ಹೆಂಡತಿ ಅವತಾರ ನೋಡಿ ಒಮ್ಮೇಲೆ ಬೆಚ್ಚಿಬಿದ್ದ ಬಿಗ್ ಬಾಸ್ ವಿನಯ್

 | 
Hji
ಬಿಗ್​ಬಾಸ್​ ಸೀಸನ್​ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್​ ಹೊರಕ್ಕೆ ಬರಲಿಲ್ಲ.  ಬಿಗ್​ಬಾಸ್​ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ.   ಅದರಲ್ಲಿಯೂ ಬಿಗ್​ಬಾಸ್ ವಿನ್ನರ್​ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ.  
ಅದೇ ರೀತಿ ಇದೀಗ ಬಿಗ್​ಬಾಸ್​ ಸೀಸನ್​ 10 ವಿನಯ್​ ಅವರು,  ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ.   ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್​ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಬಿಗ್​ಬಾಸ್​ನ ಕೆಲವು ಸ್ಪರ್ಧಿಗಳು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​ನ ವಿನಯ್​, ಕಾರ್ತಿಕ್​, ಸಂಗೀತಾ ಶೃಂಗೇರಿ ಹಾಗೂ ಡ್ರೋನ್​ ಪ್ರತಾಪ್​ ಕಾಣಿಸಿಕೊಂಡಿದ್ದಾರೆ.  ಇದೇ ವೇದಿಕೆಯ ಮೇಲೆ ಪರ್ಫಾಮ್​ ಮಾಡಿದ್ದಾರೆ. 
ಈ ಸಂದರ್ಭದಲ್ಲಿ ವಿನಯ್​ ಅವರಿಗೆ ಅಲ್ಲಿ ನೆರೆದಿದ್ದ ಯುವತಿರು ಕೆಲವೊಂದು ಪ್ರಶ್ನೆ ಕೇಳಿದ್ದಾರೆ. ನಿಮ್ಮ ಹೆಂಡ್ತಿಯನ್ನು ನೀವು ಅಷ್ಟೆಲ್ಲಾ ಲವ್​ ಮಾಡೋದು ಯಾಕೆ ಎಂದು ಯುವತಿಯೊಬ್ಬರು ಪ್ರಶ್ನಿಸಿದರು. ಈ ಪ್ರಶ್ನೆ ಕೇಳಿ ಎಲ್ಲರೂ ಗೊಳ್ಳೆಂದು ನಕ್ಕರು. ಇದಕ್ಕೆ ತಮಾಷೆಯಾಗಿ ಉತ್ತರ ಕೊಟ್ಟ ವಿನಯ್​ ಅವರು, ಲವ್​ ಮಾಡೋಕೆ ನನ್ನ ಹತ್ರ ಬೇರೆ ಆಪ್ಷನ್​ ಇಲ್ಲ, ಬೇರೆ ಆಪ್ಷನ್​ ಬೇಡ ಅಂತನೇ ಅವಳನ್ನು ಲವ್​ಮಾಡ್ತಿರೋದು ಎಂದ್ರು. 
ಆಗ ಆ ಯುವತಿ ನಿಮ್ಮಂಥ ಪತಿ ಎಲ್ಲರಿಗೂ ಸಿಗಲಿ ಎಂದು ಹೇಳಿದಾಗ, ವಿನಯ್​ ಫುಲ್​ ಖುಷ್​ ಆದ್ರು. ಇದೇ ವೇಳೆ ವಿನಯ್​ ಆನೆ ಬಂತೊಂದಾನೆಯನ್ನು ತಮ್ಮದೇ  ಆದ ಶೈಲಿಯಲ್ಲಿ ಹೇಳಿ ಮನರಂಜಿಸಿದರು. ಇನ್ನು ಮನೆಯಲ್ಲಿ ಅಕ್ಷತಾ ತಲೆ ಕೆದರಿಕೊಂಡು ಕೂತಿದ್ದನ್ನು ನೋಡಿದ ವಿನಯ್ ಭಯ ಪಟ್ಟಿದ್ದರಂತೆ. ಇನ್ಮುಂದೆ ಹೀಗೆ ಹೆದರಿಸಬೇಡ ಎಂದು ಕಾಲೆಳೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.