ಅಚ್ಚಕನ್ನಡದಲ್ಲಿ ಮಾತಾನಾಡಿದ ಅನುಷ್ಕಾ ಶೆಟ್ಟಿ, ಬೆಚ್ಚಿಬಿದ್ದ ರಶ್ಮಿಕಾ ಮಂದಣ್ಣ

ಕನ್ನಡ ನಟಿಯರೇ ಕನ್ನಡ ಮಾತನಾಡಲು ಹಿಂಜರಿಯುವಾಗ ಇಲ್ಲೊಬ್ಬ ನಟಿ ತೆಲುಗು ತಮಿಳು ಚಿತ್ರರಂಗದಲ್ಲಿ ಅಭಿನಯಿಸಿದರೂ ಮಾತೃಭಾಷೆ ಎಂದಾಗ ಕನ್ನಡವನ್ನು ಮಾತಾಡಿ ಎಲ್ಲರಿಗೂ ಅಚ್ಚರಿಗೆ ದೂಡುತ್ತಾಳೆ. ಹೌದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿ ಅನುಷ್ಕಾ ಶೆಟ್ಟಿ ಹೆಚ್ಚು ಗುರುತಿಸಿಕೊಂಡಿರಬಹುದು, ಆದ್ರೆ ಆಕೆ ಮೂಲತಃ ಕರ್ನಾಟಕದವರು. ಮಂಗಳೂರಿನ ತುಳು ಕುಟುಂಬದಲ್ಲಿ ಹುಟ್ಟಿದ ನಟಿ ಅನುಷ್ಕಾ ಶೆಟ್ಟಿ. ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲಿ.
ಪ್ರತಿಭಾವಂತೆ ಅನುಷ್ಕಾ ಶೆಟ್ಟಿಗೆ ಅವಕಾಶಗಳು ಕೈಬೀಸಿ ಕರೆದಿದ್ದು ತೆಲುಗು ಸಿನಿ ಅಂಗಳ. ಸೂಪರ್, ಮಹಾನಂದಿ, ಅಸ್ತ್ರಂ,ಡಾನ್,ಅರುಂಧತಿ, ವೇದಂ,ಡಮರುಗಂ ,ಬಾಹುಬಲಿ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಅನುಷ್ಕಾ ಶೆಟ್ಟಿ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೊಂದಿದ್ದಾರೆ.
ಇನ್ನೂ ಬಿಲ್ಲಾ,ಸಿಂಗಂ,ವಾನಂ, ದೈವ ತಿರುಮಗಳ್, ಸಗುನಿ, ಲಿಂಗಾ ಚಿತ್ರಗಳ ಮೂಲಕ ತಮಿಳಿನಲ್ಲೂ ಗುರುತಿಸಿಕೊಂಡಿರುವ ನಟಿ ಅನುಷ್ಮಾ ಶೆಟ್ಟಿಗೆ ಕಾಲಿವುಡ್ ನಲ್ಲೂ ಹೆಚ್ಚು ಬೇಡಿಕೆ ಇದೆ.
ಇಂತಿಪ್ಪ ನಟಿ ಅನುಷ್ಮಾ ಶೆಟ್ಟಿ ಇಲ್ಲಿಯವರೆಗೂ ಸ್ಯಾಂಡಲ್ ವುಡ್ ಕಡೆಗೆ ಮುಖ ಮಾಡಿಲ್ಲ.
ಆದರೂ, ತಾಯ್ನಾಡು ಕರ್ನಾಟಕ ಮತ್ತು ಕನ್ನಡ ಭಾಷೆಯನ್ನು ನಟಿ ಅನುಷ್ಮಾ ಶೆಟ್ಟಿ ಮರೆತಿಲ್ಲ. ಅನುಷ್ಕಾ ಶೆಟ್ಟಿಯ ಆಡಿದ ಮಾತನ್ನು ಕೇಳಿದ ಕನ್ನಡಿಗರಿಗೆ ಬೆಲ್ಲ ತಿಂದಷ್ಟೇ ಖುಷಿ ಆಗಿದೆ.ತುಳುನಾಡ ಹುಡುಗಿ ಅನುಷ್ಕಾ ಶೆಟ್ಟಿ ಅವಕಾಶ ಸಿಕ್ಕಾಗೆಲ್ಲಾ ಕನ್ನಡದಲ್ಲೇ ಮಾತನಾಡುತ್ತಾರೆ. ಕನ್ನಡ ಚಿತ್ರರಂಗದ ಕುರಿತು ಅಥವಾ ಕರ್ನಾಟಕದ ಕುರಿತು ಯಾರಾದರೂ ಏನಾದರೂ ಕೇಳಿದರೆ, ಅನುಷ್ಕಾ ಶೆಟ್ಟಿ ಹೆಮ್ಮೆಯಿಂದ ಕನ್ನಡದಲ್ಲೇ ಉತ್ತರ ಕೊಡುತ್ತಾರೆ. ಹಲವು ಪ್ರೆಸ್ ಮೀಟ್ ಗಳಲ್ಲಿ, ಕಾರ್ಯಕ್ರಮಗಳಲ್ಲಿ ಕನ್ನಡ ಮಾತನಾಡಿ ಕನ್ನಡಿಗರ ಮನಸ್ಸನ್ನೂ ಅನುಷ್ಕಾ ಶೆಟ್ಟಿ ಗೆದ್ದಿದ್ದಾರೆ.
ಮಕರ ಸಂಕ್ರಾಂತಿ ಹಬ್ಬದಂದು ನಟಿ ಅನುಷ್ಕಾ ಶೆಟ್ಟಿ ಮಕರ ಸಂಕ್ರಾಂತಿ ಶುಭಾಶಯಗಳು ಎಂದು ಕನ್ನಡದಲ್ಲಿ ತಮ್ಮ ಫೇಸ್ ಬುಕ್ ಮೂಲಕ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಕನ್ನಡ ಭಾಷೆಯಲ್ಲಿ ಶುಭಾಶಯ ಹೇಳಿರುವುದನ್ನು ನೋಡಿದ ಕನ್ನಡಿಗರಿಗೆ ಎಳ್ಳು-ಬೆಲ್ಲ ಸವಿಯುವುದಕ್ಕಿಂತ ಹೆಚ್ಚು ಸಂತಸ ನೀಡಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.