ಅರ್ಜುನ್ ಸರ್ಜಾ ಅವರ ಮುದ್ದಾದ ಮಗಳ ನಿಶ್ಚಿತಾರ್ಥ, ಮೇಘನಾ ರಾಜ್ ಯಾವ ರೀತಿ ಬಂದಿದ್ದಾರೆ ಗೊತ್ತಾ

 | 
Bshs

ಬಹುಭಾಷಾ ನಟ ಅರ್ಜುನ್‌ ಸರ್ಜಾ ಹಾಗೂ ಆಶಾರಾಣಿ ಪುತ್ರಿ ಐಶ್ವರ್ಯ ಅರ್ಜುನ್‌ ಮತ್ತು ತಮಿಳಿನ ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಜೋಡಿಯ ನಿಶ್ಚಿತಾರ್ಥ ನೆರವೇರಿದೆ. ಶುಕ್ರವಾರ ಚೆನ್ನೈನಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಅದ್ಧೂರಿ ಎಂಗೇಜ್‌ಮೆಂಟ್‌ ನಡೆದಿದೆ. 

ಇನ್ನೊಂದು ವಿಶೇಷ ಏನೆಂದರೆ, ಕರ್ನಾಟಕದ ಸಂಪ್ರದಾಯದಂತೆ, ಇಲ್ಲಿನ ಪುರೋಹಿತರೇ ಕನ್ನಡದಲ್ಲಿಯೇ ಜೋಡಿಯ ನಿಶ್ಚಿತಾರ್ಥ ಶಾಸ್ತ್ರ ಮುಗಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ ಸಹ ಭಾಗವಹಿಸಿದ್ದರು. ತಂಬಿ ರಾಮಯ್ಯ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮತ್ತು ಪೋಷಕ ನಟ. 

ಹಲವು ವರ್ಷಗಳಿಂದಲೂ ತಂಬಿ ರಾಮಯ್ಯ ತಮಿಳು ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಅಲ್ಲದೆ ಅರ್ಜುನ್ ಸರ್ಜಾ ಅವರ ಗೆಳೆಯ ಕೂಡಾ ಹೌದು. ಉಮಾಪತಿ ರಾಮಯ್ಯ ಹಾಗೂ ಐಶ್ವರ್ಯಾ ಸರ್ಜಾ ಹಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಇದೀಗ ಹಿರಿಯರ ಒಪ್ಪಿಗೆ ಪಡೆದು ವಿವಾಹ ಮಾಡಿಕೊಳ್ಳಲು ಸಜ್ಜಾಗಿದ್ದು ಇಂದು ಕುಟುಂಬದ ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. 

ಐಶ್ವರ್ಯಾ ಹಾಗೂ ಉಮಾಪತಿ ಅವರುಗಳು ಶೀಘ್ರವೇ ವಿವಾಹವಾಗಲಿದ್ದಾರೆ. ಮದುವೆ ಸಮಾರಂಭವೂ ಸಹ ಚೆನ್ನೈನಲ್ಲಿಯೇ ನಡೆಯುವ ಸಾಧ್ಯತೆ ಇದೆ. ಅದರೆ ಬೇಸರದ ಸಂಗತಿಯೆಂದರೆ ನಟಿ ಹಾಗೂ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಈ ಕಾರ್ಯಕ್ರಮದಲ್ಲಿ ಭಾಗಿ ಆಗದೆ ಇರುವುದು ಹೌದು ಅರ್ಜುನ ಸರ್ಜಾ ಅವರಿಗೆ ಚಿರು ಸರ್ಜಾ ಎಂದರೆ ತುಂಬಾ ಪ್ರೀತಿ ಹಾಗಾಗಿ ಅವರು ಇನ್ನಿಲ್ಲವಾದಮೇಲೆ ಮೇಘನಾ ರಾಜ್ ಪರ ಅವರು ನಿಂತಿದ್ದರು.

ಆದರೆ ಈಗ ಮೇಘನಾ ರಾಜ್ ಈ ಸಮಾರಂಭದಲ್ಲಿ ಭಾಗವಹಿಸಿಲ್ಲ ಎನ್ನುವುದು ಬೇಸರದ ಸಂಗತಿ ಆದರೆ ನಿನ್ನ ಮೇಘನಾ ರಾಜ್ ಈ ಕುರಿತು ಮಾತನಾಡಿರುವ ಹಿನ್ನೆಲೆ ಅವರು ನಟಿಸಿದ ತತ್ಸಮ ತದ್ಭವ ಸಿನೆಮಾ ತಮಿಳು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಮೋಷನ್ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದೆ. ತಪ್ಪದೇ ಮದುವೆಗೆ ಬರುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ