ಮನೆಯ ಟಿವಿಯಲ್ಲಿ ಪುನೀತ್ ರಾಜ್‍ಕುಮಾರ್ ಮುಖ ನೋಡಿ ಕಣ್ಣೀರಿಟ್ಟ ಅಶ್ವಿನಿ ಮೇಡಂ
ಚಂದನವನದಲ್ಲಿ ಕಳೆದ ಒಂದು ವರ್ಷದಿಂದ ಹೊಸಬರ ಹೊಸತನದ ಸಿನಿಮಾಗಳು ಸಖತ್ ಸದ್ದು ಮಾಡುತ್ತಿದೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಥಿಯೇಟರ್ಗೆ ಲಗ್ಗೆಯಿಟ್ಟು ಯಶಸ್ಸು ಗಳಿಸುವಲ್ಲಿ ಹೊಸಬರ ಪಾಲು ತುಸು ಹೆಚ್ಚಾಗುತ್ತಿದೆ. ಸದ್ಯ ಇದೇ ಸಾಲಿಗೆ ಮತ್ತೊಂದು ಸಿನಿಮಾ ಸೇರುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಹೌದು, ಅದೇ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಎಂಬ ಸಿನಿಮಾ.
ವಿಶಿಷ್ಟ ಟೈಟಲ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದು, ವರುಣ್ ಕುಮಾರ್ ಹಾಗೂ ಪ್ರಜ್ವಲ್ ಗೌಡ ನಿರ್ದೇಶಿಸಿದ್ದಾರೆ. ಅಜನೀಶ್ ಲೋಕನಾಥ್ ಇಂಪಾನ್ ಸಂಗೀತವಿದೆ. ಇದೊಂದು ಪಕ್ಕಾ ಹುಡುಗರ ಕಾಮಿಡಿ ಸಿನಿಮಾವಾಗಿದ್ದು, ಲಾಕ್ ಡೌನ್ ಮುಗಿದ ತಕ್ಷಣ ಮಾಡಿದ ಮೊದಲ ಚಿತ್ರವೂ ಹೌದು. ಇದಕ್ಕೆ ಪ್ರಮುಖ ಕಾರಣ ಬಿಡುಗಡೆ ಆಗಿರುವ ಸಿನಿಮಾದ ಒಂದು ತುಣುಕು.
ಪೋಸ್ಟರ್ ಬಿಡುಗಡೆ ಬಗ್ಗೆ ಚಿತ್ರತಂಡ ಮಾಡಿರುವ ಒಂದು ವಿಡಿಯೋ ಸ್ಯಾಂಡಲ್ವುಡ್ನಲ್ಲಿ ಈವರೆಗೆ ಯಾರೂ ಮಾಡಿಲ್ಲದಂತಿದೆ. ಇಂತಹ ಹೊಸ ಪ್ರಯತ್ನಕ್ಕೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಕೈ ಹಾಕಿತ್ತು. ಮೊನಾಲಿಸಾ ಸೇರಿದಂತೆ ಪ್ರಸಿದ್ಧ ಕಲಾತ್ಮಕ ಚಿತ್ರಗಳು ಪರಸ್ಪರ ಸಂಭಾಷಣೆ ನಡೆಸುತ್ತಿರುವಂತೆ ಮಾಡಿ ಪೋಸ್ಟರ್ ಅನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದ ಮಾಹಿತಿ ಬಿಚ್ಚಿಟ್ಟಿದೆ.
ಹೌದು ಸದಾಶಿವ ನಗರದ ದೇವಸ್ಥಾನದಲ್ಲಿ ಹೊಸ ಪೋಸ್ಟ್ರ್ ಬಿಡುಗಡೆಗೆಂದು ಅರ್ಚನೆ ಮಾಡಿಸಿ ಪುನೀತ್ ಬಿಡುಗಡೆ ಮಾಡಿದ್ದರು. ಈ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದ್ದು ಅದರಲ್ಲಿ ಮಾಡಲಾದ ಪುಟ್ಟ ವಿಡಿಯೋ ಒಂದಿದ್ದು ಅದನ್ನು ನೋಡಿ ಅಶ್ವಿನಿ ಪುನೀತ್ ರಾಜಕುಮಾರ್ ಕಣ್ಣೀರಿಟ್ಟಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.