ಅಪ್ಪು ಬೆನ್ನಲ್ಲೇ ಚಿತ್ರರಂಗಕ್ಕೆ ಮತ್ತೊಂದು ಬರಸಿಡಿಲು, ಎದ್ದು ಬಿದ್ದು ಕಣ್ಣೀರಿಟ್ಟ ಶಿವಣ್ಣ

 | 
Gg

ಹೇಳದೆ ಕೇಳದೆ ಬರುವ ಸಾವು ನೀಡುವ ನೋವು ಅಷ್ಟಿಷ್ಟಲ್ಲ. ಹೌದು. ಹುಟ್ಟಿದವರೆಲ್ಲ ಸಾಯುತ್ತಾರೆ ಎಂದು ತಿಳಿದಿದ್ದರೂ ಸಾವನ್ನು ಸ್ವೀಕರಿಸುವ ಧೈರ್ಯ ನಮ್ಮಲ್ಲಿಲ್ಲ. ಹೌದು ಇದೀಗ ತಮಿಳು ನಟ ಅಜಿತ್ ಕುಮಾರ್ ಅವರ ತಂದೆ ಪಿ. ಸುಬ್ರಮಣಿಯಂ ಅವರು ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ನಿಧನರಾಗಿದ್ದಾರೆ. ಅವರಿಗೆ ನಟ ಅಜಿತ್ ಕುಮಾರ್, ಅನೂಪ್ ಕುಮಾರ್ ಮತ್ತು ಅನಿಲ್ ಕುಮಾರ್ ಎಂಬ ಮೂವರು ಮಕ್ಕಳಿದ್ದರು. 

ಅಜಿತ್ ತಂದೆ ನಿಧನಕ್ಕೆ ತಮಿಳು ಚಿತ್ರರಂಗ ಸಂತಾಪ ಸೂಚಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಅಜಿತ್ ಅಭಿಮಾನಿಗಳು ಕೂಡ ಸಂತಾಪ ಸೂಚಿಸಿದ್ದಾರೆ.
ಕಳೆದ ಜನವರಿಯಲ್ಲಿ ಅಜಿತ್ ಅವರ ತುನಿವು ಸಿನಿಮಾ ತೆರೆಕಂಡಿತ್ತು. ಅದಾದ ಬಳಿಕ ಫ್ಯಾಮಿಲಿಗೆ ಸಮಯ ನೀಡಿದ್ದ ಅಜಿತ್ ಅವರು, ಪತ್ನಿ ಶಾಲಿನಿ ಹಾಗೂ ಮಕ್ಕಳೊಂದಿಗೆ ಯುರೋಪ್ ಪ್ರವಾಸದಲ್ಲಿದ್ದರು. ಆದರೆ ಇದೀಗ ತಂದೆ ಸುಬ್ರಮಣಿಯಂ ನಿಧನದ ಸುದ್ದಿ ತಿಳಿದು, ಅವರು ಪ್ರವಾಸವನ್ನು ಮೊಟಕುಗೊಳಿಸಿ, ಚೆನ್ನೈಗೆ ವಾಪಸ್ ಆಗಿದ್ದರು. 

ಅಜಿತ್ ಕುಮಾರ್ ಅವರ ತಂದೆ ಸುಬ್ರಮಣಿಯಂ ಅವರು ಮೂಲತಃ ಮಲಯಾಳಿ. ಕೇರಳದ ಪಾಲಾಕ್ಕಾಡ್‌ನಲ್ಲಿ ಜನಿಸಿದ್ದ ಅವರು, ಆನಂತರ ಕುಟುಂಬದೊಂದಿಗೆ ಚೆನ್ನೈನಲ್ಲೇ ವಾಸವಾಗಿದ್ದರು. ಇನ್ನು, ಸುಬ್ರಮಣಿಯಂ ನಿಧನದ ಹಿನ್ನೆಲೆಯಲ್ಲಿ ಅವರ ಮಕ್ಕಳಾದ ಅನಿಲ್ ಕುಮಾರ್, ಅಜಿತ್ ಕುಮಾರ್ ಮತ್ತು ಅನೂಪ್ ಕುಮಾರ್ ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ನಮ್ಮ ತಂದೆ ಪಿ ಎಸ್ ಮಣಿ ಸುಬ್ರಮಣಿಯಂ ಅವರು ಮುಂಜಾನೆ ನಿಧನರಾಗಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು ಎಂದು ತಿಳಿಸಿದ್ದಾರೆ.

ನಟ ಅಜಿತ್ ತಂದೆ ಪಿ.ಸುಬ್ರಹ್ಮಣ್ಯಂ ಮೂಲತಹ 
ಕೇರಳದ ಪಾಲಕ್ಕಾಡ್ ಮೂಲದವರು. ಪಶ್ಚಿಮ ಬಂಗಾಳದ ಮೋಹಿನಿಯವರನ್ನು ಮದುವೆಯಾಗಿದ್ದರು. ಈ ದಂಪತಿಯ ಮೂರು ಗಂಡು ಮಕ್ಕಳಲ್ಲಿ ಅಜಿತ್​ ನಡುವಿನವರಾಗಿದ್ದಾರೆ. ಅಜಿತ್ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಅಪಾರ ಖ್ಯಾತಿ ಪಡೆದಿದ್ದಾರೆ. ಇನ್ನಿಬ್ಬರು ಮಕ್ಕಳು ಉದ್ಯಮ ಕ್ಷೇತ್ರದಲ್ಲಿದ್ದಾರೆ. ಇನ್ನು ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿ ಅಜಿತ್ ಗೆ ಧೈರ್ಯ ನೀಡಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.