ಗಗನ ಬರುತ್ತಿದ್ದಂತೆ ಅಪ್ಪಿ ಮುದ್ದಾಡಿದ ಡ್ರೋನ್ ಪ್ರತಾಪ್, ಇಬ್ಬರ ನಡುವೆ ಕುಚುಕುಚು ಶುರು
Apr 20, 2025, 20:20 IST
|

ಒಬ್ಬರಿಗಿಂತ ಒಬ್ಬರು ಚೆನ್ನಾಗಿ ತಮಗೆ ನೀಡಿರುವ ಟಾಸ್ಕ್ ನಿಭಾಯಿಸಿ, ಮನರಂಜಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ, ಮಾತ್ರವಲ್ಲ ತೀರ್ಪುಗಾರರದಿಂದಲೂ ಮೆಚ್ಚುಗೆ ಗಳಿಸುತ್ತಿದ್ದಾರೆ.ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ಜೋಡಿಯೊಂದು ಸಖತ್ ಟ್ರೆಂಡಿಂಗ್ನಲ್ಲಿದೆ. ಅಲ್ಲದೇ ಈ ಸೀಸನ್ನಲ್ಲಿ ಇವರೇ ಗೆಲ್ಲೋದು ಅಂತ ಜೀ ವೀಕ್ಷಕರು ಭವಿಷ್ಯ ನುಡಿಯುತ್ತಿದ್ದಾರೆ.
ಅಂದ ಹಾಗೆ ಇವರಿಬ್ಬರು ಜೀ ಕನ್ನಡದಲ್ಲಿ ಈ ಹಿಂದೆ ಪ್ರಸಾರವಾದ ಬೇರೆ ಬೇರೆ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿ ಹೆಸರು ಗಳಿಸಿದವರು.ಹೌದು, ಈಗ ನಿಮಗೂ ಯಾರು ಅಂತ ಗೊತ್ತಾಗಿರಬಹುದು ಅಲ್ವಾ, ನಿಜ ನಾವು ಹೇಳ್ತಾ ಇರೋದು ಸುನಿಲ್–ಅಮ್ರಿಟಾ ಜೋಡಿ ಬಗ್ಗೆ. ಭರ್ಜರಿ ಬ್ಯಾಚುಲರ್ ಸೀಸನ್–2 ರ ಸ್ಪರ್ಧಿಗಳಾಗಿರುವ ಇವರಿಬ್ಬರ ಜೋಡಿ ಈಗ ಸಖತ್ ಟ್ರೆಂಡ್ ಸೃಷ್ಟಿಸುತ್ತಿದೆ. ಇವರ ಕೆಮಿಸ್ಟ್ರಿ ನೋಡುಗರಿಗೆ ತುಂಬಾನೇ ಇಷ್ಟವಾಗುತ್ತಿದೆ.
ಸರಿಗಮಪ ಸ್ಪರ್ಧಿಯಾಗಿದ್ದ ಸುನಿಲ್ ಹಾಗೂ ಮಹಾನಟಿ ಸ್ಪರ್ಧಿಯಾಗಿದ್ದ ಅಮ್ರಿಟಾ ಈಗ ಭರ್ಜರಿ ಬ್ಯಾಚುಲರ್ಸ್ ಮೂಲಕ ವೇದಿಕೆ ಮೇಲೆ ಜನರನ್ನು ರಂಜಿಸುತ್ತಿದ್ದಾರೆ. ಇವರ ನಡುವಿನ ಕೆಮಿಸ್ಟ್ರಿ ಸೂಪರ್ ಆಗಿದ್ದು, ಇವರೇ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವಿನ್ನರ್ ಆಗ್ತಾರೆ ಅಂತ ವೀಕ್ಷಕರು ಭವಿಷ್ಯ ನುಡಿಯುತ್ತಿದ್ದಾರೆ.ಬಹಳ ನಾಚಿಕೆ ಸ್ವಭಾವದವರಾದ ಸುನಿಲ್ ಇತ್ತೀಚಿನ ಸಂಚಿಕೆಯಲ್ಲಿ ಅಮ್ರಿಟಾ ಜೊತೆ ಮೈ ಚಳಿ ಬಿಟ್ಟು ಸ್ವಾತಿ ಮುತ್ತಿನ ಮಳೆ ಹನಿಯೇ ಹಾಡಿಗೆ ಹೆಜ್ಜೆ ಹಾಕಿದ್ದರು, ಇವರಿಬ್ಬರ ಡಾನ್ಸ್ ನೋಡಿರುವ ತೀರ್ಪುಗಾರರು ವಾವ್ ಎಂದಿದ್ದಾರೆ. ಮಾತ್ರವಲ್ಲ ಸುನಿಲನ ಕಾಲ ಎಳೆದು ಮಜಾ ತೆಗೆದುಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023