ಬಿಗ್ ಬಾಸ್ ಬೆಡಗಿ ನಮ್ರತಾ ಗೌಡ ಆರೋಗ್ಯದಲ್ಲಿ ಏರುಪೇರು, ದಿಡೀರ್ ಆ,ಸ್ಪತ್ರೆಗೆ ದಾಖಲು
ಕಿರುತೆರೆ ನಟಿ, ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸ್ಪರ್ಧಿಯಾಗಿರೋ ಬೆಡಗಿ ನಮ್ರತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಫ್ಯಾನ್ಸ್ಗಳಿಗೆ ಇನ್ನೂ ಹತ್ತಿರವಾಗುತ್ತಿರುತ್ತಾರೆ.ಆದರೆ ನಟಿ ನಮ್ರತಾ ಗೌಡ ನಿನ್ನೆ ಶೇರ್ ಮಾಡಿಕೊಂಡ ಫೋಟೋ ನೋಡಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಅನಾರೋಗ್ಯಕ್ಕೆ ತುತ್ತಾದ ಕಾರಣ ನಟಿ ನಮ್ರತಾ ಗೌಡ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡಿದ್ದರು.
ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದರು. ಇನ್ನು ನಮ್ರತಾ ಗೌಡ ಅವರಿಗೆ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದರಂತೆ. ಹೀಗಾಗಿ ನಟಿ, ಬಿಗ್ಬಾಸ್ ಬೆಡಗಿ ನಮ್ರತಾ ಗೌಡ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇನೆ ಅಂತ ನ್ಯೂಸ್ ಫಸ್ಟ್ಗೆ ಮಾಹಿತಿ ನೀಡಿದ್ದಾರೆ.
ನಿನ್ನೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ನಮ್ರತಾ ಗೌಡ ಬೆಡ್ ಮೇಲೆ ಮಲಗಿಕೊಂಡಿದ್ದರು. ನಮ್ರತಾ ಗೌಡ ಅವರ ಪಕ್ಕದಲ್ಲಿ ತಾಯಿ ನಿಂತುಕೊಂಡಿದ್ದರು. ಅದೇ ಫೋಟೋವನ್ನು ಶೇರ್ ಮಾಡಿಕೊಂಡ ನಮ್ರತಾ ಗೌಡ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಈಗ ಹೆಚ್ಚು ವಿಶ್ರಾಂತಿ ಪಡೆದುಕೊಳ್ಳುತ್ತೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.
ಇದೇ ಫೋಟೋ ನೋಡಿದ ನೆಟ್ಟಿಗರು ಶೀಘ್ರದಲ್ಲಿ ಗುಣಮುಖರಾಗಿ ಎಂದು ಕಾಮೆಂಟ್ ಮಾಡಿದ್ದರು. ಸದ್ಯ ನಟಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಹೌದು ಒಂದಿಷ್ಟು ಹೊಸ ಶೂಟ್ ಗಳಿವೆ ಕೆಲಸವಿದೆ ಎಂದು ಇಡಿ ದಿನ ಅದರಲ್ಲೆ ಕಳೆದುಹೋಗಬೇಡಿ. ದೇಹವನ್ನು ಕಾಳಜಿ ಮಾಡಿ. ಅದು ನಿಮಗೆ ಒಂದಿಷ್ಟು ಒಳ್ಳೆಯದನ್ನು ಮಾಡುತ್ತದೆ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.