ಮೇಲು ಜಾತಿಯವರಿಗೆ ಮಾತ್ರ ಅಧಿಕಾರನಾ, ರಾ ಜಕಾರಣಿಗಳ ಜಾತಿ ಲಿಸ್ಟ್ ಹೇಗೆ ಗೊ.ತ್ತಾ

 | 
Hd

2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ, ಬಿಜೆಪಿ ಹೈಕಮಾಂಡ್‌ ಹೊಸ ಉಸ್ತುವಾರಿಗಾಗಿ ಹುಡುಕಾಟ ನಡೆಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನ ನೀಡಿದೆ.

ಹೌದು, ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಬುಧವಾರ ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಯುವ ನಾಯಕರಿಗೆ ಮಣೆ ಹಾಕುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಕೊಡ್ಯೊಯ್ಯಲು ಹೆಗಲು ಕೊಟ್ಟಿದ್ದಾರೆ.

ಇನ್ನೂ 1980ರಲ್ಲಿ ಎ.ಕೆ ಸುಬ್ಬಯ್ಯ ಅವರು ಕರ್ನಾಟಕ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದು, ಬಳಿಕ ಬಿ.ಬಿ ಶಿವಪ್ಪ ಬಿ.ಎಸ್.‌ ಯಡಿಯೂರಪ್ಪ ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಹಲವರು ರಾಜ್ಯಾಧ್ಯಕ್ಷರಾಗಿ ಬಿಜೆಪಿಗೆ ದುಡಿದಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿರುವುದರಲ್ಲಿ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪನವರ ಪಾತ್ರ ಬಹಳ ದೊಡ್ಡದಿದೆ.‌ 

ಇನ್ನೂ ಇಲ್ಲಿಯವರೆಗೆ ರಾಜ್ಯ ಬಿಜೆಪಿ ಹೊಣೆ ಹೊತ್ತ ನಾಯಕರು ಯಾರು ಎಂಬ ಬಗ್ಗೆ ತಿಳಿದುಕೊಳ್ಳೋಣ.
 ಎ.ಕೆ. ಸುಬ್ಬಯ್ಯನವರು 1980 ರಿಂದ 1983 ತನಕ ಆಡಳಿತ ನಡೆಸಿದ್ದಾರೆ. ನಂತರದಲ್ಲಿ  ಬಿ.ಬಿ. ಶಿವಪ್ಪನವರು 1983ರಿಂದ 1988  ತನಕ ಆಡಳಿತ ನಡೆಸಿದ್ದಾರೆ.ನಂತರ ಬಿ.ಎಸ್.‌ ಯಡಿಯೂರಪ್ಪನವರು 1988 ನವರು 1991ತನಕ ಆಡಳಿತ ನಡೆಸಿದ್ದಾರೆ. 

ತದನಂತರದಲ್ಲಿ ಕೆ.ಎಸ್.‌ ಈಶ್ವರಪ್ಪ ಅವರು 1993-1998 ತನಕ ಆಡಳಿತ ನಡೆಸಿದ್ದಾರೆ.ಬಿ.ಎಸ್.‌ ಯಡಿಯೂರಪ್ಪ 1998-1999 ತನಕ  ಮತ್ತೋಮ್ಮೆ ಆಡಳಿತ ನಡೆಸಿದ್ದಾರೆ. ಇನ್ನು  ಬಸವರಾಜ ಪಾಟೀಲ್‌ ಸೇಡಂಳ 2000- 2003 ಅಂದರೆ 3 ವರ್ಷ ಆಡಳಿತ ನಡೆಸಿದ್ದಾರೆ . ನಂತರ ಅನಂತ್‌ ಕುಮಾರ್ ಅವರು 2003- 2004 ರ ಒಂದು ವರ್ಷದ ಅವಧಿಗೆ ಆಡಳಿತ ನಡೆಸಿದ್ದಾರೆ. 

ಇನ್ನು ವಿಪಕ್ಷದಲ್ಲಿರುವ ಜಗದೀಶ್‌ ಶೆಟ್ಟರ್ಅವರು 2004-2006 ಎರಡು ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ತದನಂತರದಲ್ಲಿ ಡಿ.ವಿ. ಸದಾನಂದ ಗೌಡಅವರು 2006-2010 ರ ತನಕ ಅಂದರೆ 4 ವರ್ಷಆಡಳಿತ ನಡೆಸಿದ್ದಾರೆ. ನಂತರ  ಕೆ.ಎಸ್.‌ ಈಶ್ವರಪ್ಪ ಅವರು  ಮತ್ತೋಮ್ಮೆ 2010-2013 ತನಕ ಅಂದರೆ 3 ವರ್ಷ 52 ದಿನ ಆಡಳಿತ ನಡೆಸಿದ್ದಾರೆ. ಇನ್ನು ಪ್ರಲ್ಹಾದ್‌ ಜೋಶಿ-2013-2016 ತನಕ ಅಂದರೆ 3ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. 

ನಂತರ ಮೂರನೆ ಬಾರಿ  ಬಿ.ಎಸ್.‌ ಯಡಿಯೂರಪ್ಪ ಅವರು 2016-2019 ತನಕ 3 ವರ್ಷ ಆಡಳಿತ ನಡೆಸಿದ್ದಾರೆ. ಇನ್ನು ನಳಿನ್‌ ಕುಮಾರ್‌ ಕಟೀಲ್ ಅವರು 2019- 2023 ಅಂದರೆ 4 ವರ್ಷಗಳ ಕಾಲ ರಾಜ್ಯಾಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ. ಇನ್ನು ಪ್ರಸ್ತುತ ಯಡಿೂರಪ್ಪನವರ ಮಗನಾದ ಹಾಗೂ ಬಿಜೆಪಿಯ ಮುಖಂಡ ರಾದ  ಬಿ.ವೈ. ವಿಜಯೇಂದ್ರಅವರು 2023 ಹಾಲಿ ರಾಜ್ಯಾಧ್ಯಕ್ಷರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.