ಭವ್ಯಾ ಗೌಡ ಮನೆಯಲ್ಲೂ ಮೋಸ ಮಾಡ್ತಾಳೆ, ಸ್ವಂತ ಅಕ್ಕನಿಂದ ತಂಗಿಗೆ ಬುದ್ದಿವಾದ
Jan 4, 2025, 11:00 IST
|
ಬಿಗ್ ಬಾಸ್ ಮನೆಯ ಸ್ಪರ್ಧಿ ಭವ್ಯಾ ಗೌಡ ಅವರು ಇತ್ತಿಚೆಗೆ ಮೋಸ ಮಾಡಿ ಕ್ಯಾಪ್ಟನ್ ಆದ ವಿಚಾರ ಎಲ್ಲೆಡೆ ಸದ್ದು ಮಾಡಿತ್ತು. ತನ್ನ ಜೊತೆಗಿದ್ದ ಗೆಳೆಯ ತ್ರಿವಿಕ್ರಮ್ ಅವರಿಗೂ ಭವ್ಯಾ ಗೌಡ ಮೋಸ ಮಾಡಿದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ರಜತ್ ಸ್ಪಷ್ಟ ಪಡಿಸಿದ್ದರು.
ಆದರೆ, ತ್ರಿವಿಕ್ರಮ್ ಅವರು ಭವ್ಯಾಳ ಮೋಸದಾಟಕ್ಕೆ ಇದುವರೆಗೂ ಪ್ರಶ್ನೆ ಮಾಡಿಲ್ಲ. ಇನ್ನು ಮೊನ್ನೆಯ ಕಿಚ್ಚನ ಪಂಚಾಯತಿಯಲ್ಲಿ ಸುದೀಪ್ ಅವರು ಭವ್ಯಾಳ ಮೋಸದಾಟಕ್ಕೆ ಸರಿಯಾಗಿ ಚಳಿಬಿಡಿಸಿದ್ದಾರೆ.
ಇನ್ನು ಭವ್ಯಾ ಅವರ ಮನೆಯಲ್ಲಿ ಭವ್ಯಾ ಅಕ್ಕ ಕೂಡ ತನ್ನ ತಂಗಿಯ ಮೋಸದಾಟದ ಬಗ್ಗೆ ಗರಂ ಆಗಿದ್ದಾರೆ. ನೀನು ನಿನ್ನ ಟ್ಯಾಲೆಂಟ್ ಮೂಲಕ ಗೆದ್ದು ಬಾ. ಅದು ಬಿಟ್ಟು ಮೋಸ ಮಾಡಿ ಗೆಲ್ಲುವ ಅವಶ್ಯಕತೆ ಇಲ್ಲ ಎಂದಿದ್ದಾರೆ.