ಅರ್ಜುನ್ ಜನ್ಯರಿಂದ ಅಮುಶ್ರೀಗೆ ಮೋಸ, ಅಸಲಿ ಮುಖ‌ ಹೊರಹಾಕಿದ ರಾಜೇಶ್ ಕೃಷ್ಣನ್

 | 
Uuu
ಕನ್ನಡದ ಜನಪ್ರಿಯ ಸಂಗೀತ ಕಾರ್ಯಕ್ರಮ ಸರಿಗಮಪ ಸೀಸನ್‌ 21 ಫಿನಾಲೆ ಹಂತ ತಲುಪಿದೆ. ಸ್ಪರ್ಧಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಇತ್ತೀಚೆಗೆ ಟಿಕೆಟ್‌ ಟು ಫಿನಾಲೆ ರೌಂಡ್‌ನಲ್ಲಿ ಒಬ್ಬರು ನೇರವಾಗಿ ಫೈನಲ್‌ ಅಂಗಳ ತಲುಪಿದ್ದರು. ಬಳಿಕ ನಡೆದ ಸೆಮಿಫೈನಲ್‌ ರೌಂಡ್‌ ಸೇರಿ ಅಂತಿಮವಾಗಿ ಆರು ಸ್ಪರ್ಧಿಗಳು ಫಿನಾಲೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಕಪ್‌ ಗೆಲ್ಲೋರು ಯಾರು ಅನ್ನೋ ಕುತೂಹಲ ಕೂಡ ಹೆಚ್ಚಾಗಿದ್ದು, ಎಲ್ಲರ ಚಿತ್ತ ಈ ಆರು ಸ್ಪರ್ಧಿಗಳತ್ತ ಇದೆ.
ಟಿಕೆಟ್‌ ಟು ಫಿನಾಲೆ ರೌಂಡ್‌ನಲ್ಲಿ ಬೀದರ್‌ನ ಶಿವಾನಿ ಹಾಗೂ ಉಡುಪಿಯ ಆರಾಧ್ಯ ರಾವ್ ನೇರವಾಗಿ ಆಯ್ಕೆಯಾಗಿದ್ದರು. ಮೇ 24 ಹಾಗೂ 25ರಂದು ನಡೆದ ಸೆಮಿ ಫೈನಲ್ನಲ್ಲಿ ರಶ್ಮಿ, ಬಾಳು ಬೆಳಗುಂದಿ, ದ್ಯಾಮೇಶ್, ಅಮೋಘ ವರ್ಷ ಅವರು ಕೂಡ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಈಗ ಫಿನಾಲೆಯಲ್ಲಿ ಶಿವಾನಿ, ರಶ್ಮಿ ಡಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ನಡುವೆ ಸಂಗೀತದ ಬಿಗ್‌ಫೈಟ್‌ ನಡೆಯಲಿದೆ.
ಇನ್ನು ಸೆಮಿಫೈನಲ್‌ನಲ್ಲಿ ಹಾಡಿದವರ ಪೈಕಿ ಲಹರಿ ಕೂಡ ಸೊಗಸಾಗಿ ಹಾಡಿದ್ದಾರೆ. ಆದರೆ ಅವರನ್ನು ಫೈನಲ್‌ಗೆ ಆಯ್ಕೆ ಮಾಡಿಲ್ಲ ಎಂದು ಅವರ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಈ ರೌಂಡ್‌ನಲ್ಲಿ ಅತ್ಯುತ್ತಮವಾಗಿ ಹಾಡಿದ ಲಹರಿಗೆ ಫಿನಾಲೆಗೆ ಅವಕಾಶ ಸಿಕ್ಕಿಲ್ಲ ಎಂದು ಹಲವರು ಆಕ್ಷೇಪ ಹೊರಹಾಕಿದ್ದಾರೆ. ಕೊನೆಯ ಪಕ್ಷ ಲಹರಿಯನ್ನು ಫೈನಲ್‌ ರೌಂಡ್‌ನಲ್ಲಿ ನೋಡುವ ಅವಕಾಶವೂ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಬಾರಿಯ ಸೀಸನ್‌ನಲ್ಲಿ ಎಲ್ಲ ಸ್ಪರ್ಧಿಗಳು ಕೂಡ ತಮ್ಮ ಗಾಯನದ ಮೂಲಕ ಮೋಡಿ ಮಾಡುತ್ತಿದ್ದು, ಕಪ್‌ ಗೆಲ್ಲೋದು ಯಾರು ಅನ್ನೋದೆ ಈಗ ಎಲ್ಲರಲ್ಲಿರುವ ಕುತೂಹಲ. ಅನೇಕರು ಆರಾಧ್ಯಾ ರಾವ್ ಈ ಬಾರಿ ವಿಜೇತರಾಗುತ್ತಾರೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಬಾಳು ಬೆಳಗುಂದಿ, ಶಿವಾನಿ ಅವರಿಗೂ ಕೂಡ ಅಪಾರ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಸರಿಗಮಪ ಫೈನಲ್‌ಗೆ ಕ್ಷಣಗಣನೆ ಶುರುವಾಗಿದ್ದು, ಸದ್ಯದಲ್ಲೇ ಈ ಸೀಸನ್‌ ವಿನ್ನರ್‌ ಯಾರು ಎನ್ನುವ ಕುತೂಹಲಕ್ಕೆ ತೆರೆಬೀಳಲಿದೆ. ಈ ಬಾರಿ ಸರಿಗಮಪ ಸೀಸನ್ 21 ಅನ್ನು ಒಟಿಟಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಈ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಫಿನಾಲೆ ಎಪಿಸೋಡ್ ಪ್ರಸಾರ ಕಾಣಲಿದ್ದು, ಕಪ್‌ ಯಾರ ಮುಡಿಗೇರಲಿದೆ ಎಂಬುದು ಕಾದು ನೋಡೋಣ..(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.