ಬಿಗ್ಬಾಸ್ ಮನೆಯಲ್ಲಿ ದೊಡ್ಡ ಫೈ ಟ್, ಲಾಯರ್ ಜಗದೀಶ್ ವಿರುದ್ಧ ರೊಚ್ಚಿಗೆದ್ದ ಧನರಾಜ್ ಆಚಾರ್
Oct 3, 2024, 09:37 IST
|

ನಾಲಾಯಕ್ ಕಾಮಿಡಿ ಮಾಡ್ತೀರಿ ಅಂತ ಹೇಳ್ತಿದ್ದ ಹಾಗೆ ಮಾನಸಾ ಮತ್ತು ಲಾಯರ್ ಜಗದೀಶ್ ಮಧ್ಯೆ ಏಕವಚನದಲ್ಲಿ ವಾಕ್ಸಮರ ಜರುಗಿತು. ಲಾಯರ್ ಜಗದೀಶ್ ವಿರುದ್ಧ ತ್ರಿವಿಕ್ರಮ್ ಮತ್ತು ಉಗ್ರಂ ಮಂಜು ಉಗ್ರಾವತಾರ ತಾಳಿದರು.ನಾಮಿನೇಷನ್‌ನಿಂದ ಪಾರಾಗಲು ಸ್ವರ್ಗನಿವಾಸಿಗಳಿಗೆ ತಕ್ಕಡಿ ಭಾಗ್ಯ ಎಂಬ ಟಾಸ್ಕ್ ಅನ್ನು ‘ಬಿಗ್ ಬಾಸ್’ ಘೋಷಿಸಿದರು. ಇದರ ಅನುಸಾರ, ನಾಮಿನೇಟ್ ಆಗಿರುವ ಸ್ವರ್ಗನಿವಾಸಿಗಳು ತಮ್ಮ ತಮ್ಮ ತಕ್ಕಡಿಗಳು ಮರಳಿನಿಂದ ತುಂಬದಂತೆ ಕಾಪಾಡಿಕೊಳ್ಳುತ್ತಾ, ಉಳಿದವರ ತಕ್ಕಡಿಯನ್ನು ಮರಳಿನಿಂದ ತುಂಬಿಸಬೇಕು.
ಕೊನೆಯಲ್ಲಿ ಯಾರ ತಕ್ಕಡಿ ತುಂಬದೆ ಉಳಿಯುತ್ತದೋ.. ಅವರು ನಾಮಿನೇಷನ್‌ನಿಂದ ಸೇಫ್ ಆದಂತೆ. ಈ ಟಾಸ್ಕ್‌ನ ಉಸ್ತುವಾರಿ ಆಗಿದ್ದು ಧನರಾಜ್ ಆಚಾರ್. ಇನ್ನು ತಕ್ಕಡಿಗೆ ಮರಳು ತುಂಬಿಸುವ ವೇಳೆ ಲಾಯರ್ ಜಗದೀಶ್ ತಳ್ಳಿದ್ರಿಂದ ಯಮುನಾ ಕೆಳಗೆ ಬಿದ್ದರು. ಉಸ್ತುವಾರಿ ಧನರಾಜ್ ಆಚಾರ್ ಫೌಲ್ ಕೊಟ್ಟರು. ಗೇಮ್‌ನಿಂದ ಲಾಯರ್ ಜಗದೀಶ್ ಅವರನ್ನ ಧನರಾಜ್ ಆಚಾರ್ ಆಚೆ ಕೂರಿಸಿದರು.
ಮುಖವಾಡ ಹಾಕ್ಕೊಂಡು ಜೀವನ ಮಾಡ್ತಿದ್ದಾರೆ. ಒಬ್ಬ 16 ಜನರನ್ನು ಡಿಫೆಂಡ್ ಮಾಡ್ತಾನೆ. ಮೀಸೆ ಇಟ್ಟೋನು ಯಾರೇ ಇರ್ಬೋದು, ಇದುವರೆಗೆ ಬಿಟ್ಟಿಲ್ಲ. ನನಗೆ ಘನತೆ ಗೌರವ ಆಚೆ ಕಡೆ ಚೆನ್ನಾಗೇ ಇದೆ. ನನಗೆ ನಾನೇ ಬಿಗ್ಬಾಸ್. ನನ್ನನ್ನು ಹೊರಗೆ ಕಳಿಸೋದು ಬೆಸ್ಟ್ ಎಂದು ಹೇಳಿದ ಸಿಟ್ಟಿನಲ್ಲಿ ನಡೆದಿದ್ದಾರೆ ಲಾಯರ್ ಜಗದೀಶ್.ಬಹುತೇಕ ಎಲ್ಲರ ಜೊತೆ ಒಂದಲ್ಲ ಒಂದು ವಿಷಯಕ್ಕೆ ಜಗಳ ಮಾಡಿಕೊಂಡೇ ಬರುತ್ತಿರುವ ಲಾಯರ್ ಜಗದೀಶ್ ವಾರ ಮುಗಿಯುವುದರೊಳಗೆ ರಾಂಗ್ ಆಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025