ಹೊಸ ವೇದಿಕೆಯಿಂದ ಭವ್ಯಾ ಗೌಡ ಔಟ್, ಅನುಪಮ ಗೌಡ ಜೊತೆ ಜಡೆ ಜಗಳ
Feb 5, 2025, 17:51 IST
|

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳು ಸಖತ್ ಬ್ಯುಸಿಯಾಗಿದ್ದಾರೆ. ಅದರಲ್ಲೂ ಭವ್ಯಾ ಗೌಡ, ತ್ರಿವಿಕ್ರಮ್ ಅಭಿಮಾನಿಗಳನ್ನು ಭೇಟಿ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಆದ್ರೆ ಇದರ ಮಧ್ಯೆ ಭವ್ಯಾ ಗೌಡ ಅಭಿಮಾನಿಗಳಿಗೆ ಗೊಂದಲ ಶುರುವಾಗಿದೆ.ಹೌದು, ಬಿಗ್ಬಾಸ್ ಮನೆಯಲ್ಲಿ ಇದ್ದಾಗಲೇ ಸ್ಪರ್ಧಿಗಳಾಗಿದ್ದ ರಜತ್, ಹನುಮಂತು ಹಾಗೂ ಭವ್ಯಾ ಗೌಡಗೆ ಆಫರ್ ಒಂದು ಬಂದಿತ್ತು.
ಈ ಮೂವರು ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಅಧಿಕೃತವಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಘೋಷಣೆ ಮಾಡಿಲಾಗಿತ್ತು. ಆದ್ರೆ ಶನಿವಾರ ಹಾಗೂ ಭಾನುವಾರ ಪ್ರಸಾರವಾಗಿದ್ದ ಸಂಚಿಕೆಯಲ್ಲಿ ಭವ್ಯಾ ಗೌಡ ಬಂದಿರಲಿಲ್ಲ. ಬದಲಾಗಿ ಅನಿರೀಕ್ಷಿತವಾಗಿ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ನೀಡಲಾಗಿತ್ತು. ಆದ್ರೆ ಇದೀಗ ಭವ್ಯಾ ಗೌಡ ಈ ಆಫರ್ ರಿಜೆಕ್ಟ್ ಮಾಡಿಬಿಟ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನು ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಶೂಟಿಂಗ್ ಶುರುವಾಗುವ ಮುನ್ನವೇ ನನಗೆ ಆರೋಗ್ಯ ಸಮಸ್ಯೆ ಆಯ್ತು. ಹಾಗಾಗಿ ನಾನು ಹೋಗಲಿಲ್ಲ. ನಾನು ಬಿಗ್ ಬಾಸ್ ಶೋನಿಂದ ನಮ್ಮ ಮನೆಗೆ ಬಂದ ಮೇಲೆ ನನಗೆ ತುಂಬಾ ಜ್ವರ, ಕೆಮ್ಮು ಮತ್ತು ಶೀತ ಶುರುವಾಗಿತ್ತು. ಆರೋಗ್ಯ ಸರಿಯಾಗಿರಲಿಲ್ಲ. ಇದೇ ಸಮಯಕ್ಕೆ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ಶೂಟಿಂಗ್ ಶುರು ಮಾಡಿಬಿಟ್ಟರು. ನನಗೆ ಹುಷಾರಿಲ್ಲದ ಕಾರಣ ನಾನು ಆ ಶೂಟಿಂಗ್‌ನಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ' ಎಂದು ಖಾಸಗಿ ವೆಬ್‌ಸೈಟ್ ಸಂದರ್ಶನದಲ್ಲಿ ಭವ್ಯಾ ಗೌಡ ಮಾತನಾಡಿದ್ದಾರೆ.
ನಾನು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗದೇ ಇರುವುದಕ್ಕೆ ಆರೋಗ್ಯ ಸಮಸ್ಯೆ ಅಷ್ಟೇ ಕಾರಣ ಹೊರತು ಬೇರೇ ಏನೂ ಅಲ್ಲ. ಅಲ್ಲದೆ ನಾನು ಕೂಡ ಆ ಶೋನಲ್ಲಿ ಭಾಗಿಯಾಗಬೇಕು ಅಂತ ತುಂಬಾ ಟ್ರೈ ಮಾಡಿದ್ದೀನಿ. ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರದಲ್ಲಿ ಇರುವಾಗಲೇ ಅಂತಹದ್ದೊಂದು ಅವಕಾಶ ಹುಡುಕಿ ಬಂದಾಗ ಯಾರು ಬೇಡ ಅಂತ ಹೇಳುತ್ತಾರೆ ಯಾರು ಮಿಸ್ ಮಾಡಿಕೊಳ್ಳುವುದ್ದಕ್ಕೆ ಇಷ್ಟ ಪಡುತ್ತಾರೆ? ಈಗ ಮಿಸ್ ಆಗಿದೆ. ಪರ್ವಾಗಿಲ್ಲ ಮುಂದೆ ಬೇರೆಯದ್ದು ಮಾಡೋಣ ಬಿಡು ಅಂತ ನಾನೇ ಸುಮ್ನಾದೆ' ಎಂದು ಭವ್ಯಾ ಗೌಡ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.