ಮದುವೆಯಾಗದ ಅನುಶ್ರೀ ಅವತಾರ ಹೊರಹಾಕಿದ ಆಡಿಯೋ ರೆಕಾರ್ಡಿಂಗ್
Feb 21, 2025, 08:00 IST
|

ಅನುಶ್ರೀ ಅವರು ಈಗ ಸುದ್ದಿಯಲ್ಲಿದ್ದಾರೆ. ಸಂಪತ್ ಎಂಬುವವರು ತಾವ ಅನುಶ್ರೀ ಅವರ ತಂದೆ ಎಂದು ಹೇಳಿಕೊಂಡಿದ್ದಾರೆ. ಈಗ ಸಂಪತ್ಗೆ ಅನಾರೋಗ್ಯ ಕಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರನ್ನು ಶಿವಲಿಂಗಯ್ಯ ಎಂಬುವವರು ನೋಡಿಕೊಳ್ಳುತ್ತಿದ್ದಾರೆ. ಶಿವಲಿಂಗಯ್ಯ ಅವರು ಅನುಶ್ರೀ ಜತೆ ಮಾತನಾಡಿದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ.
ಈ ಆಡಿಯೋದಲ್ಲಿ ಅನುಶ್ರೀ ಹಾಗೂ ಶಿವಲಿಂಗಯ್ಯ ಪರಸ್ಪರ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಶಿವಲಿಂಗಯ್ಯ ಅವರು ಈ ಮೊದಲು ಅನುಶ್ರೀ ಅವರನ್ನು ಸಂಪರ್ಕಿಸೋಕೆ ಹಲವು ಬಾರಿ ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಈ ಬಗ್ಗೆಯೂ ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ ಶಿವಲಿಂಗಯ್ಯ. ಆ ಪೂರ್ತಿ ಆಡಿಯೋ ಎಲ್ಲೆಡೆಯೂ ಹರಿದಾಡುತ್ತಿದೆ.
ಇನ್ನು ಅನುಶ್ರೀ ನನ್ನ ಅಮ್ಮನೇ ನನಗೆ ಅಪ್ಪ.. ಹುಟ್ಟಿಸಿದಿರಿ ಅನ್ನುವ ಕಾರಣಕ್ಕೆ ಅಪ್ಪ-ಅಮ್ಮ ಆಗಿಬಿಟ್ಟಂತಲ್ಲ. ಮಕ್ಕಳ ಭವಿಷ್ಯದ ಬೆಳವಣಿಗೆ ಪೋಷಕರ ಬಹುದೊಡ್ಡ ಜವಾಬ್ದಾರಿ ಎಂದಿದ್ದಾರೆ.ಒಂದು ಹೆಣ್ಣು ನಿಮ್ಮನ್ನು ನಂಬಿ ಬಂದಿರುತ್ತಾಳೆ. ತವರಮನೆ ಬಿಟ್ಟು ಬರುತ್ತಾಳೆ. ಯಾವ ಸಂದರ್ಭದಲ್ಲೂ ಅವಳ ಕೈ ಬಿಡಬಾರದು. ಮಕ್ಕಳನ್ನು ಹುಟ್ಟಿಸಿ, ನಾನು ಮಕ್ಕಳನ್ನು ನೋಡಿಕೊಳ್ಳಲು ತಯಾರಿಲ್ಲ ಎಂದರೆ ಆಕೆ ಏನು ಮಾಡಬೇಕು ಎಂದಿದ್ದಾರೆ ಅನುಶ್ರೀ.
ಒಬ್ಬ ತಂದೆ ಹಿರೋ ತರ ಇರಬೇಕು. ಆದ್ರೆ ನಮ್ಮ ಅಪ್ಪ ಹಿರೋ ತರ ಇರಲಿಲ್ಲ.. ನನ್ನ ಅಮ್ಮನಿಗೆ ಒಳ್ಳೆಯ ಗಂಡನಂತೆ ಇದ್ರಾ ಇಲ್ವಾ ಅದು ನನಗೆ ಗೊತ್ತಿಲ್ಲ. ತಂದೆ ಬಿಟ್ಟು ಹೋದಾಗ ತಾಯಿ ಕಷ್ಟ ಪಟ್ಟ ದಿನಗಳ ಬಗ್ಗೆ ನನೆದು ಅನುಶ್ರೀ ಕಣ್ಣೀರು ಹಾಕಿದ್ದಾರೆ.ಇದೇ ಮೊದಲ ಬಾರಿ ಅನುಶ್ರೀ ತನ್ನ ತಂದೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಆದರೆ ಎಲ್ಲಿಯೂ ತಮ್ಮ ತಂದೆಯ ಹೆಸರು ಮತ್ತು ಗುರುತನ್ನು ಅನುಶ್ರೀ ಬಹಿರಂಗ ಪಡಿಸಿಲ್ಲ. ಇನ್ನು ಈ ಅಡಿಯೋ ಅಲ್ಲಿ ಕೂಡ ಅನುಶ್ರೀ ಖಡಕ್ ಆಗಿ ರಿಪ್ಲೈ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.