ಬಿಗ್ ಬಾಸ್ ಸೀಸನ್ 10ರ ಸ್ಫಧಿ೯ಗಳ ಲಿಸ್ಟ್ ಬಿಡುಗಡೆ! ನಿಮ್ಮ ಫೇವರಿಟ್ ಯಾರು ಕಾಮೆಂಟ್ ಮಾಡಿ

 | 
Bd

 ಸಾಕಷ್ಟು ಜನಪ್ರಿಯತೆ ಪಡೆದಿರುವ ಬಿಗ್‌ಬಾಸ್‌ ಶೋ ಒಂದು ಸೀಸನ್ ಮುಗಿಯುತ್ತಿದ್ದಂತೆ ಮತ್ತೆ ಹೊಸ ಸೀಸನ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. 9 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಗ್‌ ಬಾಸ್‌ ಶೋನಲ್ಲಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳೂ ಕೂಡ ಬಿಗ್‌ ಬಾಸ್‌ ಸ್ಪರ್ಧಿಗಳಾಗಿದ್ದರು.

ಹೌದು ಸೀಸನ್‌ 10 ರಲ್ಲಿ ಯಾರು ಬರಲಿದ್ದಾರೆ ಎನ್ನುವುದು ಎಲ್ಲರಿಗೂ ಕುತೂಹಲ ಹೆಚ್ಚಿಸುವ ವಿಚಾರವೇ. ಇನ್ನು ಸೀಸನ್‌ 9ರಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಓಟಿಟಿ ಮೂಲಕ ಪರಿಚಿತರಾಗಿದ್ದರು. ನಂತರ ಆಯ್ಕೆಯಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕೆಲವು ಮೂಲಗಳ ಪ್ರಕಾರ ಓಟಿಟಿ ಅಷ್ಟು ಓಡಲಿಲ್ಲ ಎನ್ನಲಾಗಿದೆ. ಆದ್ದರಿಂದ ಈ ಸೀಸನ್‌ 10ನಲ್ಲಿ ಸ್ಪರ್ಧಿಗಳು ಮನೆಯ ಟಿವಿಗೆ ನೇರವಾಗಿಯೇ ಬರಲಿದ್ದಾರೆ ಎನ್ನಲಾಗಿದೆ. 

ಸೆಪ್ಟೆಂಬರ್ ಮೂರನೇ ವಾರದಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಕಲರ್ಸ್ ಕನ್ನಡ ನಿರ್ಧರಿಸಿದೆ. ಇದಾದ ನಂತರ ಸೆಪ್ಟೆಂಬರ್ ಅಂತ್ಯಕ್ಕೆ ಬಿಗ್ ಬಾಸ್ ಶುರುವಾಗಲಿದೆ ಎನ್ನಲಾಗಿದೆ.

ಈ ಬಾರಿ ದೊಡ್ಡಮನೆಯಲ್ಲಿಕ ಮಿಂಚಲಿರುವ ಸ್ಪರ್ಧಿಗಳು ಅಂದರೆ ಬಿಗ್‌ಬಾಸ್‌ ಆಟಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಈ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್‌ಗೆ ಬರುವ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಯಾರೆಲ್ಲಾ ಈ ಬಾರಿ ಬಿಗ್‌ಬಾಸ್‌ಗೆ ಬರುವ ಸಾಧ್ಯತೆ ಇದೆ ನೋಡೋಣ. 

ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ, ಎಕ್ಸ್‌ಕ್ಯೂಸ್‌ ಮಿ ಸಿನಿಮಾ ಖ್ಯಾತಿಯ ಸುನೀಲ್ ರಾವ್, ನಾಗಿಣಿ 2 ಧಾರಾವಾಹಿಯ ಜೋಡಿ ನಿನಾದ್ ಹರಿತ್ಸ ಮತ್ತು ನಮ್ರತಾ ಗೌಡ, ದಿವಂಗತ ಬುಲೆಟ್ ಹಾಸ್ಯ ನಟ ಪ್ರಕಾಶ್ ಅವರ ಪುತ್ರ ರಕ್ಷಕ್, ರ‍್ಯಾಪರ್ ಸಿಂಗರ್ ಇಶಾನಿ, ಹುಚ್ಚು ಸಿನಿಮಾ ನಟಿ ರೇಖಾ, ನಟಿ ಆಶಾ ಭಟ್ ಮತ್ತು ರೀಲ್‌ಗಳಲ್ಲಿ ಖ್ಯಾತಿ ಪಡೆದಿರುವ ಭೂಮಿಕಾ ಬಸವರಾಜ್ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. 

ಅದೇನೇ ಇರಲಿ, ಆಡಿಷನ್ ನಡೆದು ಶೋ ಆರಂಭವಾದ ನಂತರ ದೊಡ್ಮನೆಗೆ ಯಾರು ಎಂಟ್ರಿ ಕೊಡುತ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. 
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.