ ಅವರಿಗೆ ಈಗಲೂ ಅದೇ ಸ್ನೇಹವಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸುದೀಪ್ ಮನೆಯಲ್ಲಿ ಈಗಲೂ ದರ್ಶನ್ ಫೋಟೋವಿದೆ. ಸುದೀಪ್ ಮತ್ತು ದರ್ಶನ್ ಆದಷ್ಟು ಬೇಗ ಒಂದಾಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.