ಅಪ್ಪು ಪತ್ನಿ ಅಶ್ವಿನಿ ಅವರ ಕೆಲಸ ನೋಡಿ ಮೆಚ್ಚುಗೆ ಪಟ್ಟ ಕನ್ನಡಿಗರು, ಎಂತಹ ವ್ಯಕ್ತಿತ್ವ

 | 
Bb

ಕೋಟ್ಯಂತರ ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್ ಕನ್ನಡಿಗರ ಎದೆಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಹೀಗೆ ಅವರು ಬದುಕಿದ್ದಾಗಲೂ ಕನ್ನಡ ಸಿನಿಮಾ ಜಗತ್ತಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾ ಬೆಂಬಲ ನೀಡುತ್ತಿದ್ದರು. ಈಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಕಾರ್ಯ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಹೌದು ಅಪ್ಪು ಅವರ ರೀತಿಯೇ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರೋತ್ಸಾಹ ನೀಡುತ್ತಿದ್ದಾರೆ. ಅದರಲ್ಲೂ ಹೊಸಬರ ಪ್ರೋತ್ಸಾಹಕ್ಕೆ ತಮ್ಮದೇ ಬ್ಯಾನರ್ ಅಡಿ ಬೆಂಬಲ ನೀಡಿದ್ದು ಹೆಮ್ಮೆಗೆ ಪಾತ್ರವಾಗಿತ್ತು. ಅದೇ ರೀತಿ ಹಬ್ಬದ ದಿನವೆ 'ಕೆಂದಾವರೆ' ಫಸ್ಟ್ ಲುಕ್ ರಿಲೀಸ್ ಮಾಡಿ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ್ದಾರೆ ದೊಡ್ಮನೆ ಸೊಸೆ.

ಅಷ್ಟು ಮಾತ್ರವಲ್ಲದೆ ಅಪ್ಪುವನ್ನು ನೆನಪು ಮಾಡಿಕೊಂಡು ಬರುವ ಅಭಿಮಾನಿಗಳಿಗೆ ಅಶ್ವಿನಿ ತನ್ನ ಕೈಲಾದ ಸಹಾಯ ಮಾಡುವುದಲ್ಲದೆ ಅಪ್ಪು ಇರುವಾಗ ಹೊಸ ವಸ್ತುಗಳ ಮುಟ್ಟಿ ಶುಭ ಹಾರೈಸುವಂತೆ ಈಗ ಅಶ್ವಿನಿ ಅವರು ಕೂಡ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. 

ಪುನೀತ್ ನಿಧನಾ ನಂತರ ಪಿ.ಆರ್.ಕೆ ಪ್ರೊಡಕ್ಷನ್ ಸಂಸ್ಥೆಯ ಪೂರ್ಣ ಪ್ರಮಾಣದ ಜವಾಬ್ದಾರಿಯನ್ನು ತೆಗೆದುಕೊಂಡಿರುವ ಅಶ್ವಿನಿ, ಸಿನಿಮಾಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಇಡೀ ಟೀಮ್ ಜೊತೆ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ಪ್ರಿಮಿಯರ್ ಶೋ ಆಯೋಜಿಸಿ, ಸಿನಿಮಾ ಪ್ರಚಾರ ಕೂಡ ಮಾಡುತ್ತಿದ್ದಾರೆ. 

ಒಟ್ಟಿನಲ್ಲಿ ಪುನೀತ್ ನಮ್ಮೊಂದಿಗಿಲ್ಲವಾದರೂ ಅವರು ನೀಡಿದ ಮಾರ್ಗದಲ್ಲಿ ನಡೆದು ಹಲವರ ಮೆಚ್ಚುಗೆಗೆ ಅಶ್ವಿನಿ ಅವರು ಪಾತ್ರರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.